Thalaivar 171 Teaser: ಕಿಕ್ ಕೊಡುತ್ತಿದೆ ಸೂಪರ್ ಸ್ಟಾರ್ 'ಕೂಲಿ' ಖದರ್! ಟೀಸರ್‌ನಲ್ಲೇ ಫ್ಯಾನ್ಸ್ ಜೋಶ್ ಹೆಚ್ಚಿಸಿದ ರಜನಿ..!

ರಜನಿಕಾಂತ್ ಈಸ್ ಬ್ಯಾಕ್ ವಿತ್ ಮೋರ್ ಪವರ್. ಯಸ್ ಸೂಪರ್ ಸ್ಟಾರ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಕೂಲಿಯಾಗಿ ಜೈಲರ್ ದರ್ಬಾರ್ ಶುರು ಮಾಡಿದ್ದಾರೆ. ತಲೈವಾ ಹಾಗೂ ಡೈನಾಮಿಕ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಹೊಸ ಆಟಕ್ಕೆ ಕೂಲಿ ಎಂಬ ಶೀರ್ಷಿಕೆ ಇಡಲಾಗಿದೆ. ಈ ಕೂಲಿಯ ಟೀಸರ್ ರಿಲೀಸ್ ಆಗಿದೆ.  

Share this Video
  • FB
  • Linkdin
  • Whatsapp

ರಜನಿ ಕೂಲಿಯಾಗಿ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ. ವಿಕ್ರಂ, ಕೈತಿ, ಮಾಸ್ಟರ್ ನಂತಹ ಬೊಂಬಾಟ್ ಸಿನಿಮಾಗಳನ್ನು ಕೊಟ್ಟಿರುವ ಲೋಕೇಶ್ ಫರ್ ದಿ ಫಸ್ಟ್ ಟೈಮ್ ಪಡೆಯಪ್ಪನ ಜೊತೆ ಕೈ ಜೋಡಿಸಿದ್ದಾರೆ. ಹೀಗಾಗಿ ಈ ಕ್ರೇಜಿ ಕಾಂಬೋದ ಮೇಲೆ ಕುತೂಹಲ ಹೈ ಆಗಿದೆ. ಮಾಸ್ ಅವತಾರ ತಾಳಿರುವ ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಪುಂಡರನ್ನು ಹೆಡೆಮುರಿ ಕಟ್ಟುವ ಸ್ಟೈಲ್, ಮ್ಯಾನರಿಸಂ ಫ್ಯಾನ್ಸ್ ಜೋಶ್ ಹೆಚ್ಚಿಸಿದೆ. ಚಿಂದಿ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಕೂಲಿ ಬಂಗಾರದ ನಾಣ್ಯ, ಚಿನ್ನದ ಚೈನಲ್ಲಿಯೇ ವಿರೋಧಿಗಳನ್ನು ಕೂಲ್ ಆಗಿ ಬೇಟೆಯಾಡಿದ್ದಾರೆ.ತಲೈವಾ ಆಕ್ಟಿಂಗ್, ಲೋಕೇಶ್ ಟೇಕಿಂಗ್, ಅನಿರುದ್ಧ್ ಟ್ಯೂನ್ ಕೂಲಿ ಟೈಟಲ್ ಟೀಸರ್(Coolie Title Teaser) ತೂಕ ಹೆಚ್ಚಿಸಿದೆ. ಕೂಲಿ ಗೋಲ್ಡ್ ಸ್ಮಗ್ಲಿಂಗ್ ಕಥೆಯ ಸಿನಿಮಾ. ವಿಕ್ರಂ ಸಿನಿಮಾದಲ್ಲಿ ಡ್ರಗ್ ಮಾಫಿಯಾ ಹಿಂದೆ ಬಿದ್ದಿದ್ದ ನಿರ್ದೇಶಕ ಲೋಕೇಶ್ ಈ ಭಾರಿ ಗೋಲ್ಡ್ ಸ್ಮಗ್ಲಿಂಗ್ ಸ್ಟೋರಿ ಹೇಳುತ್ತಿದ್ದಾರೆ. 1983ರಲ್ಲಿ ತೆರೆಗೆ ಬಂದ ಅಮಿತಾಬ್ ನಟನೆಯ ಹಿಂದಿ ಚಿತ್ರಕ್ಕೆ ಕೂಲಿ ಎಂಬ ಟೈಟಲ್ ಇಡಲಾಗಿತ್ತು. 1993ರಲ್ಲಿ ರಿಲೀಸ್ ಆಗಿದ್ದ ಶರತ್ ಕುಮಾರ್ ಹಾಗೂ ಮೀನಾ ನಟನೆಯ ಚಿತ್ರಕ್ಕೂ ಕೂಲಿ ನಂಬರ್ 1 ಎಂಬ ಶೀರ್ಷಿಕೆ ಇತ್ತು. ಈಗ ಲೆಟೆಸ್ಟ್ ಆಗಿ ರಜನಿಕಾಂತ್ ಕೂಲಿಯಾಗಿ(Coolie Movie) ಬರುತ್ತಿದ್ದಾರೆ. ಈ ಕೂಲಿ ತಮಿಳು ಜೊತೆಗೆ ಹಿಂದಿ, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬರಲಿದೆ. ರಜನಿಕಾಂತ್ 171ನೇ ಸಿನಿಮಾ ಕೂಲಿಗೆ ಜೈಲರ್ ಚಿತ್ರ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಕೋಟಿ ಕೋಟಿ ಹಣ ಸುರಿದಿದ್ದು 2025ಕ್ಕೆ ತೆರೆಗೆ ತೆರಲು ಪ್ಲಾನ್ ಆಗಿದೆ. 

ಇದನ್ನೂ ವೀಕ್ಷಿಸಿ: Aishwarya Rajeshin: ಪದ್ಮಾವತಿ ರಮ್ಯಾ ಜಾಗಕ್ಕೆ ಬಂದ್ಲು ತಮಿಳು ಬ್ಯೂಟಿ! ಗಬ್ರು ಸತ್ಯ ಡಾಲಿಗೆ 'ದುರ್ಗಿ'ಯಾದ ಐಶ್ವರ್ಯ ರಾಜೇಶ್!

Related Video