Sarkaru Vaari Paata: ಶೂಟಿಂಗ್ ಸೆಟ್‌ನಲ್ಲಿ ಮಹೇಶ್‌ ಬಾಬು ಕೆನ್ನೆಗೆ ಹೊಡೆದ ನಟಿ?

'ಸರ್ಕಾರು ವಾರಿ ಪಾಟ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಟಿ ಕೀರ್ತಿ ಸುರೇಶ್, ಮಹೇಶ್ ಬಾಬು ಕೆನ್ನೆಗೆ ಹೊಡೆದಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿ ಬರ್ತಿದೆ.

Share this Video
  • FB
  • Linkdin
  • Whatsapp

ಟಾಲಿವುಡ್ (Tollywood) ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅಭಿನಯದ ಬಹು ನಿರೀಕ್ಷಿತ 'ಸರ್ಕಾರು ವಾರಿ ಪಾಟ' (Sarkaru Vaari Paata) ಚಿತ್ರ ಇದೇ ತಿಂಗಳು ರಿಲೀಸ್ ಆಗ್ತಿದೆ. 'ಗೀತಾ ಗೋವಿಂದಂ'ಗೆ ನಿರ್ದೇಶನ ಮಾಡಿದ್ದ ಪರಶುರಾಮ್‌ ಪೆಟ್ಲಾ (Parasuram Petla) 'ಸರ್ಕಾರು ವಾರಿ ಪಾಟ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಅಲಾ ವೈಕುಂಠಪುರಮುಲೋ', 'ಯುವರತ್ನ' ಖ್ಯಾತಿಯ ಎಸ್‌. ತಮನ್ (S.Thaman) ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್‌ ಬಾಬುಗೆ ಜೋಡಿಯಾಗಿ ಮೊದಲ ಬಾರಿಗೆ ಕೀರ್ತಿ ಸುರೇಶ್‌ (Keerthy Suresh) ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಟಿ ಕೀರ್ತಿ ಸುರೇಶ್, ಮಹೇಶ್ ಬಾಬು ಕೆನ್ನೆಗೆ ಹೊಡೆದಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿ ಬರ್ತಿದೆ? ಏನಿದು ಮ್ಯಾಟ್ರು? ಈ ಗಾಸಿಪ್ ನೋಡಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video