ಕಮಲ್ ಹಾಸನ್ ಪುತ್ರಿ ಎಷ್ಟು ಮದ್ಯ ಸೇವಿಸ್ತಾರೆ ಗೊತ್ತಾ?

ಶ್ರುತಿ ಹಾಸನ್  ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ವೈಯಕ್ತಿಕ ವಿಚಾರಕ್ಕೂ ಸುದ್ದಿ ಆಗುತ್ತಿರುತ್ತಾರೆ. ಆಲ್ಕೋಹಾಲ್ ಬಗ್ಗೆ  ಶ್ರುತಿ ಹಾಸನ್ ಗೆ  ಅಭಿಮಾನಿ ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿದ್ದಾರೆ. 

Share this Video
  • FB
  • Linkdin
  • Whatsapp

ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ವೈಯಕ್ತಿಕ ವಿಚಾರಕ್ಕೂ ಸುದ್ದಿ ಆಗುತ್ತಿರುತ್ತಾರೆ. ಆಲ್ಕೋಹಾಲ್ ಬಗ್ಗೆ ಶ್ರುತಿ ಹಾಸನ್ ಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿದ್ದಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದು, ಅನೇಕರು ವಿವಿಧ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟರು. ಈ ಸಂದರ್ಭದಲ್ಲಿ ಅಭಿಮಾನಿ ವಿಸ್ಕಿ, ಬಿಯರ್, ಕಾಕ್ಟೇಲ್​, ವೋಡ್ಕಾ ಇವುಗಳಲ್ಲಿ ನಿಮ್ಮಿಷ್ಟದ ಪಾನೀಯ ಯಾವುದು ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಶ್ರುತಿ ಹಾಸನ್ ಉತ್ತರಿಸಿದ್ದು, ನಾನು 6 ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿಲ್ಲ. ಹಾಗಾಗಿ ನಾನು ಆಲ್ಕೋಹಾಲ್ ಮುಟ್ಟುವುದಿಲ್ಲ. ಇವುಗಳಲ್ಲಿ ಯಾವುದೂ ನನ್ನ ಮೆಚ್ಚಿನ ಪಾನೀಯ ಅಲ್ಲ. ನಾನು ಕೆಲವೊಮ್ಮೆ ಆಲ್ಕೊಹಾಲ್​ ಇಲ್ಲದ ಬಿಯರ್ ಕುಡಿಯುತ್ತೇನೆ ಎಂದು ಅವರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


Related Video