ಕಾಳಿಮಾತೆ ಬಾಯಲ್ಲಿ ಸಿಗರೇಟ್‌ ಇಟ್ಟು ವಿಕೃತಿ ಮೆರೆದ ನಿರ್ಮಾಪಕಿ ಲೀನಾ

ಪೋಸ್ಟರ್ ವಿಚಾರವಾಗಿ ವಿವಾದಕ್ಕೀಡಾಗಿದ್ದ ‘ಕಾಳಿ’ ಸಾಕ್ಷ್ಯಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ. ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆ ಧೂಮಪಾನ ಮಾಡುತ್ತಿರುವಂತೆ ಮತ್ತು ಎಲ್‌ಜಿಬಿಟಿಕ್ಯು ಧ್ವಜವನ್ನು ಹಿಡಿದಿರುವ ದೂರಿನ ಮೇರೆಗೆ ದೆಹಲಿ ಪೊಲೀಸರು ಇದೀಗ ಕ್ರಮ ಕೈಗೊಂಡಿದ್ದಾರೆ. 

First Published Jul 5, 2022, 4:20 PM IST | Last Updated Jul 5, 2022, 4:20 PM IST

ಪೋಸ್ಟರ್ ವಿಚಾರವಾಗಿ ವಿವಾದಕ್ಕೀಡಾಗಿದ್ದ ‘ಕಾಳಿ’ ಸಾಕ್ಷ್ಯಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ. ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆ ಧೂಮಪಾನ ಮಾಡುತ್ತಿರುವಂತೆ ಮತ್ತು ಎಲ್‌ಜಿಬಿಟಿಕ್ಯು ಧ್ವಜವನ್ನು ಹಿಡಿದಿರುವ ದೂರಿನ ಮೇರೆಗೆ ದೆಹಲಿ ಪೊಲೀಸರು ಇದೀಗ ಕ್ರಮ ಕೈಗೊಂಡಿದ್ದಾರೆ. ದೆಹಲಿ ಪೊಲೀಸ್‌ನ ಐಎಫ್‌ಎಸ್‌ಸಿ ಘಟಕವು ಎಫ್‌ಐಆರ್ ದಾಖಲಿಸಿದೆ. 'ಕಾಳಿ' ಚಿತ್ರದ ಪೋಸ್ಟರ್‌ನಲ್ಲಿ ಕಾಳಿ ತಾಯಿಯ ಕೈಯಲ್ಲಿ ಸಿಗರೇಟ್ ತೋರಿಸಲಾಗಿತ್ತು ಎಂಬುವುದು ಉಲ್ಲೇಖನೀಯ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, 'ಕಾಳಿ' ಚಿತ್ರಕ್ಕೆ ಸಂಬಂಧಿಸಿದ ವಿವಾದಾತ್ಮಕ ಪೋಸ್ಟರ್‌ಗೆ ಸಂಬಂಧಿಸಿದಂತೆ ಐಎಫ್‌ಎಸ್‌ಸಿ ಘಟಕವು ಐಪಿಸಿಯ ಸೆಕ್ಷನ್ 153 ಎ ಮತ್ತು 295 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಚಿತ್ರದ ಪೋಸ್ಟರ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.