ತೆರೆ ಮೇಲಿನ ಹೀರೋ ರಿಯಲ್ ಲೈಫ್ನಲ್ಲಿ ವಿಲನ್ ಆಗಿ ಬದಲಾಗಿದ್ದೇಗೆ? ಏನಿದು ಫೈರಿಂಗ್ ಕಥೆ!
ಆತ ಕಷ್ಟ ಪಟ್ಟು ಬೆಳೆದು ಬಂದವನು. ಒಂದು ಸಣ್ಣ ಧಾರವಾಹಿಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡು ತನ್ನ ಒಳ್ಳೆ ಅಭಿನಯದ ಮೂಲಕ ಟಿವಿ ಪ್ರೇಕ್ಷಕರ ಮನ ಗೆದ್ದಿದ್ದ. ನಂತರ ತನ್ನ ಪ್ರೊಡಕ್ಷನ್ ಸಂಸ್ಥೆಯಿಂದಲೇ ಒಂದು ಸಿನಿಮಾ ಶುರು ಮಾಡಿದ. ತಾನೇ ಹೀರೋ. ಸಿನಿಮಾ ಸೆಟ್ ಏರಿ 6 ತಿಂಗಳಾಗಿದೆ ಅಷ್ಟೇ. ಇವತ್ತು ಅದೇ ಹೀರೋ ರಿಯಲ್ ಲೈಫ್ನಲ್ಲಿ ವಿಲನ್ ಆಗಿ ಬದಲಾಗಿದ್ದಾನೆ. ತನಗೆ ಆ್ಯಕ್ಷನ್ ಕಟ್ ಹೇಳಿದ ನಿದೇರ್ಶಕನ ಹಣೆಗೆ ಗನ್ ಇಟ್ಟು ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಏನಿದು ನಿದೇರ್ಶಕ ಮತ್ತು ನಟನ ಫೈರಿಂಗ್ ಕಥೆ?
ಹೌದು.. ಮೀಟಿಂಗ್ ಅಂತ ಆ ಮನೆಯಲ್ಲಿ ಇಡೀ ಸಿನಿಮಾ ಕ್ರೂ ಕೂತಿತ್ತು.. ಆದ್ರೆ ಇದೇ ಟೈಂನಲ್ಲಿ ನಿದೇರ್ಶಕ ಮತ್ತು ಹೀರೋ ತಾಂಡವ ನಡುವೆ ಮಾತಿನ ಚಕಮಕಿ ನಡೆಯುತ್ತೆ.. ಆದ್ರೆ ಇದೇ ಜಗಳದ ನಡುವೆ ಈ ಹೀರೋ ಅನ್ನಿಸಿಕೊಂಡವನು ಸೀದಾ ಗನ್ ತೆಗೆದು ಭರತ್ ತಲೆಗೆ ಇಟ್ಟುಬಿಟ್ಟ.. ಆದ್ರೆ ಆತನ ಟೈಂ ಚೆನ್ನಾಗಿತ್ತು ಆತ ಬದುಕುಳಿದುಬಿಟ್ಟ. ಅಷ್ಟಕ್ಕೂ ಅವರಿಬ್ಬರ ನಡುವೆ ಅಂಥದ್ದೇನು ನಡೀತು?