ನಾಳೆ ಮುಂಬೈನಲ್ಲಿ ಕಬ್ಜ ಟ್ರೈಲರ್‌ ರಿಲೀಸ್: ಕಾದಿದೆ ಬಿಗ್ ಸರ್ಪ್ರೈಸ್?

ಕಬ್ಜ ಸಿನಿಮಾದ ಟ್ರೈಲರ್'ಗಾಗಿ ಬಾಲಿವುಡ್ ಸಿನಿ ದುನಿಯಾ ಸಿದ್ಧವಾಗ್ತಿದ್ದು, ಮುಂಬೈನಲ್ಲಿ ಬಿಗ್ ಇವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡಲಾಗ್ತಿದೆ.

Share this Video
  • FB
  • Linkdin
  • Whatsapp

ನಾಳೆ ಮುಂಬೈನಲ್ಲಿ ಕಬ್ಜ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ದೊಡ್ಡ ಕಾರ್ಯಕ್ರಮ ನಡೆಯಲಿದೆ. ನಿರ್ದೇಶಕ ಆರ್. ಚಂದ್ರು ಶ್ರಮದ ಫಲ ಎಲ್ಲೆಡೆ ಪ್ರಚಾರ ಪಡೆಯುತ್ತಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಅವರ ಕೆಲಸಕ್ಕೆ ಮತ್ತೊಮ್ಮೆ ಭೇಷ್ ಅನ್ನೋ ಮೆಚ್ಚುಗೆ ಸಿಕ್ಕಿದೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶ್ರೀಯಾ ಶರಣ್ ಮೋಡಿ ಮಾಡಿದ್ದಾರೆ. ಇದೆಲ್ಲಾ ಒಂದ್ ಕಡೆ ಆದ್ರೆ ಮತ್ತೊಂದ್ ಕಡೆ ಮೊನ್ನೆಯಷ್ಟೆ ಆಡಿಯೋ ಬಿಡುಗಡೆಯಲ್ಲಿ ಉಪ್ಪಿ ಒಂದ್ ಮಾತ್ ಹೇಳಿದ್ರು. ಕಬ್ಜದಲ್ಲಿ ಮತ್ತೊಂದು ದೊಡ್ಡ ಸರ್ಪ್ರೈಸ್ ಇದೆ ಅಂತ ಅನೌನ್ಸ್ ಮಾಡಿದ್ರು. ಆ ಸರ್ಪ್ರೈಸ್ ಕಬ್ಜ ಟ್ರೈಲರ್'ನಲ್ಲಿ ರಿವೀಲ್ ಆಗುತ್ತಾ ಅನ್ನೋ ಕುತೂಹಲ ಮೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video