Asianet Suvarna News Asianet Suvarna News

ಪ್ರಭಾಸ್ ಚಿತ್ರ 1000 ಕೋಟಿ ಗಳಿಸೋದು ಅನುಮಾನವೇ?: ಕಲ್ಕಿ ಸಿನಿಮಾ ಇಷ್ಟು ಬೇಗ ಯಾಕೆ ಓಟಿಟಿಗೆ?

ನಾಗ್ ಅಶ್ವಿನ್ ನಿರ್ದೇಶನದ ಈ ಪೌರಾಣಿಕ ಮತ್ತು ವೈಜ್ಞಾನಿಕ ಆಕ್ಷನ್ ಸಿನಿಮಾವು ಈಗಾಗಲೇ ತನ್ನ ಥಿಯೇಟರ್ ಬಿಡುಗಡೆಯೊಂದಿಗೆ ವಿಶ್ವದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ. ಜೂನ್ 27 ರಂದು ಬಿಡುಗಡೆಯಾದ ಕಲ್ಕಿ 2898 ಎಡಿ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದೆ. 

First Published Jul 11, 2024, 6:26 PM IST | Last Updated Jul 11, 2024, 6:26 PM IST

ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್- ಅಮಿತಾಬ್ ಬಚ್ಚನ್ ನಟನೆಯ 'ಕಲ್ಕಿ 2898 AD' ಸಿನಿಮಾ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಂಡು ಭರ್ಜರಿ ಸದ್ದು ಮಾಡ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಪೌರಾಣಿಕ ಮತ್ತು ವೈಜ್ಞಾನಿಕ ಆಕ್ಷನ್ ಸಿನಿಮಾವು ಈಗಾಗಲೇ ತನ್ನ ಥಿಯೇಟರ್ ಬಿಡುಗಡೆಯೊಂದಿಗೆ ವಿಶ್ವದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ. ಜೂನ್ 27 ರಂದು ಬಿಡುಗಡೆಯಾದ ಕಲ್ಕಿ 2898 ಎಡಿ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಆರು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ವ್ಯಾಪಕ ಮೆಚ್ಚುಗೆ ಮತ್ತು ಗಣನೀಯ ಗಳಿಕೆ ಕಂಡಿದೆ. ಈಗ ಒಟಿಟಿ ವೇದಿಕೆಗೆ ಬಿಡುಗಡೆಯಾಗಲು ಸಿದ್ಧವಾಗಿದೆ. 

ಅಮೇಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕಲ್ಕಿ 2898 ಎಡಿ 600 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿ ದಾಖಲೆ ಬರೆದಿದೆ. ಚಿತ್ರವು ತನ್ನ ಥಿಯೇಟರ್‌ಗಳಿಂದ ಹೊರ ಬರುವ ವೇಳೆಗೆ 1000 ಕೋಟಿ ರೂಪಾಯಿಗಳನ್ನು ಗಳಿಸೋದು ಅನುಮಾನ ಹುಟ್ಟುಹಾಕಿದೆ. ವೈಜಯಂತಿ ಮೂವೀಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಸೇರಿದಂತೆ ಬಹುತಾರಾಂಗಣವಿದೆ. ಪೋಷಕ ಪಾತ್ರಗಳಲ್ಲಿ ದಿಶಾ ಪಟಾನಿ, ಶಾಶ್ವತ ಚಟರ್ಜಿ, ವಿಜಯದೇವರಕೊಂಡ, ಮೃಣಾಲ್ ಠಾಕೂರ್, ಅನ್ನಾ ಬೇನ್, ಎಸ್‌ಎಸ್‌ ರಾಜಮೌಳಿ ಮತ್ತು ಶೋಭನಾ ನಟಿಸಿದ್ದಾರೆ.