ನಟ ಪ್ರಭಾಸ್ ಗೆ ಕೂಡಿ ಬಂತು ಕಂಕಣ ಭಾಗ್ಯ, ಗೆಳೆಯನ ಮದುವೆ ರಹಸ್ಯ ಬಿಚ್ಚಿಟ್ಟ ರಾಮ್ ಚರಣ್

ಪ್ಯಾನ್ ಇಂಡಿಯಾ ಸ್ಟಾರ್, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದರೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್. ಡಾರ್ಲಿಂಗ್ ಮದುವೆ ಸುದ್ದಿಗಾಗಿ ಅಭಿಮಾನಿಗಳು ಮತ್ತು ಸಿನಿ ತಾರೆಯರು ಕಾತರದಿಂದ ಕಾಯ್ತಿದ್ದಾರೆ

First Published Jan 14, 2025, 11:22 AM IST | Last Updated Jan 14, 2025, 11:22 AM IST

ಪ್ಯಾನ್ ಇಂಡಿಯಾ ಸ್ಟಾರ್, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದರೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್. ಡಾರ್ಲಿಂಗ್ ಮದುವೆ ಸುದ್ದಿಗಾಗಿ ಅಭಿಮಾನಿಗಳು ಮತ್ತು ಸಿನಿ ತಾರೆಯರು ಕಾತರದಿಂದ ಕಾಯ್ತಿದ್ದಾರೆ. ಪ್ರಭಾಸ್​​ ಗೆ 45ರ ಹರೆಯ. ಸೋ ಪ್ರಭಾಸ್ ಮದುವೆ ಯಾವಾಗ ಅಂತ ಎಲ್ಲರೂ ಕೇಳ್ತಾನೇ ಇರ್ತಾರೆ. ಆದ್ರೆ ಡಾರ್ಲಿಂಗ್ ಮಾತ್ರ ಮದುವೆ ಬಗ್ಗೆ ಮಾತನಾಡಿದ್ರೆ ಸ್ಮೈಲ್ ಕೊಟ್ಟು ಸುಮ್ಮನಾಗ್ತಾರೆ.ಈ ಹಿಂದೆ ‘ಬಾಹುಬಲಿ’ ಪ್ರಾಜೆಕ್ಟ್ ಕಂಪ್ಲೀಟ್ ಆದ ಮೇಲೆ ಮದ್ವೆಯಾಗುವುದಾಗಿ ಹೇಳಿದ್ದ ಪ್ರಭಾಸ್, ನಂತರ ಆ ಬಗ್ಗೆ ಮಾತೇ ಆಡಿಲ್ಲ. ಆದರೆ ಅಭಿಮಾನಿಗಳು ಖುಷಿ ಪಡುವ ಸುದ್ದಿಯನ್ನ ಪ್ರಭಾಸ್ ಸ್ನೇಹಿತ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೊಟ್ಟಿದ್ದಾರೆ.