Asianet Suvarna News Asianet Suvarna News

ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ, ರಿಷಬ್ ಮೇಲೆ ತುಳುನಾಡ ಜನರ ಆಕ್ರೋಶ

ಬೆಂಗಳೂರಿನ ಮಲ್ಲೇಶ್ವರಂನ ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ ಮಾಡಿದ್ದು ಕರಾವಳಿ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಕಾಂತಾರ-2 ಬ್ಯಾನ್ ಆಗಬೇಕು ಎನ್ನುತ್ತಿದ್ದಾರೆ.

ಕಾಂತಾರ ಸಿನಿಮಾದ ನಂತರ ಬೇಕಾಬಿಟ್ಟಿ ಪಂಜುರ್ಲಿಆಚರಣೆಗಳನ್ನು ಮಾಡುವುದನ್ನು ಕಂಡಿದ್ದೇವೆ. ಈಗ ಬೆಂಗಳೂರಿನ ಮಲ್ಲೇಶ್ವರಂನ ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ ಮಾಡಿದ್ದು ಕರಾವಳಿ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಗಂಗಮ್ಮ ತಾಯಿಯ ಪಂಜುರ್ಲಿ ಅಲಂಕಾರ ವಿಡಿಯೋ ವೈರಲ್ ಆಗಿದೆ.  ಇದಕ್ಕೆ ಕರವಾಳಿ ಮಂದಿ ಕಾಂತಾರ-2 ಬ್ಯಾನ್ ಆಗಬೇಕು  ಕಾಂತಾರ ಬಂದಿದ್ದಕ್ಕೆ  ಹೀಗೆ ಇನ್ನು ಕಾಂತಾರ 2 ಎನು ತುಳುನಾಡಿನ ಸಂಸ್ಕೃತಿಯನ್ನು ಕಾಪಾಡಿ ಎಂದು ತುಳುನಾಡಿನ ಜನರು ರಿಷಬ್ ಮೇಲೆ ಗರಂ ಆಗಿದ್ದಾರೆ. ಅದಲ್ಲದೆ   ದೈವಗಳಿಗೆ ಮಾಡುವ ಅಲಂಕಾರ ದೈವಾರಾಧನೆ ಬಿಟ್ಟು ಬೇರೆ ಸಂದರ್ಭಗಳಲ್ಲಿ ಬಳಸುವ ಹಾಗಿಲ್ಲ.ಅದಕ್ಕಾಗಿ ರಿಷಬ್ ಶೆಟ್ಟಿ  ಸಿನಿಮಾ ಮಾಡುವಾಗ ಧರ್ಮಸ್ಥಳಕ್ಕೆ ಹೋಗಿ ಅನುಮತಿ ಕೇಳಿ ಸಿನಿಮಾದಲ್ಲಿ ಮಾಡಿದ್ದರು. ಆದರೆ ಬಹಳಷ್ಟು ಜನರು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ ಎಂದ  ಕರಾವಳಿ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ.

Video Top Stories