Asianet Suvarna News Asianet Suvarna News

ಡಾರ್ಲಿಂಗ್ ಪ್ರಭಾಸ್ ಬುದುಕಿಗೆ ಬಂದ 'ಬುಜ್ಜಿ': ಕಲ್ಕಿ 2898 AD ಚಿತ್ರದಲ್ಲಿ ಭೈರವನ ಆಪ್ತ ಗೆಳೆಯ ಈತ!

ಕಲ್ಕಿ ಸಿನಿಮಾದ ಬುಜ್ಜಿಯ ಟೀಸರ್ ಬಿಡುಗಡೆ ಕಾರ್ಯಕ್ರಮ ಹೈದರಾಬಾದ್ನಲ್ಲಿ ಮಾಡಲಾಗಿದೆ. ದೊಡ್ಡ ಗ್ರೌಂಡ್ನಲ್ಲಿ ಅದ್ಧೂರಿ ಸೆಟ್ ಹಾಕಿ ಈ ಪ್ರೋಗ್ರಾಂ ಮಾಡಿದ್ದಾರೆ.

ನಟ ಫ್ರಭಾಸ್ ಫ್ಯಾನ್ಸ್ ಈಗ ಕಲ್ಕಿ 2898 ad ಸಿನಿಮಾ(Kalki movie) ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಪ್ರಭಾಸ್(Prabhas) ಮಾತ್ರ ಇತ್ತೀಚೆಗೆ ಸಪ್ರೈಸ್ ಸುದ್ದಿಯೊಂದನ್ನ ಹೇಳಿದ್ರು. ತನ್ನ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಬದುಕಿನಲ್ಲಿ ಒಬ್ಬ ಸ್ಪೆಷಲ್ ವ್ಯಕ್ತಿ ಬರಲಿದ್ದಾರೆ ಎಂದು ಬೆರೆದುಕೊಂಡಿದ್ರು. ಆ ವ್ಯಕ್ತಿ ಯಾರು ಎಂದು ಪ್ರಭಾಸ್ ಫಾಲೋವರ್ಸ್ ಹುಡುಕೋಕೆ ಶುರು ಮಾಡಿದ್ರು. ಪ್ರಭಾಸ್ ಮದುವೆ ಆಗುತ್ತಿದ್ದಾರೆ, ಪ್ರಭಾಸ್ ಬದುಕಿಗೆ ಹೊಸ ಹುಡುಗಿ ಎಂಟ್ರಿ ಆಗಿದೆ ಅಂತೆಲ್ಲ ಕಮೆಂಟ್ ಮಾಡಿದ್ರು, ಈಗ ಪ್ರಭಾಸ್ ಬದುಕಿಗೆ ನಿಜಕ್ಕೂ ಹೊಸ ವ್ಯಕ್ತಿ ಎಂಟ್ರಿ ಆಗಿದ್ದಾರೆ. ಅವ್ರೇ ಬುಜ್ಜಿ(Bujji Teaser). ನಟ ಪ್ರಭಾಸ್ ಬದುಕಿಗೆ ಬುಜ್ಜಿ ಎಂಟ್ರಿಯಾಗಿದೆ. ಅರೆ ಯಾರು ಈ ಬುಜ್ಜಿ ಅಂತೀರಾ.? ಅವ್ರು ಕಲ್ಕಿ ಸಿನಿಮಾದಲ್ಲಿರೋ ಒಂದು ಕ್ಯಾರೆಕ್ಟರ್. ಈ ಬುಜ್ಜಿಯನ್ನೇ ತನ್ನ ಬುದುಕಿನಲ್ಲಿ ಎಂಟ್ರಿ ಆಗ್ತಿರೋ ಸ್ಪೆಷಲ್ ವ್ಯಕ್ತಿ ಅಂತ ಪ್ರಭಾಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು. ಇದೀಗ ‘ಕಲ್ಕಿ 2898 ಎಡಿ’ ಸಿನಿಮಾದ ಹೊಸ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಮುಖ ಪಾತ್ರಗಳಾದ ‘ಭೈರವ’ ಹಾಗೂ ‘ಬುಜ್ಜಿ’ಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಲಾಗಿದೆ. ಟಾಲಿವುಡ್‌ ಮಾತ್ರವಲ್ಲದೆ, ಇಡೀ ಭಾರತ ಕಲ್ಕಿ 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಈಗ ಭೈರವ ಹಾಗು ಬುಜ್ಜಿಯ ಟೀಸರ್ ಹೊರ ಬಂದಿದೆ. ಭೈರವನ ರೋಲ್ ಮಾಡಿರೋ ಪ್ರಭಾಸ್ ಬುಜ್ಜಿ ಜೊತೆ ಸ್ನೇಹ ಹೇಗಿರುತ್ತೆ ಅಂತ ತೋರಿಸಲಾಗಿದೆ. ಕಲ್ಕಿ ಸಿನಿಮಾದ ಬುಜ್ಜಿಯ ಟೀಸರ್ ಬಿಡುಗಡೆ ಕಾರ್ಯಕ್ರಮ ಹೈದರಾಬಾದ್ನಲ್ಲಿ ಮಾಡಲಾಗಿದೆ. ದೊಡ್ಡ ಗ್ರೌಂಡ್ನಲ್ಲಿ ಅದ್ಧೂರಿ ಸೆಟ್ ಹಾಕಿ ಈ ಪ್ರೋಗ್ರಾಂ ಮಾಡಿದ್ದಾರೆ. ಕಲ್ಕಿಯಲ್ಲಿ ಪ್ರಭಾಸ್ ಬಳಸೋ ವಾಹನದಲ್ಲೇ ಕಾರ್ಯಕ್ರಮಕ್ಕೆ ಪ್ರಭಾಸ್ ಎಂಟ್ರಿ ಕೊಟ್ಟಿದ್ದು ವಿಶೇಷವಾಗಿತ್ತು.

ಇದನ್ನೂ ವೀಕ್ಷಿಸಿ:  ಧ್ರುವ ಸರ್ಜಾ ನಟನೆಯ ಮಾರ್ಟಿನ್ ಹೊಸ ನ್ಯೂಸ್! ಕೆಡಿ ಮೊದಲು ಹೊರ ಬೀಳಲಿದೆ ನಯಾ ಮ್ಯಾಟರ್..!