
KBCನಲ್ಲಿ ‘ಆಪರೇಷರ್ ಸಿಂಧೂರ’ ಸಾಹಸಿಗರು: ವೀರವನಿತೆಯರ ಸಾಹಸಕ್ಕೆ ಅಮಿತಾಭ್ ಸಲಾಂ
ವೀರ ವನಿತೆಯರು ಕೌನ್ ಬನೇಗಾ ಕರೋಡ್ ಪತಿ ಶೋನದಲ್ಲಿ ಭಾಗಿಯಾಗಿದ್ದಾರೆ. ಸ್ವಾತಂತ್ರೋತ್ಸವದ ದಿನ ಪ್ರಸಾರವಾಗಲಿರೋ ಸಂಚಿಕೆಯಲ್ಲಿ, ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಾಲಿ ಭಾಗಿಯಾಗಿದ್ದಾರೆ.
ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಶೋನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಅತಿಥಿಗಳು ಬರ್ತಾ ಇದ್ದಾರೆ. ಇದೀಗ ಸ್ವಾತಂತ್ರೋತ್ಸವದ ವಿಶೇಷ ಸಂಚಿಕೆಯಲ್ಲಿ ಆಪರೇಷನ್ ಸಿಂಧೂರನಲ್ಲಿ ಭಾಗಿಯಾದ ವೀರನಾರಿಯರು ಭಾಗಿಯಾಗಿದ್ದಾರೆ. ಆಪರೇಷರ್ ಸಿಂಧೂರ ಹೆಸರಲ್ಲಿ ಗಡಿಯಾಚೆ ಇರುವ ಭಯೋತ್ಪಾದಕರ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿ, ಭಾರತೀಯರನ್ನೆಲ್ಲಾ ಹೆಮ್ಮೆ ಪಡುವಂತೆ ಮಾಡಿತ್ತು. ಕಾಶ್ಮೀರದ ಅಮಾಯಕ ಪ್ರವಾಸಿಗರನ್ನ ಕೊಲೆಗೈದ ಭಯೋತ್ಪಾಕದರ ಕೃತ್ಯಕ್ಕೆ ಪ್ರತಿಯಾಗಿ ಮಾಡಿದ ಈ ದಾಳಿಯಿಂದ ಶತ್ರುದೇಶ ತತ್ತರಿಸಿಹೋಗಿತ್ತು. ವಿಶೇಷ ಅಂದ್ರೆ ಈ ದಾಳಿಯ ನೇತೃತ್ವ ವಹಿಸಿದ್ದು ನಮ್ಮ ಸೇನೆಯಲ್ಲಿರುವ ವೀರವನಿತೆಯರು. ಈ ಆಪರೇಷನ್ ಸಕ್ಸಸ್ ಬಳಿಕ ಈ ವೀರನಾರಿಯರೇ ಬಂದು ಕಾರ್ಯಾಚರಣೆ ಹೇಗೆ ನಡೀತು ಅನ್ನೋದನ್ನ ದೇಶದ ಜನತೆ ಮುಂದೆ ವಿವರಿಸಿದ್ರು.
ಇದೀಗ ಈ ವೀರ ವನಿತೆಯರು ಕೌನ್ ಬನೇಗಾ ಕರೋಡ್ ಪತಿ ಶೋನದಲ್ಲಿ ಭಾಗಿಯಾಗಿದ್ದಾರೆ. ಸ್ವಾತಂತ್ರೋತ್ಸವದ ದಿನ ಪ್ರಸಾರವಾಗಲಿರೋ ಸಂಚಿಕೆಯಲ್ಲಿ, ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಾಲಿ ಭಾಗಿಯಾಗಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಈ ವೀರನಾರಿಯರ ಶೌರ್ಯವನ್ನ ಕೊಂಡಾಡ್ತಾನೇ ಶೋ ನಡೆಸಿಕೊಟ್ಟಿದ್ದಾರೆ. ನಡುನಡುವೆ ಆಪರೇಷನ್ ಸಿಂಧೂರ ಹೇಗೆ ನಡೀತು ಅನ್ನೋದನ್ನ ಕೇಳಿ ರೋಮಾಂಚಿತರಾಗಿದ್ದಾರೆ. ಸದ್ಯ ಕೌನ್ ಬನೇಗಾ ಕರೋಡ್ಪತಿ ಶೋದ ಈ ಪ್ರೋಮೋ ರಿಲೀಸ್ ಆಗಿದ್ದು ಸ್ವಾಂತಂತ್ರೋತ್ಸವದ ದಿನ ಈ ಸಂಚಿಕೆ ಪ್ರಸಾರವಾಗಿದೆ. ಮನರಂಜನೆ ಜೊತೆಗೆ ಅಪರೇಷನ್ ಸಿಂಧೂರದ ರೋಚಕ ಕಥೆಯೂ ಇದರ ಮೂಲಕ ಹೊರಬರಲಿದೆ.