ವೆಟ್ಟೈಯಾನ್ ರಣಬೇಟೆಗೆ ಕೌಂಟ್​​ಡೌನ್ ಸ್ಟಾರ್ಟ್: ರಜನಿ ಎನ್​ಕೌಂಟರ್​ಗೆ ಬಿಗ್ ಬಿ ಕೌಂಟರ್..!

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ರಿಲೀಸ್​ಗೆ ಕೌಂಟ್​ಡೌಟ್​​ ಸ್ಟಾರ್ಟ್ ಆಗಿದೆ. ರಜನಿಕಾಂತ್-ಅಮಿತಾಭ್ ಅನ್ನೋ ಇಬ್ಬರು ಇಂಡಿಯನ್ ಸಿನಿ ಇಂಡಸ್ಟ್ರಿಯ ದಿಗ್ಗಜರ ಕಾಂಬೋ ಇರುವ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. 

Share this Video
  • FB
  • Linkdin
  • Whatsapp

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ರಿಲೀಸ್​ಗೆ ಕೌಂಟ್​ಡೌಟ್​​ ಸ್ಟಾರ್ಟ್ ಆಗಿದೆ. ರಜನಿಕಾಂತ್-ಅಮಿತಾಭ್ ಅನ್ನೋ ಇಬ್ಬರು ಇಂಡಿಯನ್ ಸಿನಿ ಇಂಡಸ್ಟ್ರಿಯ ದಿಗ್ಗಜರ ಕಾಂಬೋ ಇರುವ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ರಜನಿ ಇಲ್ಲಿ ಎನ್​ಕೌಂಟರ್ ಸ್ಪೆಷಲಿಸ್ಟ್ ಆಫೀಸರ್ ಆಗಿ ಮುಂಚಿದ್ದಾರೆ. ಈ ಹಂಟರ್​ನ ಎನ್​ಕೌಂಟರ್ ವರ್ಣಿಸೋ ಸಾಂಗ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ. ಈ ಬಾರಿಯ ದಸರಾದ ರಂಗು ಹೆಚ್ಚಿಸೋಕೆ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಅವತಾರದಲ್ಲಿ ಬರ್ತಾ ಇದೆ. ವೆಟ್ಟೈಯಾನ್ ಅಂದ್ರೆ ಬೇಟೆಗಾರ ಅಂತ ಅರ್ಥ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಜನಿ ಇಲ್ಲಿ ಅಕ್ಷರಶಃ ದುಷ್ಟರನ್ನ ಎನ್ ಕೌಂಟರ್ ಹೆಸರಲ್ಲಿ ಭೇಟೆ ಆಡೋ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಆದ್ರೆ ಎನ್ ಕೌಂಟರ್ ತಪ್ಪು ಅಂತ ಕೌಂಟರ್ ಕೊಡೋ ಅವರ ಸೀನಿಯರ್ ರೋಲ್ ನಲ್ಲಿ ಬಿಗ್ ಬಿ ಅಮಿತಾಭ್ ಇದ್ದಾರೆ. ಭಾರತೀಯ ಸಿನಿರಂಗದ ಇಬ್ಬರು ಲೆಜೆಂಡ್ ಗಳನ್ನ ಒಟ್ಟಿಗೆ ನೋಡೋದೇ ಒಂದು ರೀತಿ ಸ್ಪೆಷಲ್ ಟ್ರೀಟ್ ಅನ್ನಬಹುದು. ದಶಕಗಳ ಬಳಿಕ ಬರ್ತಿರೋ ಬಿಗ್ ಬಿ ಮತ್ತು ರಜನಿ ಜುಗಲ್ ಬಂದಿ ಈ ಸಿನಿಮಾದ ಬಿಗ್ ಹೈಲೈಟ್ ಅಂದ್ರೆ ತಪ್ಪಾಗಲ್ಲ. ಇನ್ನೂ ರಜನಿ , ಅಮಿತಾಭ್ ಅಷ್ಟೇ ಅಲ್ಲ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ಸೇರಿದಂತೆ ಹಲವು ಘಟಾನುಘಟಿ ಕಲಾವಿದರ ಬಳಗ ವೆಟ್ಟೈಯಾನ್ ನಲ್ಲಿದೆ. 

ಸೂರ್ಯ ನಟನೆಯ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಅದ್ದೂರಿಯಾಗಿ ಸಿನಿಮಾವನ್ನ ತೆರೆಗೆ ತಂದಿದೆ. ಸದ್ಯ ರಿಲೀಸ್ ಹೊಸ್ತಿಲಲ್ಲಿ ವೆಟ್ಟೈಯಾನ್ ಸಿನಿಮಾದ ಹಂಟರ್ ವಂಟರ್ ಅನ್ನೋ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಅನಿರುಧ್ ರವಿಚಂದರ್ ಈ ಮಾಸ್ ಸಾಂಗ್​ಗೆ ಮ್ಯೂಸಿಕ್ ಹಾಕಿದ್ದು, ವೆಟ್ಟೈಯಾನ್ ರಣಬೇಟೆಯನ್ನ ವರ್ಣಿಸುವಂತೆ ಮೂಡಿಬಂದಿದೆ. ಸಿದ್ದಾರ್ಥ್ ಬಸ್ರೂರು ವಾಯ್ಸ್​ನಲ್ಲಿರೋ ಈ ಹಾಡು ತಲೈವಾ ಫ್ಯಾನ್ಸ್​ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ವೆಟ್ಟೈಯಾನ್ ಭೇಟೆ ಸಖತ್ ರೋಚಕವಾಗಿರುತ್ತೆ ಅನ್ನೋ ಸೂಚನೆ ನೀಡಿದೆ. ಇದೇ ಅಕ್ಟೋಬರ್ 10ಕ್ಕೆ ವೆಟ್ಟೈಯಾನ್ ತೆರೆಗೆ ಬರಲಿದ್ದು ಬಾಕ್ಸ್​ಆಫೀಸ್​​ನಲ್ಲಿ ತಲೈವಾ ಬೇಟೆ ಶುರುವಾಗಲಿದೆ.

Related Video