
ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
ಕನ್ನಡ ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೀರೋ ಆಗಿ ನಟಿಸಿರುವ ವೃಷಭ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಕ್ರಿಸ್‌ಮಸ್‌ಗೆ ವೃಷಭ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ.
ಕನ್ನಡ ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೀರೋ ಆಗಿ ನಟಿಸಿರುವ ವೃಷಭ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಕ್ರಿಸ್‌ಮಸ್‌ಗೆ ವೃಷಭ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ವೃಷಭ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಮೋಹನ್‌ಲಾಲ್ ಮಗನ ಪಾತ್ರವನ್ನೆ ಮಾಡಿದ್ದಾರೆ. ರಾಗಿಣಿ ದ್ವಿವೇದಿ, ಮತ್ತು ನಯನ್ ಸಾರಿಕಾ, ಅಜಯ್ ಮತ್ತು ನೇಹಾ ಸಕ್ಸೇನಾ ತಾರಾಬಳಗದಲ್ಲಿದ್ದಾರೆ.
ಶೇಕ್ ಇಟ್ ಪುಷ್ಪಾವತಿಯ ಮತ್ತೊಂದು ಸಾಂಗ್: ಶೇಕ್ ಇಟ್ ಪುಷ್ಪಾವತಿ ಹಾಡು ಹಾಡಿ ಫೇಮಸ್ ಆಗಿದ್ದ ಗಾಯಕಿ ಐಶ್ವರ್ಯ ರಂಗರಾಜನ್ ಈಗ ಮತ್ತೊಂದು ಕನ್ನಡದ ಸ್ಪೆಷಲ್ ಹಾಡಿಗೆ ಧ್ವನಿ ಆಗಿದ್ದಾರೆ. ಧರ್ಮಂ ಚಿತ್ರದ "ನಾನು ದಿಲ್ಲಿ ಹಳ್ಳಿ " ಹಾಡನ್ನ ಐಶ್ವರ್ಯ ರಂಗರಾಜನ್ ಹಾಡಿದ್ದು, ಪಡ್ಡೆ ಹುಡಗರ ಮನಸೆಳೆಯುತ್ತಿದೆ. ಡಾ. ಎಸ್. ಕೆ. ರಾಮಕೃಷ್ಣ ನಿರ್ಮಾಣ ಮಾಡಿರೋ ಧರ್ಮಂ ಸಿನಿಮಾವನ್ನ ನಾಗಮುಖ ನಿರ್ದೇಶನ ಮಾಡಿದ್ದಾರೆ. ನಾಗಮುಖ ಸಾಹಿತ್ಯ ಬರೆದಿರುವ ನಾನು ದಿಲ್ಲಿ ಹಳ್ಳಿ ಹಾಡಿಗೆ ಸರವಣ ಸುಬ್ರಮಣಿಯಂ ಅವರು ಸಂಗೀತ ನೀಡಿದ್ದಾರೆ. ಸಾಯಿ ಶಶಿಕುಮಾರ್ ಧರ್ಮಂ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು, ವಿರಾಣಿಕ ಶೆಟ್ಟಿ ನಾಯಕಿ ಆಗಿದ್ದಾರೆ.
ಪ್ರೇಮಂ ಮಧುರಂ ಟ್ರೈಲರ್ ರಿಲೀಸ್: ಕನ್ನಡದಲ್ಲಿ ಪ್ರೇಮಂ ಮಧುರಂ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸುದ್ದಿಘೋಷ್ಠಿ ಮಾಡಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಅರಗೊಂಡ ಶೇಖರ್‌ರೆಡ್ಡಿ ನಿರ್ಮಾಣ ಮಾಡಿರೋ ಸಿನಿಮಾವನ್ನ ಗಾಂಧಿ.ಎ.ಬಿ ನಿರ್ದೇಶನ ಮಾಡಿದ್ದು ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಐಶ್ವರ್ಯ ದಿನೇಶ್, ಅನುಷಾ ಜೈನ್ ನಟಿಸಿದ್ದಾರೆ. ತಾರಾಗಣದಲ್ಲಿ ಸಿಹಿ ಕಹಿ ಚಂದ್ರು, ರಾಜೇಶ್ವರಿ, ಲಪಂಗ್ ರಾಜ, ಅನೂಪ್ ಅಗಸ್ತ್ಯ ನಟಿಸಿದ್ದಾರೆ.
ನವೆಂಬರ್ 21ಕ್ಕೆ ಆಕ್ಷನ್ ಥ್ರಿಲ್ಲರ್ ಮಫ್ತಿ ಪೊಲೀಸ್ ರಿಲೀಸ್: ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಮಫ್ತಿ ಪೊಲೀಸ್ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 21ಕ್ಕೆ ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಐಶ್ವರ್ಯ ರಾಜೇಶ್ ಮಫ್ತಿ ಪೊಲೀಸ್ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ದಿನೇಶ್ ಲೆಟ್ಚುಮನನ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಮಫ್ತಿ ಪೊಲೀಸ್ ಕ್ರೈಂ ಥ್ರಿಲ್ಲರ್ ಸ್ಟೋರಿ ಇದ್ದು, ಅರ್ಜುನ್ ಸರ್ಜಾ, ಐಶ್ವರ್ಯ ರಾಜೇಶ್ ಜೊತೆಗೆ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಭಿರಾಮಿ, ರಾಮ್‌ಕುಮಾರ್, ಜಿ.ಕೆ. ರೆಡ್ಡಿ, ಪಿ.ಎಲ್. ತೇನಪ್ಪನ್, ಲೋಗು, ವೇಲಾ ರಾಮಮೂರ್ತಿ, ತಂಗದುರೈ, ಸೇರಿದಂತೆ ಹಲವರು ನಟಿಸಿದ್ದಾರೆ.
ಲವ್ ಕೇಸ್ ಚಿತ್ರಕ್ಕೆ ಮುಹೂರ್ತ: ಎಂ.ಬಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಮೋಹನ್ ಬಾಬು ನಿರ್ಮಾಣದಲ್ಲಿ ಜೈಶ್ ನಿರ್ದೇಶನದಲ್ಲಿ ಲವ್ ಕೇಸ್ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾದ ಮುಹೂರ್ತ ಇಂದು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ನಟ ಶ್ರೀನಗರ ಕಿಟ್ಟಿ, ಟಗರು ಪಲ್ಯ ನಾಗಭೂಷಣ್ , ಸಾಯಿಕುಮಾರ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ಮಹಾನಟಿ ಖ್ಯಾತಿಯ ವಂಶಿ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ರಂಜನ್ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಆದಿ ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಇದೆ. ಲವ್ ಕೇಸ್ ಚಿತ್ರದ ಶೀರ್ಷಿಕೆಯನ್ನ ಚಿಂತಾಮಣಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಅನಾವರಣಗೊಳಿಸಿದ್ದಾರೆ.