Asianet Suvarna News Asianet Suvarna News

Raataan Lambiyan song: 'ಶೇರ್ಷಾ' ಚಿತ್ರದ ಹಾಡಿಗೆ ಲಿಪ್ ಸಿಂಕ್ ಮಾಡಿದ ಆಫ್ರಿಕಾದ ಅಣ್ಣ-ತಂಗಿ

Dec 3, 2021, 4:47 PM IST
  • facebook-logo
  • twitter-logo
  • whatsapp-logo

ಬಾಲಿವುಡ್‌ನ (Bollywood) 'ಶೇರ್ಷಾ' (Shershaah) ಚಿತ್ರದ 'ರಾತನ್ ಲಂಬಿಯಾನ್' (Raataan Lambiyan) ಹಾಡು ಯೂಟ್ಯೂಬ್‌ನಲ್ಲಿ 454 ಮಿಲಿಯನ್ ವೀಕ್ಷಣೆಗಳೊಂದಿಗೆ ಸೂಪರ್ ಹಿಟ್ ಆಗಿದ್ದು, ಎಲ್ಲೆಲ್ಲೂ ಈ ಹಾಡು ವೈರಲ್ (Viral) ಆಗುತ್ತಿದೆ. ಇದರ ಜನಪ್ರಿಯತೆ ಭಾರತದಿಂದಾಚೆಗೂ ಹರಡಿದೆ. ಹೌದು! ಆಫ್ರಿಕಾದ ಅಣ್ಣ-ತಂಗಿ ಈ ಹಾಡಿಗೆ ಬಹಳ ಚೆನ್ನಾಗಿ ಲಿಪ್ ಸಿಂಕ್ ಮಾಡಿದ್ದಾರೆ. ಇದು ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಹಾಗೂ ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಇದೀಗ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸೆಲೆಬ್ರಿಟಿಗಳಿಂದ ಕೂಡ ವ್ಯಾಪಕವಾದ ಮೆಚ್ಚುಗೆಯನ್ನು ಪಡೆದಿದೆ. 'ಶೇರ್ಷಾ' ಚಿತ್ರದ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಕೂಡ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories