ಹಳ್ಳಿಹಕ್ಕಿ ಗಾಯನಕ್ಕೆ ಮನಸೋತ ಕನ್ನಡಿಗರು: ಕುರಿ ಕಾಯುವ ಹೈದನೊಳಗೊಬ್ಬ ಅಪ್ರತಿಮ ಗಾಯಕ !

ಸಿಂಗರ್ ಹನುಮಂತ.. ರಾಜ್ಯದಲ್ಲೇ ಮನೆ ಮಾತಾಗಿರೋ ಹೆಸರು. ಈ ಹೆಸರು ಕೇಳಿದ್ರೆ ಸಾಕು ಕಿವಿ ನೆಟ್ಟಗಾಗುತ್ತೆ. ಮುಗ್ಧ ಮುಖ ಕಣ್ ಮುಂದೆ ಬರುತ್ತೆ. ಹನುಮಂತನನ್ನ ನೋಡಿದ್ರೆ ಮನೆ ಹುಡುಗನ ಫೀಲ್  ಬರುತ್ತೆ. ಈಗ ನಾವು ನಿಮಗೆ ಜ್ಯೂನಿಯ್ ಹನುಮಂತಣ್ಣನ ಪರಿಚಯ ಮಾಡ್ತೀವಿ. ಈತ ಕೂಡ ಕುರಿಕಾಯುವ ಹೈದನೇ. ಹಾಡುಗಳ ಮೂಲಕ ಸರಿಗಮಪ ಕಾರ್ಯಕ್ರಮದಲ್ಲಿ ಸಖತ್ ಹವಾ ಮಾಡ್ತಿದಾನೆ.
 

First Published Oct 15, 2023, 10:05 AM IST | Last Updated Oct 15, 2023, 10:05 AM IST

ಸಿಂಗರ್ ಹನುಮಂತಣ್ಣನ ಖದರ್ ಅದ್ಯಾವ ರೀತಿ ಜನರ ಮನಸ್ಸನ್ನ ಆವರಿಸಿಕೊಂಡಿದೆ ಅಂದ್ರೆ ಕುರಿಗಾಹಿ ಯುವಕರು ಮುಂದೆ ಬಂದ್ರೆ ಹನುಮಂತಣ್ಣನ(Hanumantha) ಮುಖವೇ ಒಂದ್ ಕ್ಷಣ ಕಣ್ ಮುಂದೆ ಬರುತ್ತೆ. ಯಾರಾದ್ರೂ ಲುಂಗಿ ಕಟ್ಟಿದ್ರೂ ಇದು ಹನುಮಂತಣ್ಣನ ಸ್ಟೈಲ್ ಅನ್ನೋ ರೇಂಜ್ ಗೆ ಜನರ ಮನಸ್ಸಲ್ಲಿ ಉಳಿದಿದಾನೆ. ತರಲೇ ಮಾತು.. ಅದ್ಭುತ ಹಾಡುಗಾರಿಕೆಯಿಂದ ಹನುಮಂತ ಕೋಟಿ ಕೋಟಿ ಜನರ  ಹೃದಯ ಸಿಂಹಾಸನದಲ್ಲಿ ಖಾಯಂ ಆಗಿ ನೆಲಸಿದ್ದಾನೆ. ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆಗೆ ಸರಿಯಾದ ವೇದಿಕೆ ಸಿಕ್ಕಿತ್ತು. ತನಗೆ ಸಿಕ್ಕ ಅವಕಾಶವನ್ನ ಸಿಂಗರ್ ಹನುಮಂತ ಸರಿಯಾಗೆ ಬಳಸ್ಕೊಂಡಿದ್ರು. ಸಾಲು ಸಾಲು ರಿಯಾಲಿಟಿ ಶೋನಲ್ಲಿ ಹಾಡುಗಾರಿಕೆಯಿಂದ ಸೈ ಅನಸ್ಕೊಂಡಿದ್ರು ಈಗ ನಾವು ತೋರ್ಸೋ ಹುಡುಗನೂ ಥೇಟ್ ಹನಂತಣ್ಣನ ಥರಾನೇ ಸಖತ್ ಟ್ಯಾಲೆಂಟೆಡ್.. ಹನುಮಂತನತರಾನೇ ಕುರಿ ಮೇಯಿಸ್ತಾನೇ ಹಾಡು ಪ್ರಾಕ್ಟೀಸ್ ಮಾಡ್ತಾನೆ.. ಸದ್ಯ ಈತನ ವಿಡಿಯೋ ಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಜ್ಯೂನಿಯರ್ ಹನಮ ಅಂತಾ ಫುಲ್ ಫೇಮಸ್ ಆಗಿದ್ದ. ಈಗ ಕೊನೆಗೂ ರಮೇಶ್ ಲಮಾಣಿಗೆ(Ramesh Lamani) ಒಂದು ವೇದಿಕೆ ಸಿಕ್ಕಾಗಿದೆ. ಪುಟ್ಟರಾಜ ಗವಾಯಿಗಳ ನಾಡು ಸಂಗೀತ ಕಾಶಿ ಅಂತಾನೇ ಕರೆಯೋ ಗದಗದಲ್ಲಿದ್ರೂ(Gadag) ರಮೇಶಗೆ ಸಂಗೀತ ಗುರುಗಳಿಲ್ಲ. ಹಾಗಂತ ಹಾಡುಗಾರಿಕೆಯಲ್ಲಿ ರಮೇಶ ಹಿಂದೆ ಬಿದ್ದಿಲ್ಲ. ತನ್ನ ಮಧುರ ಕಂಠಕ್ಕೆ ತಾನೇ ತಾಲೀಮು ನೀಡ್ತಾ ಕುರಿಗಳ ಮಧ್ಯೆ ಸಂಗೀತಾಭ್ಯಾಸ ಮಾಡ್ತಾನೆ.

ಇದನ್ನೂ ವೀಕ್ಷಿಸಿ:  ಜಗತ್ತನ್ನೇ ಇಬ್ಭಾಗ ಮಾಡಿಟ್ಟಿತಾ ಗಾಜಾ ಉಗ್ರರ ದಾಳಿ? ಯುದ್ಧದ ಹೊತ್ತಲ್ಲಿ ಇಸ್ರೇಲ್ ಪರ ನಿಂತಿದ್ಯಾರು..?