Asianet Suvarna News Asianet Suvarna News

ಆದಿಪುರುಷ್ ಸೋಲಿನ ಬೆನ್ನಲ್ಲೇ ಪ್ರಭಾಸ್ ಕಣ್ಮರೆ: ಪ್ರಶಾಂತ್ ನೀಲ್ ಮೇಲೆ ಹೆಚ್ಚಿದ ಒತ್ತಡ

ಆದಿಪುರುಷ್ ಸಿನಿಮಾ‌ಗೆ ಭಾರಿ ವಿರೋಧ ಮತ್ತು ಟ್ರೋಲ್ ಹೆಚ್ಚಾಗುತ್ತಿದ್ದಂತೆ ನಟ ಪ್ರಭಾಸ್ ಸಿನಿಮಾ ಪ್ರಚಾರ ಕಾರ್ಯ ನಿಲ್ಲಿಸಿಬಿಟ್ಟಿದ್ದಾರಂತೆ. ಯಾರ ಕಣ್ಣಿಗೂ ಬೀಳದೆ ಸೈಲೆಂಟ್ ಆಗಿದ್ದಾರೆ.

First Published Jun 18, 2023, 5:06 PM IST | Last Updated Jun 18, 2023, 5:06 PM IST

ಆದಿಪುರುಷ್ ಸಿನಿಮಾ‌ಗೆ ಭಾರಿ ವಿರೋಧ ಮತ್ತು ಟ್ರೋಲ್ ಹೆಚ್ಚಾಗುತ್ತಿದ್ದಂತೆ ನಟ ಪ್ರಭಾಸ್ ಸಿನಿಮಾ ಪ್ರಚಾರ ಕಾರ್ಯ ನಿಲ್ಲಿಸಿಬಿಟ್ಟಿದ್ದಾರಂತೆ. ಯಾರ ಕಣ್ಣಿಗೂ ಬೀಳದೆ ಸೈಲೆಂಟ್ ಆಗಿದ್ದಾರೆ. ಚಿತ್ರದ ರಿಲೀಸ್ ದಿನವೇ ಪ್ರಭಾಸ್ ಕಾಣೆಯಾಗಿದ್ದಾರೆ. ಎಲ್ಲೋ ಪ್ರೈವೇಟ್ ಜಾಗದಲ್ಲಿ ತಂಗಿದ್ದಾರೆನ್ನಲಾಗಿದೆ. ಇತ್ತ ಪ್ರಭಾಸ್ 6 ವರ್ಷಗಳಿಂದ ಒಂದೂ ಸಿನಿಮಾ ಯಶಸ್ಸು ಕಂಡಿಲ್ಲ. ಅಭಿಮಾನಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ಧಾರೆ. ಬಾಹುಬಲಿ ಪಾರ್ಟ್ 1ಪಾರ್ಟ್2 ನಂತರ ಪ್ರಭಾಸ್ ಎರಡು ಬಿಗ್ ಪ್ಯಾನ್ ಇಂಡಿಯಾ ಚಿತ್ರಗಳು ಮಕಾಡೆ ಮಲಗಿದವು. ಇದೀಗ ಅದಕ್ಕೆ ಆದಿಪುರುಷ್ ಸಿನಿಮಾನೂ ಸೇರ್ಪಡೆಯಾಗಿದೆ. ದೊಡ್ಡ ಡಿಸಾಸ್ಟರಸ್ ಎನ್ನಲಾಗಿದೆ. ಆದಿಪುರುಷ್ ಸೋಲು ಕಾಣುತ್ತಿದ್ದಂತೆ ಮುಂದಿನ ಸಿನಿಮಾ ಸಲಾರ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪ್ರಶಾಂತ್ ನೀಲ್ ಮೇಲೆ ಒತ್ತಡ ಹೆಚ್ಚಾಗಿದೆ.