'ಕೊಟೇಶನ್ ಗ್ಯಾಂಗ್'ನಲ್ಲಿ ಸನ್ನಿ ಲಿಯೋನ್-ಪ್ರಿಯಾಮಣಿ: ಮೇಕಪ್ ಕಿಟ್‌ಗೆ ಕಿಕ್ ಔಟ್..ಡಿ ಗ್ಲಾಮರ್‌ನಲ್ಲಿ ಸನ್ನಿ-ಪ್ರಿಯಾ..!

ಸನ್ನಿ ಲಿಯೋನ್ ಈ ಹೆಸರು ಕೇಳಿದ್ರೆ ಸಾಕು ಪಡ್ಡೆ ಹೈಕ್ಳ ಮೈಯಲ್ಲಿ ಹುಳ ಬಿಟ್ಟಂಗಾಗಿಬಿಡುತ್ತೆ. ಆಕೆಯ ಮಾದಕ ಮೈಮಾಟ, ಕೊಲ್ಲುವಂತ ಆ ಕೊಲ್ಮಿಂಚಿನ ನೋಟ. ಅಬ್ಬಬ್ಬಾ ಆಕೆಯ ಬಗ್ಗೆ ವರ್ಣಿಸ್ತಾ ಹೋದ್ರೆ ಹೊಸ ಗ್ರಂಥನೆ ಬರಿಬಹುದೆನೋ. ನೀಲಿ ಸಾಮಾಜ್ಯದಿಂದ ಡೈರೆಕ್ಟ್ ಬಾಲಿವುಡ್ ಅಂಗಳಕ್ಕೆ ಬಂದ ಸನ್ನಿ ಅನ್ನೋ ಈ ಸುಂದರಿ ಹವಾ ಕ್ರಿಯೇಟ್ ಮಾಡಿದ್ದು ಸುಳ್ಳಲ್ಲಾ ಬಿಡಿ.

Share this Video
  • FB
  • Linkdin
  • Whatsapp

ಸನ್ನಿ ಲಿಯೋನ್ ಭಾರತಕ್ಕೆ ಬಂದು ದಶಕವೇ ಉಳಿಸಿದೆ. ಮೊದ ಮೊದಲು ಇಲ್ಲೂ ಬೇಬಿ ಡಾಲ್ ಆಗಿ ಮನಸೋರೆಗೊಂಡ ಸನ್ನಿ ಲಿಯೋನ್(Sunny Leone ) ಈಗಂತೂ ಕಂಪ್ಲಿಟ್ ಬದಲಾಗಿದ್ದಾರೆ. ಈ ನೆಲದ ಮಣ್ಣು ಆಕೆಯನ್ನ ಅದೆಷ್ಟು ಬದಲಾಯಿಸಿದೆ ಅನ್ನೋದನ್ನ ನೀವೇ ಕಣ್ಣಾರೆ ಕಂಡಿದ್ದೀರಾ. ಅಪ್ಪಟ ಭಾರತೀಯ ನಾರಿಯಾಗಿದ್ದಾರೆ. ಇನ್ನು ಆಕೆಯ ಸಿನಿಮಾ ಆಯ್ಕೆಗಳ ಛಹರೆ ಸಹ ಬದಲಾಗಿದೆ. ಅದಕ್ಕೀಗ ಸಿಕ್ಕಿರೋ ಬೆಸ್ಟ್ ಎಕ್ಸಾಂಪಕ್ ಕೊಟೇಶನ್ ಗ್ಯಾಂಗ್ (Quotation Gang). ಸನ್ನಿ ಲಿಯೋನ್ ನಟನೆಯ ಕೊಟೇಶನ್ ಗ್ಯಾಂಗ್ ಟ್ರೈಲರ್ ರಿಲೀಸ್(trailer released) ಆಗಿದೆ. ಇಲ್ಲಿ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಸನ್ನಿ ಲಿಯೋನ್ ಜೊತೆ ಹಲ್‌ಚಲ್ ಎಬ್ಬಿಸ್ತಿರೋದು ನಮ್ಮ ಕನ್ನಡತಿ ಪ್ರಿಯಾಮಣಿ(Priyamani). ದಕ್ಷಿಣದಿಂದ ಉತ್ತರದವರೆಗೆ ಪ್ರಿಯಾಮಣಿಗೆ ಅಭಿಮಾನಿಗಳಿದ್ದರೆ, ಸನ್ನಿ ಲಿಯೋನ್‌ಗೆ ದೆಹಲಿಯಿಂದ ಮಂಡ್ಯದವರೆಗೆ ಅಭಿಮಾನಿಗಳಿದ್ದಾರೆ. ಇಂತಹ ಇಬ್ಬರು ನಾಯಕಿಯರು ಈಗ ಒಂದೇ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸನ್ನಿ ಲಿಯೋನ್ ಪ್ರಿಯಾಮಣಿ ಈ ಸಿನಿಮಾದಲ್ಲಿ ಮೇಕಪ್ ಕಿಟ್‌ನ ಕಿಕ್ ಔಟ್ ಮಾಡಿದ್ದಾರೆ. ತುಂಬಾ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರವನ್ನೇ ಆವಾಹನೆ ಮಾಡಿಕೊಂಡಂತೆ ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ ಇಲ್ಲಿ ಆಕ್ಟ್ ಮಾಡಿದ್ದಾರೆ. ಇವರ ಈ ಹಾವ-ಭಾವ-ವೇಷ-ಭೂಷಣ ಅನೇಕರಿಗೆ ದಂಡು ಪಾಳ್ಯ ಗ್ಯಾಂಗ್ನ್ನೂ ನೆನಪಿಸುತ್ತಿದೆ. ಹಾಗಂಥ ಇದಕ್ಕೂ ಅದಕ್ಕೂ ಸಂಬಂಧ ಇಲ್ಲ. ಇಲ್ಲಿ ಹಣದ ಮೋಹ ಇದೆ. ದಾರಿ ತಪ್ಪಿದ ಶ್ರೀಮಂತರ ಮಗಳ ಕಥೆ ಇದೆ. ಸೇಡು ಪ್ರತಿಕಾರದ ಕಿಚ್ಚಿದೆ.

ಇದನ್ನೂ ವೀಕ್ಷಿಸಿ: ಪ್ರಭಾಸ್ ಕಲ್ಕಿ ಉಪ್ಪಿಯ ಯುಐಗು ಇದೆಯಾ ಲಿಂಕ್..? ಕಲ್ಕಿ ನೋಡಿದವರು ಯುಐ ಬಗ್ಗೆ ಮಾತನಾಡುತ್ತಿರೋದೇಕೆ..?

Related Video