Asianet Suvarna News Asianet Suvarna News

ಕಮಲ್ ಹಾಸನ್ ಕನ್ನಡ ಪ್ರೀತಿ ನೋಡಿದ್ರೆ ಕಳೆದೇ ಹೋಗ್ತೀರಿ! ಇಂಡಿಯನ್ 2ಗೆ ಕನ್ನಡದಲ್ಲೇ ಡಬ್ ಮಾಡಿದ ನಟ!

ಹುಟ್ಟಿದ್ದು ಬೆಳೆದದ್ದು  ತಮಿಳು ನೆಲದಲ್ಲೇ ಇರುಬಹುದು. ಆದರೆ ಈ ಸಕಲ ಕಲಾವಲ್ಲಭ ಕಮಲ್ ಹಾಸನ್ ಕಂಡರೆ ಕನ್ನಡಿಗರಿಗೂ ಅದೇನೋ ಪ್ರೀತಿ. ಹಾಗೆಯೇ ಕಮಲ್‌ಗೂ ಕರ್ನಾಟಕ, ಕನ್ನಡಿಗರು ಮತ್ತು ಕನ್ನಡ ಚಿತ್ರರಂಗದ ಜೊತೆ ಬಿಡಿಸಲಾಗದ ನಂಟಿದೆ.
 

ವಿಕ್ರಮ್ ಸಿನಿಮಾ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ  ಬಂದಿದ್ದ ಕಮಲ್‌ ಹಾಸನ್(Kamal Haasan) ತಾನು ಮೊಟ್ಟ ಮೊದಲಿಗೆ ತಮಿಳು(Tamil) ಸಿನಿಮಾವೊಂದಕ್ಕೆ  ಕೊಳ್ಳೇಗಾಲದಲ್ಲಿ ಶೂಟಿಂಗ್ ಮಾಡಿದ ಅನುಭವವನ್ನೂ ಬಿಚ್ಚಿಟ್ಟದ್ದರು. 1977ರಲ್ಲಿ ಕೋಕಿಲ ಸಿನಿಮಾದಲ್ಲಿ ನಟಿಸಿದ್ದನ್ನೂ ನೆನಪಿಸಿಕೊಂಡಿದ್ದರು. ಆಗಿನಿಂದಲೂ ಕಮಲ್‌ಗೆ ಕರ್ನಾಟಕದೊಂದಿಗೆ(Karnataka) ನಂಟು ಹಾಗೆಯೇ ಇದೆ. ಕಮಲ್ ಹಾಸನ್ ಈಗಲೂ ಪುಟ್ಟಣ್ಣ ಕಣಗಾಲ್ ಅವರನ್ನು ಮರೆತಿಲ್ಲ. ಬೆಂಗಳೂರಿಗೆ(Bengaluru) ಬಂದಾಗ ಕಮಲ್ ಹಾಸನ್, ಪುಟ್ಟಣ್ಣ ಕಣಗಾಲ್ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ನಿರ್ದೇಶಕ ಹಾಗೂ ನಾನು ಕಾರು ಮಾಡಿಕೊಂಡು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದೇವೆ. ಅದ್ಭುತ ನಿರ್ದೇಶಕ ಎಂದು ನೆನಪು ಮಾಡಿಕೊಂಡಿದ್ದರು. ಗಿರೀಶ್ ಕಾರ್ನಾಡ್(Girish Karnad) ಬರವಣಿಗೆ ಮೆಚ್ಚಿದ್ದರು ರಂಗಕರ್ಮಿ ಬಿವಿ ಕಾರಂತರನ್ನು ನೆನಪಿಸಿಕೊಂಡಿದ್ದರು. ಪುಷ್ಪಕ ವಿಮಾನ ಸಿನಿಮಾ ಮರೆಯುವುದುಂಟೆ. ಪ್ರತಿ ಸಿನಿಮಾ ಪ್ರೇಮಿ ಮೆಚ್ಚಿಕೊಂಡಿದ್ದ ಈ ಕ್ಲಾಸ್ ಮೂಕ ಚಿತ್ರವನ್ನು ಚಿತ್ರೀಕರಿಸಿದ್ದೆ ಬೆಂಗಳೂರಿನ ವಿಡ್ಸರ್ ಮ್ಯಾನರ್‌ನಲ್ಲಿ. ಇನ್ನು ಕಮಲ್ ಬೆಂಗಳೂರಿಗೆ ಬಂದರೆ ಪರಾಗ್ ಹೋಟೆಲ್‌ನಲ್ಲಿ ಉಳಿಯುತ್ತಿದ್ದರಂತೆ. ಕಮಲ್ ಹಳೆ ಬೆಂಗಳೂರನ್ನೂ ನೋಡಿದ್ದಾರೆ. ಹೊಸ ಬೆಂಗಳೂರನ್ನೂ ನೋಡಿದ್ದಾರೆ. ಶೂಟಿಂಗ್‌ ವೇಳೆ ಜಾಗಿಂಗ್ ಮಾಡುತ್ತಿದ್ದ ದಾರಿಗಳೂ ಇವತ್ತಿಗೆ ನೆನಪಿವೆ ಎನ್ನುತ್ತಾರೆ. ಅಲ್ಲದೆ ಡಾ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಬಗ್ಗೆಯೂ ಹಲವಾರು ನೆನಪುಗಳನ್ನು ಕಮಲ್ ಹಾಸನ್ ಹಂಚಿಕೊಂಡಿದ್ದರು.

ಇದನ್ನೂ ವೀಕ್ಷಿಸಿ:  Kiccha 47 ಸ್ಪೆಷಲ್ ಪೋಸ್ಟರ್ ಬಿಟ್ಟು ಕುತೂಹಲ ಕೆರಳಿಸಿದ ಅಭಿನಯ ಚಕ್ರವರ್ತಿ!

Video Top Stories