ಸಮಂತಾ ಈ ಪಾಟಿ ಹಾಟ್ ಆಗಿದ್ದು ಇದೇ ಮೊದಲು! ಬ್ಯಾಕ್ಲೆಸ್ ಡ್ರೆಸ್‌ನಲ್ಲಿ ಮಿಂಚಿದ ನಟಿ

ಸಮಂತಾ ಬ್ಯಾಕ್ಲೆಸ್ ಬೋಲ್ಡ್ ಫೋಟೋಶೂಟ್ ವೈರಲ್‌
ಮ್ಯಾಗಜಿನ್ ಕವರ್‌ಗೆ ಫೋಟೋಶೂಟ್ ಮಾಡಿಸಿದ ಸಮಂತಾ 
ಮಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಸಮಂತಾ

First Published Nov 12, 2023, 10:18 AM IST | Last Updated Nov 12, 2023, 10:18 AM IST

ಬಾಲಿವುಡ್‌ನಲ್ಲಿ ಸೌತ್ ಹೀರೋಗಳು ಬೆಳಿಯೋಕಾಗೊಲ್ಲ ಆದ್ರೆ ಉಳಿಯೋದು ಮಾತ್ರ ಸೌತ್ ಹೀರೋಯಿನ್ಸ್ ಅನ್ನೋ ಮಾತು ಸಾರ್ವಕಾಲಿಕ ಸತ್ಯ ಆಗೋಗಿದೆ. ದಕ್ಷಿಣದ ಹೀರೋಯಿನ್ಸ್‌ಗೆ ಬಾಲಿವುಡ್(Bollywood) ಯಾವಾಗಲೂ ಮಣೆ ಹಾಕುತ್ತಲೇ ಇರುತ್ತೆ. ಬೆಳೆಸುತ್ತೆ ಉಳಿಸುತ್ತೆ. ಅಂದಿನ ಶ್ರೀದೇವಿ, ಮಾಧುರಿ ದೀಕ್ಷಿತ್, ಐಶ್ವರ್ಯ ಇಂದ ಹಿಡಿದು ಇವತ್ತಿನ ದೀಪಿಕಾ, ಅನುಷ್ಕಾ, ಪೂಜಾ ಹೆಗ್ಡೆ, ರಶ್ಮಿಕಾ ವರೆಗೆ ಇದು ಪ್ರೂವ್ ಆಗಿದೆ. ಇದೀಗ ಸಮಂತಾ(Samantha) ಜಮಾನ ಶುರುವಾಗೋ ಸೂಚನೆ ಸಿಕ್ಕಿದೆ. ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಪೋಟೊ ಶೂಟ್ ಮಾಡಿಸಿದ್ದಾರೆ ಸಮಂತಾ. ಬಜಾರ್(Bazaar magazine) ಎನ್ನುವ ಪ್ರತಿಷ್ಟಿತ ಮ್ಯಾಗಜಿನ್‌ಗೆ ಸಮಂಥಾ ಮಾಡಿಸಿರೋ ಈ ಫೋಟೊಶೂಟ್ ಫುಲ್ ವೈರಲ್ ಆಘಗಿದ್ದು, ಆರೋಗ್ಯ ಕೈಕೊಟ್ಟರೂ ಸಿನಿಮಾ ಒಂದು  ಬಿದ್ದು, ಮತ್ತೊಂದು ಗೆದ್ದರೂ ಸಮಂತಾ ಮಾತ್ರ ತನ್ನ ಗುರಿಯತ್ತ ಚಿತ್ತವಿಟ್ಟು ಮುಂದುವರೆದಿದ್ದಾರೆ. ಬಾಲಿವುಡ್‌ನಲ್ಲಿ ಇನ್ಮೇಲೆ ನಮ್ದೆ ಹವಾ ಅನ್ನೋ ದಿನ ದೂರವಿಲ್ಲ. ಬ್ಯಾಕ್ಲೆಸ್ ಡ್ರೆಸ್‌ನಲ್ಲಿ ಫುಲ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಡಿವೋರ್ಸ್ ನಂತರ ನಟಿಯರು ಬೋಲ್ಡ್ ಆಗುವುದು ಕಾಮನ್. ತುಂಬಾ ಡಿಫರೆಂಟಾಗಿ ಫೋಟೋಶೂಟ್ ಕುಡಾ ಮಾಡಿಸಿಕೊಳ್ಳುತ್ತಾರೆ. ಈಗ ನಟಿ ಸಮಂತಾ ಅವರದ್ದೂ ಇದಕ್ಕೆ ಹೊರತಾಗಿಲ್ಲ. ನಟಿ ಮಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದರ ಭಾಗವಾಗಿ ನಟಿ ಐಸ್ಕ್ಯೂಬ್ ಬಾತ್ ಮಾಡಿದ್ದರು. ಈಗ ನಟಿ ಹಾಟ್ ಸ್ಟೋನ್ ಬಾತ್ ಮಾಡಿದ್ದಾರೆ. ಬಿಸಿ ಕಲ್ಲಿನ ಸ್ನಾನಕ್ಕೆ ಫೇಮಸ್ ಆಗಿರುವ ಭೂತಾನ್‌ಗೆ ವಿಸಿಟ್ ಮಾಡಿದ್ದಾರೆ. ಹಾಲಿವುಡ್ ಸಿನಿಮಾ ಚೆನ್ನೈ ಸ್ಟೋರಿ ನಂತರ ಸಮಂತಾ ಸಿಟಾಡೆಲ್  ಎನ್ನುವ ಬಾಲಿವುಡ್ ಸಿನಿಮಾವನ್ನು ವರುಣ್ ಧವನ್ ಜೊತೆ ಮಾಡಿದ್ದು ಚಿತ್ರದ ಪ್ರಚಾರ ಇನ್ನೇನು ಶುರುವಾಗಬೇಕಿದೆ. ಅದಕ್ಕೂ ಮೊದಲು ಇದೀಗ ಸಮಂತಾ ಮ್ಯಾಗಜಿನ್ ಕವರ್ ಫೋಟೊಶೂಟ್ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  Weekly-Horoscope: ದೀಪಾವಳಿ ಹಬ್ಬದ ವಿಶೇಷತೆ ಏನು ? ಈ ವಾರದ ಭವಿಷ್ಯ ಹೀಗಿದೆ..

Video Top Stories