Pushpa 2: ಪುಷ್ಪ 2ನಿಂದ ಬಂತು ಬೆಂಕಿ ಬಿರುಗಾಳಿಯಂತ ನ್ಯೂಸ್! ಕೇವಲ ಅರ್ಧಗಂಟೆಗೆ 50 ಕೋಟಿ ಸುರಿದ ನಿರ್ಮಾಪಕರು!

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಪಾರ್ಟ್ 1 ಇಡೀ ಭಾರತೀಯ ಚಿತ್ರರಂಗದಲ್ಲೇ ಬಾರೀ ಸದ್ದು ಮಾಡಿತ್ತು .‘ಪುಷ್ಪ’ ಸಿನಿಮಾ 2021ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿ ಬರೋಬ್ಬರಿ 300 ಕೋಟಿ ರೂಪಾಯಿ ಕಲೆಕ್ಟ್‌ ಮಾಡಿತ್ತು. ಅಲ್ಲು ಅರ್ಜುನ್‌ನನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದಲ್ಲದೆ ರಾಷ್ಟ್ರ ಪ್ರಶಸ್ತಿಯನ್ನೂ ಅಲ್ಲೂ ಅರ್ಜುನ್ ಪಡೆದರು.

Share this Video
  • FB
  • Linkdin
  • Whatsapp

ಇದೀಗ ಪುಷ್ಪ 2 ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಒಬ್ಬ ಸ್ಟಾರ್‌ ನಟ ತನ್ನ ಇಮೇಜನ್ನು ಬಿಟ್ಟು ಕತೆಗೆ ಪಾತ್ರಕ್ಕೆ ತಕ್ಕಂತೆ ತನ್ನ ಇಡೀ ಬಾಡಿಲಾಂಗ್ವೇಜ್ ಬದಲಾಯಿಸಿಕೊಂಡು ನಟಿಸೋದು ಅಂದ್ರೆ ಸುಮ್ನೆ ಅಲ್ಲಾ. ಅಲ್ಲೂ ಅರ್ಜುನ್ ಪುಷ್ಪ2(Pushpa 2) ನಿರ್ಮಾಪಕರು ಮೇಕಿಂಗ್‌ನಲ್ಲೂ(Making) ಕೂಡ ತಗ್ಗೇದೇಲೆ ಎನ್ನುತ್ತಿದ್ದಾರೆ.. ಕೇವಲ ಅರ್ಧಗಂಟೆಗೆ 50 ಕೋಟಿ ಸುರಿಯೋಕೆ ರೆಡಿಯಾಗಿದ್ದಾರೆ ಪುಷ್ಪ 2 ನಿರ್ಮಾಪಕರು. ಅಲ್ಲು ಅರ್ಜುನ್(Allu Arjun) ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ನಟನೆಯ ‘ಪುಷ್ಪ 2’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾನ ಅಂದುಕೊಂಡ ದಿನಾಂಕದಂದು ರಿಲೀಸ್ ಮಾಡಬೇಕು ಎಂಬ ನಿಟ್ಟಿನಲ್ಲಿ ನಿರ್ದೇಶಕ ಸುಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಈಗ ಸಿನಿಮಾ ಬಗ್ಗೆ ಭರ್ಜರಿ ಅಪ್ಡೇಟ್ ಒಂದು ಸಿಕ್ಕಿದೆ. ಈ ಚಿತ್ರದ ಒಂದು ಪ್ರಮುಖ ದೃಶ್ಯಕ್ಕೆ ತಂಡ ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಇದು ಸಿನಿಮಾಗೆ ಮೈನ್ ಟ್ವಿಸ್ಟ್ ಕೊಡೊ ಧೃಶ್ಯವಾಗಿದೆ. ಬಜೆಟ್ ವಿಚಾರದಲ್ಲಿ ಮೈತ್ರಿ ಮೂವೀ ಮೇಕರ್ಸ್ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ ಅನ್ನೋದಕ್ಕೆ ಇದೇ ಉದಾಹರಣೆಯಾಗಿದೆ.

ಇದನ್ನೂ ವೀಕ್ಷಿಸಿ: Today Horoscope: ಇಂದು ನರಸಿಂಹಸ್ವಾಮಿ ಆರಾಧನೆ ಮಾಡಿ..ಇದರಿಂದ ಸಿಗುವ ಫಲಗಳೇನು ಗೊತ್ತಾ ?

Related Video