ರಾಮ್ ಚರಣ್ ಹಳೇ ಡ್ರಾಮ ವಿಡಿಯೋ ವೈರಲ್! ನಟನ ಕಾಲೇಜ್ ಡೇಸ್ ಹೇಗಿತ್ತು ಗೊತ್ತಾ..?

ಜ್ಯೂನಿಯರ್ ಮೆಗಾ ಸ್ಟಾರ್ ರಾಮ್ ಚರಣ್ ಈಗ ಟಾಲಿವುಡ್‌ನ ಟಾಪ್ ಸ್ಟಾರ್. 2007ರಲ್ಲಿ  ಚಿರುತ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದ ರಾಮ್ ಚರಣ್ ಪ್ರಖ್ಯಾತಿ ಗಳಿಸಿದ್ದು 2009ರಲ್ಲಿ ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಬಂದ ಮಗಧೀರ ಸಿನಿಮಾದಿಂದ.

First Published Jan 3, 2024, 10:04 AM IST | Last Updated Jan 3, 2024, 10:04 AM IST

ರಾಮ್ ಚರಣ್  ಹೈದರಾಬಾದ್‌ನ ಸೇಂಟ್ ಮೇರಿಸ್ ಕಾಲೇಜಿನಲ್ಲಿ ಓದಿದ್ದು, ಆದ್ರೆ ಜ್ಯೂನಿಯರ್ ಮೆಗಾ ಸ್ಟಾರ್‌ಗೆಅಭಿನಯ ರಕ್ತಗತವಾಗೆ ಬಂದಿದೆ. ಯಾಕಂದ್ರೆ ತಂದೆ ಚಿರಂಜೀವಿ ಹಾಗೂ ತಾತ ಅಲ್ಲು ರಾಮಲಿಂಗಯ್ಯ ಇಬ್ಬರು ಕಲಾವಿದರೇ. ಹೀಗಾಗಿ ರಾಮ್ ಚರಣ್(Ram Charan) ಕಾಲೇಜು ದಿನಗಳಲ್ಲೇ ರಂಗಭೂಮಿ ಕಲಾವಿದರಾಗಿದ್ರು. ಮುಂಬೈನಲ್ಲಿ ಕಿಶೋರ್ ನಮಿತ್ ಕಪೂರ್ ಅವರ ನಟನಾ ಶಾಲೆಯಲ್ಲಿ(Acting School) ಅಭಿನಯ ವ್ಯಾಸಂಗ ಮಾಡಿದ್ರು. ಈಗ ರಾಮ್ ಚರಣ್ ನಟನಾ ಅಭ್ಯಾಸ ಮಾಡುತ್ತಿದ್ದ ವಿಡಿಯೋ ತುಣುಕೊಂದು ವೈರಲ್ ಆಗಿದೆ. ಹ್ಯಾಂಡ್ಸಮ್ ಹಂಕ್ ಅಂತ ಕರೆಸಿಕೊಳ್ಳೋ ರಾಮ್ ಚರಣ್ ನಾಟನೆ ಕಲಿಯುತ್ತಿದ್ದ ಸಮಯದಲ್ಲಿ ಉದ್ದನೆಯ ಕೂದಲು, ಕ್ಲೀನ್ ಶೇವ್, ಬಡಕಲು ದೇಹದ ಕಾಣಿಸ್ತಾರೆ. ಈ ವಿಡಿಯೋ ನೋಡಿದ್ರೆ ಅರೇ ನಮ್ಮ ಮೆಗಾ ಪವರ್ ಸ್ಟಾರ್ ಇವ್ರೇನಾ.? ಅನ್ನೋ ಡೌಟ್ ಶುರುವಾಗುತ್ತೆ. ರಾಮ್ ಚರಣ್ ಈಗ ಟಾಲಿವುಡ್‌ನ(Tollywood) ಟಾಪ್ ಸ್ಟಾರ್. ಆರ್‌ಆರ್‌ಆರ್‌ ಸಿನಿಮಾ ಬಂದ ಮೇಲೆ ಚರಿ ಪ್ಯಾನ್ ಇಂಡಿಯಾ ಸ್ಟಾರ್ ಕೂಡ ಆಗಿದ್ದಾರೆ. ರಾಮ್ ಚರಣ್ ಸಧ್ಯ ಶಂಕರ್ ನಿರ್ದೇಶನದ 'ಗೇಮ್‌ ಚೇಂಜರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರೋ ವೀಡಿಯೋ ನೋಡಿದ ಅಭಿಮಾನಿಗಳು ನಮ್ಮ ಹೀರೋ ತನ್ನ ಸ್ವಂತ ಪರಿಶ್ರಮದಿಂದಲೇ ಇವತ್ತು ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಕಾಲರ್ ಎಗರಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  'ಕಾಟೇರ'ದಲ್ಲಿ ಹಿರಣ್ಯ ಕಶಿಪು ಡೈಲಾಗ್..! ಅಣ್ಣಾವ್ರ ಕಾಲ ದೂಳಿಗೂ ನಾನು ಸಮನಲ್ಲ ಎಂದ ದರ್ಶನ್..!

Video Top Stories