ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ KGF ನಟಿ ಶ್ರೀನಿಧಿ ಶೆಟ್ಟಿ ಈಗಲಾದ್ರೂ ಗೆಲ್ತಾರಾ?
KGF ಸಿನಿಮಾದಂತಹ ಗ್ಲೋಬಲ್ ಹಿಟ್ ಸಿನಿಮಾದಲ್ಲಿ ನಟಿಸಿದ್ರೂ ಅದರ ನಾಯಕಿ ಶ್ರೀನಿಧಿ ಶೆಟ್ಟಿ ಲೈಫ್ ಮಾತ್ರ ಬದಲಾಗಲಿಲ್ಲ. ದೊಡ್ಡ ಆಫರ್ಗಳ ಅವಕಾಶ ಸಿಗಲಿಲ್ಲ. ಸಿಕ್ಕ ಸಿನಿಮಾಗಳು ಗೆಲ್ಲಲಿಲ್ಲ. ಇದೀಗ ಹಿಟ್-3 ಸಿನಿಮಾ ಮೂಲಕ ಶ್ರೀನಿಧಿ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ರಾಕಿ ಗೆಳತಿ ಈ ಸಾರಿಯಾದ್ರೂ ಗೆಲ್ತಾಳಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಒಂದು ದೊಡ್ಡ ಗ್ಯಾಪ್ ಬಳಿಕ ಶ್ರೀನಿಧಿ ಶೆಟ್ಟಿ ಪ್ರತ್ಯಕ್ಷವಾಗಿದ್ದಾರೆ. ನಾನಿ ನಟನೆಯ ಹಿಟ್-3 ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ನಟಿಸಿದ್ದು, ಇದೀಗ ನಾನಿ-ಶ್ರೀನಿಧಿ ಇರುವ ಸಾಂಗ್ ಪ್ರೋಮೋ ರಿಲೀಸ್ ಆಗಿದೆ. ಕೆಜಿಎಫ್ ಬ್ಯೂಟಿನ ಬಹುಕಾಲದ ನಂತರ ನೋಡಿದ ಫ್ಯಾನ್ಸ್ ಅರೇ ಈ ಚೆಲುವೆ ಇಷ್ಟು ದಿನ ಎಲ್ಲೋಗಿದ್ರು ಅಂತ ಯೋಚನೆ ಮಾಡ್ತಾ ಇದ್ದಾರೆ.
ಅಸಲಿಗೆ ಕೆಜಿಎಫ್ 1 & 2 ಸಿನಿಮಾ ಅಷ್ಟು ದೊಡ್ಡ ಯಶಸ್ಸು ಕಂಡಾಗ ಎಲ್ಲರೂ ಶ್ರೀನಿಧಿ ಅದೃಷ್ಟವನ್ನ ಕೊಂಡಾಡಿದ್ರು. ಈಕೆಯನ್ನ ಗೋಲ್ಡನ್ ಗರ್ಲ್ ಅಂತ ಕರೆದಿದ್ರು. ಆದ್ರೆ ಕೆಜಿಎಫ್ ನಂತರ ಶ್ರೀನಿಧಿ ಲೈಫ್ನಲ್ಲಿ ಹೆಚ್ಚೆನೂ ಬದಲಾಗಲಿಲ್ಲ. ಚಿಯಾನ್ ವಿಕ್ರಂ ಜೊತೆ ನಟಿಸಿದ ಬಹುನಿರೀಕ್ಷೆಯ ಕೋಬ್ರಾ ಸಿನಿಮಾ ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿತು. ಅಲ್ಲಿಂದ ಕಾಣೆಯಾದ ಶ್ರೀನಿಧಿ 3 ವರ್ಷ ಕಾಣೆಯಾಗಿದ್ರು. ಅಸಲಿಗೆ ದೊಡ್ಡ ಪ್ರಾಜೆಕ್ಟ್ಗಳ ಹುಡುಕಾಟದಲ್ಲಿದ್ದ ಶ್ರೀನಿಧಿಗೆ ಸುದೀಪ್ ನಟನೆಯ 47ನೇ ಚಿತ್ರದಲ್ಲಿ ನಾಯಕಿಯಾಗೋ ಚಾನ್ಸ್ ಸಿಕ್ಕಿತ್ತು. ಆದ್ರೆ ಅದ್ಯಾಕೋ ಈ ಸಿನಿಮಾ ಸೆಟ್ಟೇರಲೇ ಇಲ್ಲ. ಶ್ರೀನಿಧಿ ಶಾಪ ಕಳೀಲಿಲ್ಲ. ಇದೀಗ ಹಿಟ್ -3 ಮೂಲಕ ನಾನಿ ಜೊತೆ ನಟಿಸಿ ಸಕ್ಸಸ್ ಹುಡುಕಾಟದಲ್ಲಿದ್ದಾಳೆ ರಾಕಿ ಗೆಳತಿ. ಶ್ರೀನಿಧಿಗೆ ಈ ಸಾರಿಯಾದ್ರೂ ಗೆಲುವಿನ ನಿಧಿ ಸಿಕ್ಕುತ್ತಾ ಕಾದುನೋಡಬೇಕು.