Aishwarya Rajesh: ಪದ್ಮಾವತಿ ರಮ್ಯಾ ಜಾಗಕ್ಕೆ ಬಂದ್ಲು ತಮಿಳು ಬ್ಯೂಟಿ! ಗಬ್ರು ಸತ್ಯ ಡಾಲಿಗೆ 'ದುರ್ಗಿ'ಯಾದ ಐಶ್ವರ್ಯ ರಾಜೇಶ್!

ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ಇನ್ಮುಂದೆ ನೆನಪು ಮಾತ್ರ. ರಮ್ಯಾ ಬಿಟ್ಟು ಹೋದ ಜಾಗಕ್ಕೆ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತಮಿಳು ನಟಿ ಐಶ್ವರ್ಯ ರಾಜೇಶ್ ರಮ್ಯಾ ನಟಿಸಬೇಕಿದ್ದ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. 

Share this Video
  • FB
  • Linkdin
  • Whatsapp

ರಮ್ಯಾ(Ramya) ಮಾಡಬೇಕಿದ್ದ ದುರ್ಗಿ ರೋಲ್ ಅನ್ನ ಐಶ್ವರ್ಯ ಮಾಡುತ್ತಿದ್ದಾರೆ. ಉತ್ತರ ಕಾಂಡದಲ್ಲಿ ಡಾಲಿ ಧನಂಜಯ್(Dhananjay) ಗಬ್ರು ಸತ್ಯನಾಗಿ ನಟಿಸುತ್ತಿದ್ದಾರೆ. ಡಾಲಿಗೆ ಪೇರ್ ಆಗಿ ದುರ್ಗಿಯಾಗಿದ್ದಾರೆ ಐಶ್ವರ್ಯ ರಾಜೇಶ್(Aishwarya Rajesh). ರೋಹಿತ್ ಪದಕಿ ನಿರ್ದೇಶನದ ಈ ಸಿನಿಮಾವನ್ನ ಕೆಆರ್ಜಿ ಬ್ಯಾನರ್ನಲ್ಲಿ ಕಾರ್ತಿಕ್ ಗೌಡ ಹಾಗು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಉತ್ತರ ಕಾಂಡ ಸಿನಿಮಾ(Uttara kanda movie) ಸ್ಟಾರ್ ಕಲಾವಿದರಿಂದ ತುಂಬಿ ಕೊಂಡಿದೆ. ಹಿರಿಯ ನಟಿ, ಉಮಾಶ್ರೀ ಉತ್ತರಕಾಂಡದಲ್ಲಿ ಪಂಡರಿ ಬಾಯಿ ರೋಲ್ ಮಾಡುತ್ತಿದ್ದಾರೆ. ರಂಗಾಯಣ ರಘು ಬಂಡೆ ಕಾಕಾ ಪಾತ್ರದಲ್ಲಿ ಮಿಂಚಿದ್ರೆ ಪಾಟೀಲ ರೋಲ್ನಲ್ಲಿ ನಿರ್ದೇಶಕ ಯೋಗರಾಹ್ ಭಟ್ ಬಣ್ಣ ಹಚ್ಚುತ್ತಿದ್ದಾರೆ. ಮೊನ್ನೆಯಷ್ಟೇ ನಟ ದೂದ್ ಪೇಡಾ ದಿಗಂತ್ ಉತ್ತರಕಾಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಿರ್ಚಿ ಮಲ್ಲಿಗೆ ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿನ ಅವರ ಖಡಕ್ ಲುಕ್ ಮೂಲಕ ಕುತೂಹಲ ಕೆರಳಿಸಿದ್ದಾರೆ. ನಟಿ ಚೈತ್ರ ಆಚಾರ್ ಉತ್ತರಕಾಂಡದಲ್ಲಿ ಲಚ್ಚಿ ರೋಲ್ ಮಾಡುತ್ತಿದ್ದಾರೆ. ಸದ್ಯ ಉತ್ತರ ಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್ ಕೂಡ ಆರಂಭ ಆಗಿದೆ. 

ಇದನ್ನೂ ವೀಕ್ಷಿಸಿ: ರಾಮಾಯಣದ ಬಗ್ಗೆ ಮೊದಲ ಭಾರಿಗೆ ಬಾಯ್ಬಿಟ್ಟ ಯಶ್! ಭಾರತೀಯ ಸಂಸ್ಕೃತಿ ಜಗತ್ತಿಗೆ ತಿಳಿಸಲು ಈ ಸಿನಿಮಾಗೆ ಬಂದ್ರಂತೆ ನಟ!

Related Video