Vikram Movie: ಎಲ್ಲರನ್ನೂ ಹೇಗೆ ಗೌರವಿಸಬೇಕು ಅನ್ನೋದನ್ನ ನಾನು ಅಣ್ಣಾವ್ರಿಂದ ಕಲಿತೆ: ಕಮಲ್ ಹಾಸನ್

'ವಿಕ್ರಮ್' ಸಿನಿಮಾ ಜೂನ್​ 3ರಂದು ತೆರೆಗೆ ಬರುತ್ತಿದ್ದು, ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು ಚಿತ್ರದ ನಾಯಕ ಕಮಲ್​ ಹಾಸನ್ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕಮಲ್ ಹಾಸನ್ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದು, ಕನ್ನಡದ ಸ್ಟಾರ್ಸ್ ಜತೆ ಮತ್ತು ಬೆಂಗಳೂರಿನ ಜತೆ ಒಳ್ಳೆಯ ನಂಟಿದೆ.

Share this Video
  • FB
  • Linkdin
  • Whatsapp

'ವಿಕ್ರಮ್' ಸಿನಿಮಾ ಜೂನ್​ 3ರಂದು ತೆರೆಗೆ ಬರುತ್ತಿದ್ದು, ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು ಚಿತ್ರದ ನಾಯಕ ಕಮಲ್​ ಹಾಸನ್ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕಮಲ್ ಹಾಸನ್ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದು, ಕನ್ನಡದ ಸ್ಟಾರ್ಸ್ ಜತೆ ಮತ್ತು ಬೆಂಗಳೂರಿನ ಜತೆ ಒಳ್ಳೆಯ ನಂಟಿದೆ. ಇಂದು ಬೆಂಗಳೂರಿಗೆ ಆಗಮಿಸಿದ ವೇಳೆ ಸಿನಿಮಾ ಬಗ್ಗೆ ಹೇಳುವುದರ ಜತೆಗೆ ಅವರು ಇಲ್ಲಿನ ನೆನಪು, ರಾಜ್​ಕುಮಾರ್ ಹಾಗೂ ಅವರ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ‘ನಾನು 21ನೇ ವಯಸ್ಸಿನಲ್ಲಿ ಇದ್ದಾಗ ರಾಜ್‌ಕುಮಾರ್ ಅವರು ನನ್ನ ನಟನೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. 

Add Asianetnews Kannada as a Preferred SourcegooglePreferred

Vikram Movie: ಪುನೀತ್ ಇದ್ದಿದ್ದರೆ ಅವರ ಜೊತೆ ಸಿನಿಮಾ ಮಾಡುತ್ತಿದ್ದೆ: ಕಮಲ್ ಹಾಸನ್

‘ಪುಷ್ಪಕ ವಿಮಾನ’ ಸಿನಿಮಾ ಮೊದಲ ದಿನದ ಶೂಟಿಂಗ್​ ವೇಳೆ ಅವರು ಬಂದು ಬೆನ್ನು ತಟ್ಟಿದ್ದರು’ ಎಂದಿದ್ದಾರೆ ಕಮಲ್ ಹಾಸನ್. ‘ನನಗೆ ಕರ್ನಾಟಕ ಸಾಕಷ್ಟು ಗುರುಗಳನ್ನು ಕೊಟ್ಟಿದೆ. ಬೇರೆಯವರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿತಿದ್ದು ರಾಜ್​ಕುಮಾರ್ ಅವರಿಂದ. ಅವರು ತಮ್ಮ ಗುಣವನ್ನು ತಮ್ಮ ಮಕ್ಕಳಿಗೂ ನೀಡಿದ್ದಾರೆ. ನಾನು ಪುನೀತ್ ಹಾಗು ಅಣ್ಣಾವ್ರು ಇಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಮನೆಗೆ ನಾನು ಹೋಗಿದ್ದೆ. ಈಗ ಎನನ್ನೂ ಮಾಡಲು ಆಗುವುದಿಲ್ಲ. ಎಲ್ಲ ವಿಧಿ ಆಟ’ ಎಂದರು ಕಮಲ್ ಹಾಸನ್.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video