Prabhas: ಉಪ್ಪಿ ಸ್ಟೈಲ್‌ನಲ್ಲಿ ಜುಟ್ಟು ಕಟ್ಕೊಂಡು ಬಂದ ಪ್ರಭಾಸ್..! ಇದು ನಟನ ಶಿವರಾತ್ರಿ ಕಲ್ಕಿ ಹೊಸ ಅವತಾರ..!
ಯಂಗ್ ರೆಬಲ್ ಸ್ಟಾರ್ ನಟನೆಯ 'ಕಲ್ಕಿ 2898AD' ಸಿನಿಮಾ ಭಾರೀ ಹೈಪ್ ಸೃಷ್ಟಿಸಿದೆ. ಪ್ರಭಾಸ್ ಹೀರೋ ಎನ್ನುವ ಕಾರಣಕ್ಕೆ ಮಾತ್ರವಲ್ಲ 'ಕಲ್ಕಿ 2898AD' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆಯಂತಹ ಘಟಾನು ಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.
'ಕಲ್ಕಿ 2898AD'ಸಿನಿಮಾ(Kalki 2898 AD)ಕೋಟಿಗೂ ಅಧಿಕ ಬಜೆಟ್‌ನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾವಾಗಿ ಸಿದ್ಧವಾಗುತ್ತಿದೆ. ಹೀಗಾಗಿ ಕಲ್ಕಿ ಬಗ್ಗೆ ಕಲರ್ ಕಲರ್ ನಿರೀಕ್ಷೆಗಳಿವೆ. ಈ ನಿರೀಕ್ಷೆಗಳನ್ನ ಮತ್ತಷ್ಟು ದುಪ್ಪಟ್ಟಾಗಿಸೋ ಸುದ್ದಿಯೊಂದು ಈಗ ರಿವೀಲ್ ಆಗಿದೆ. ಅದು ಪ್ರಭಾಸ್‌ರ(Prabhas).
ಕಲ್ಕಿ ಪ್ರಭಾಸ್ ನಟನೆಯ ಪ್ಯಾನ್ ವರ್ಲ್ಡ್ ಮೂವಿ. ಇದು ಎಪಿಕ್ ಸೈನ್ಸ್ ಫಿಕ್ಷನ್ ಸಿನಿಮಾ ಅನ್ನೋದು ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ. ಫಸ್ಟ್ ಟೈಂ ಪ್ರಭಾಸ್ ಇಂತದ್ದೊಂದು ಕತೆಗೆ ಹೀರೋ ಆಗಿದ್ದಾರೆ. ಈಗ ಮಹಾಶಿವರಾತ್ರಿ ಹಬ್ಬಕ್ಕೆ ಪ್ರಭಾಸ್‌ರ ಫಸ್ಟ್ ಲುಕ್ ರಿಲೀಸ್(First Look Released) ಜುಟ್ಟು ಕಟ್ಟಿಕೊಂಡು ಮೈ ತುಂಬಾ ಟ್ಯಾಟು ಹಾಕಿಕೊಂಡು ಭೈರವನ ರೀತಿ ಪ್ರಭಾಸ್ ದರ್ಶನ ಕೊಟ್ಟಿದ್ದಾರೆ.'ಮಹಾನಟಿ' ಸಿನಿಮಾ ನಿರ್ದೇಶಿಸಿದ್ದ ನಾಗ್ ಅಶ್ವಿನ್ ಆಕ್ಷನ್ ಕಟ್‌ನಲ್ಲಿ 'ಕಲ್ಕಿ 2898AD' ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಒಂದು ಕಲ್ಕಿ ಅವತಾರ ಆದ್ರೆ ಮತ್ತೊಂದು ಭೈರವನ ಲುಕ್. ಹೀಗಾಗಿ ಡಾರ್ಲಿಂಗ್ ಫ್ಯಾನ್ಸ್ ಪ್ರಭಾಸ್‌ರ ಎರಡು ಅವತಾರಗಳ ದರ್ಶನ ಪಡೆಯಲಿದ್ದಾರೆ. ಅಶ್ವಥಾಮನಾಗಿ ಅಮಿತಾಬ್ ಬಚ್ಚನ್, ಕಲಿ ಆಗಿ ಕಮಲ್ ಹಾಸನ್, ಪದ್ಮ ಆಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: Yash: ಬ್ಲೇಸರ್ ಹಾಕಿ ತಲೆಗೆ ಟವೆಲ್ ಕಟ್ಟಿ ಬಂದ ರಾಕಿಂಗ್ ಸ್ಟಾರ್..! ಹೊಸ ಲುಕ್‌ಗೆ ವಾವ್ಹ್ ಟಾಕ್ಸಿಕ್ ಎಂದ ಫ್ಯಾನ್ಸ್..!