
ಜ್ಯೂ. NTR ಹೊಸ ಲುಕ್ ಫುಲ್ ವೈರಲ್: 30ನೇ ಚಿತ್ರಕ್ಕೆ 'ತಾರಕ್' ಸ್ಟೈಲ್
ಜ್ಯೂನಿಯರ್ ಎನ್.ಟಿ.ಆರ್ ಹೊಸ ಲುಕ್'ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸರ್ಪ್ರೈಸ್ ಆಗಿದ್ದಾರೆ.
ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಸೂಪರ್ ಸಕ್ಸಸ್ ನಂತರ ಯಂಗ್ ಟೈಗರ್ ಎನ್.ಟಿ.ಆರ್ ಯಾವುದೇ ಹೊಸ ಚಿತ್ರದ ಶೂಟ್ ಶುರು ಮಾಡಿಲ್ಲ. ಈ ನಡುವೆ ಅವರ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಹೊಸ ಸಿನಿಮಾಗಾಗಿಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ತಾರಕ್'ಗೆ ಹೊಸ ಲುಕ್ ಕೊಟ್ಟಿದ್ದು, ಈ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಎನ್‌ಟಿಆರ್ 30ನೇ ಚಿತ್ರವನ್ನ ಕೊರಟಲಾ ಶಿವ ನಿರ್ದೇಶನ ಮಾಡಲಿದ್ದು, ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಸಧ್ಯ ಆ ಸಿನಿಮಾಗೆ ಈ ಸ್ಟೈಲ್ ಎಂಬ ಟಾಕ್ ಜೋರಾಗಿದೆ.
Add Asianetnews Kannada as a Preferred Source
