
ಮಾಡರ್ನ್ ಡ್ರೆಸ್‌ನಲ್ಲಿ ಸೂರ್ಯವಂಶದ ಸೊಸೆ: ‘ನೀರೆಲ್ಲಿ ಮೇಡಂ..?’ ಎಂದ ಪಾಂಡವಪುರ ಜನ
ಸೂರ್ಯವಂಶದಲ್ಲಿ ಇಶಾ ಡಿಸಿಯಾಗಿ ಪಾಂಡವಪುರಕ್ಕೆ ನೀರು ಕೊಡಿಸೋ ದೃಶ್ಯ ಇದೆ. ಸೋ ಡಿಸಿ ಮೇಡಂ ನೀವು ಸಹಿ ಮಾಡಿ ಇಪ್ಪತ್ತಾರು ವರ್ಷ ಆಯ್ತು ಇನ್ನೂ ಪಾಂಡವಪುರಕ್ಕೆ ನೀರು ಬಂದಿಲ್ಲ ಅಂತ ಕೆಲವರು ಕಿಚಾಯಿಸಿದ್ದಾರೆ.
ಕೆಲವು ಸಿನಿಮಾಗಳು ತೆರೆಗೆ ಬಂದು ಅದೆಷ್ಟೇ ವರ್ಷ ಕಳೆದರು ಅವುಗಳ ಕುರಿತ ಚರ್ಚೆ ಮಾತ್ರ ನಿಲ್ಲೋದಿಲ್ಲ. ಸದ್ಯ ಅದೇ ರೀತಿ ಭಾರಿ ಚರ್ಚೆಯಲ್ಲಿರೋದು ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ. ಅಷ್ಟಕ್ಕೂ ಜನ ಸೂರ್ಯವಂಶನ ನೆನಪು ಮಾಡಿಕೊಂಡಿರೋದು ಸೂರ್ಯವಂಶದ ಸೊಸೆ ಇಶಾ ಕೊಪ್ಪಿಕರ್ ಕಾರಣಕ್ಕೆ. ನಿಮಗೆಲ್ಲಾ ಸೂರ್ಯವಂಶ ಸಿನಿಮಾ ನೆನಪಿದೆಯಲ್ವಾ..? ಯಾರ್ ತಾನೆ ಈ ಚಿತ್ರವನ್ನ ಮರೆಯೋದಕ್ಕೆ ಸಾಧ್ಯ. ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಂಡಿರೋ ಈ ಸಿನಿಮಾವನ್ನ ಕನ್ನಡದಲ್ಲಿ ಎಸ್.ನಾರಾಯಣ್ ನಿರ್ದೇಶನ ಮಾಡಿದ್ರು. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಮಿಂಚಿ ಮೋಡಿ ಮಾಡಿದ್ರು.
1999ರಲ್ಲಿ ಬಂದ ಸೂರ್ಯವಂಶ ಚಿತ್ರವನ್ನ ಈಗ ಮತ್ತೆ ಜನ ನೆನಪು ಮಾಡಿಕೊಳ್ತಾ ಇದ್ದಾರೆ. ಅದಕ್ಕೆ ಕಾರಣ ಸೂರ್ಯವಂಶದ ಸೊಸೆ ಪದ್ಮಕ್ಕ.. ಅರ್ಥಾತ್ ಇಶಾ ಕೊಪ್ಪಿಕರ್. ಬಾಲಿವುಡ್ ಬೆಡಗಿ ಇಶಾ ಕೊಪ್ಪಿಕರ್ ಈ ಸಿನಿಮಾದಲ್ಲಿ ನಾಯಕಿ ಪದ್ಮಾ ಪಾತ್ರ ಮಾಡಿದ್ರು. ಕನಕಮೂರ್ತಿ ಬಾಳಿನಲ್ಲಿ ಬೆಳಕು ತಂದು ಸೂರ್ಯವಂಶದ ಸೊಸೆಯಾಗಿ ಬೆಳಗುವ ತೂಕದ ಪಾತ್ರ ಮಾಡಿದ್ರು. ಇಶಾ ಇನ್ನೂ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಜನಕ್ಕೆ ಸೂರ್ಯವಂಶನೇ ಆಲ್ ಟೈಂ ಫೆವರೀಟು. ಇಂಥಾ ಇಶಾ ಮೊನ್ನೆ ಸೋಷಿಯಲ್ ಮಿಡಿಯಾದಲ್ಲಿ ಮಾಡರ್ನ್ ಡ್ರೆಸ್‌ನಲ್ಲಿ ಒಂದು ಬೋಲ್ಡ್ ಆಗಿರೋ ಫೋಟೋ ಹಾಕಿದ್ದಾರೆ.
ಅದನ್ನ ನೋಡಿದ ಜನ ತಹರೇವಾರಿ ಕಾಮೆಂಟ್ ಮಾಡ್ತಾ ಇದ್ದಾರೆ. ಸೂರ್ಯವಂಶದಲ್ಲಿ ಇಶಾ ಡಿಸಿಯಾಗಿ ಪಾಂಡವಪುರಕ್ಕೆ ನೀರು ಕೊಡಿಸೋ ದೃಶ್ಯ ಇದೆ. ಸೋ ಡಿಸಿ ಮೇಡಂ ನೀವು ಸಹಿ ಮಾಡಿ ಇಪ್ಪತ್ತಾರು ವರ್ಷ ಆಯ್ತು ಇನ್ನೂ ಪಾಂಡವಪುರಕ್ಕೆ ನೀರು ಬಂದಿಲ್ಲ ಅಂತ ಕೆಲವರು ಕಿಚಾಯಿಸಿದ್ದಾರೆ. ಇನ್ನೂ ಕೆಲವರು ಸೂರ್ಯವಂಶದ ಸೊಸೆಯಾಗಿ ಇಂಥಾ ಡ್ರೆಸ್ ಹಾಕಿದ್ದೀರಲ್ಲ , ಇದು ಸರಿಯಲ್ಲ ಅಂತ ಸೀರಿಯಸ್ ಆಗಿ ಕಾಮೆಂಟ್ ಹಾಕಿದ್ದಾರೆ. ಒಟ್ನಲ್ಲಿ ಇಶಾ ಫೋಟೋಗೆ ಒಂದಕ್ಕಿಂತ ಇಂದು ಮಜವಾದ ಕಾಮೆಂಟ್ಸ್ ಬಂದಿವೆ. ಒಟ್ನಲ್ಲಿ ಸೂರ್ಯವಂಶ ಸಿನಿಮಾ ತೆರೆಗೆ ಬಂದು 26 ವರ್ಷವಾದ್ರೂ ಜನ ಅದರ ಗುಂಗಿಂದ ಹೊರಬಂದಿಲ್ಲ. ಈಗಲೂ ಇಶಾನ ಸೂರ್ಯವಂಶ ಸೊಸೆ ಅಂತಾನೆ ಕರೀತಾ ಇದ್ದಾರೆ. ಸದ್ಯ ಇಶಾಗೆ ತಮಗೆ ಬರ್ತಾ ಇರೋ ಕಾಮೆಂಟ್ಸ್ ನೋಡಿ ದಂಗಾಗಿದ್ದಾರೆ.