Asianet Suvarna News Asianet Suvarna News

ಐದು ಕಥೆಗಳ 'ಪೆಂಟಗನ್ ' ಸಿನಿಮಾ ಏಪ್ರಿಲ್ 7ಕ್ಕೆ ರಿಲೀಸ್..!

ಹಾಡುಗಳು ಮತ್ತು ಟೀಸರ್​ ಮೂಲಕ ಪೆಂಟಗನ್​ ಸಿನಿಮಾ ಗಮನ ಸೆಳೆಯುತ್ತಿದ್ದು, ಏಪ್ರಿಲ್​ 7ರಂದು ಬಿಡುಗಡೆ ಆಗಲಿದೆ. 

ಹಾಡುಗಳು ಮತ್ತು ಟೀಸರ್​ ಮೂಲಕ ಪೆಂಟಗನ್​ ಸಿನಿಮಾ ಗಮನ ಸೆಳೆಯುತ್ತಿದ್ದು, ಏಪ್ರಿಲ್​ 7ರಂದು  ಬಿಡುಗಡೆ ಆಗಲಿದೆ. 5 ಭಿನ್ನವಾದ ಕಥೆಗಳ ಸಂಕಲನದ  ರೀತಿಯಲ್ಲಿ ಪೆಂಟಗನ್​  ಮೂಡಿಬಂದಿದೆ. ಇನ್ನು ಈ ಸಿನಿಮಾವನ್ನು  ಗುರು ದೇಶಪಾಂಡೆ ಅವರು ನಿರ್ಮಾಣದ ಜೊತೆಗೆ ಒಂದು ಕಥೆಯನ್ನು ನಿರ್ದೇಶಿಸಿದ್ದಾರೆ. 5 ಬೇರೆ ಬೇರೆ ಕಥೆಗಳಿಗೆ ಐವರು ನಿರ್ದೇಶಕರು ಆ್ಯಕ್ಷನ್​-ಕಟ್​ ಹೇಳಿದ್ದು,ಗುರು ದೇಶಪಾಂಡೆ, ‘ಶಿವಾಜಿ ಸುರತ್ಕಲ್​’ ಸಿನಿಮಾ ಖ್ಯಾತಿಯ ಆಕಾಶ್​ ಶ್ರೀವತ್ಸ, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ‘ಬ್ರಹ್ಮಚಾರಿ’ ಚಿತ್ರದ ಚಂದ್ರಮೋಹನ್ ಹಾಗೂ ಹೊಸ ನಿರ್ದೇಶಕ ಕಿರಣ್ ಕುಮಾರ್​ ಅವರು ತಲಾ ಒಂದು ಕಥೆಗೆ ನಿರ್ದೇಶನ ಮಾಡಿದ್ದಾರೆ. ಪ್ರೀತಿಕಾ ದೇಶಪಾಂಡೆ, ರವಿ ನಾಯಕ್​, ಶ್ರುತಿ ನಾಯಕ್​, ವಂಶಿ ಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ.
 

Video Top Stories