Asianet Suvarna News Asianet Suvarna News

ಪುಷ್ಪರಾಜ್ ಶ್ರೀವಲ್ಲಿ ಸೀರೆಗೆ ಭಾರಿ ಡಿಮ್ಯಾಂಡ್; ಏನಿದರ ವಿಶೇಷ?

 ಶ್ರೀವಲ್ಲಿ ಪಾತ್ರದಲ್ಲಿ ನಟಿಸಿರೋ ರಶ್ಮಿಕಾ ಸಾಮಿ ಸಾಮಿ ಅನ್ನೋ ಹಾಡಿನಲ್ಲಿ ಕೆಂಪು ಬಣ್ಣದ ಸೀರೆಯನ್ನ ತೊಟ್ಟು ಡಾನ್ಸ್ ಮಾಡಿದ್ರು. ಈ ಸೀರೆಗಾಗಿ ಈಗ ಹೆಂಗಳೆಯರು ಹುಡುಕುತ್ತಿದ್ದು ಭಾರಿ ಡಿಮ್ಯಾಂಡ್ ಬಂಡಿದೆಯಂತೆ.

ಈ ಸಿನಿಮಾನೆ ಹಾಗೆ, ಕಣ್ಣಿಗೆ ಹಬ್ಬ.. ಮನಸ್ಸಿಗೆ ಮುದ.. ಇದಿಷ್ಟೇ ಆಗಿದ್ರೆ ಒಕೆ.. ಸಿನಿಮಾ ಅನ್ನೋದು ಪ್ರತಿಯೊಬ್ಬರ ಮೇಲು ಒಂದಲ್ಲೊಂದು ಪರಿಣಾಮ ಬೀರುತ್ತೆ. ಸಿನಿಮಾದಲ್ಲಿ ನಟಿಸೋ ಕಲಾವಿದರ ಹಾಗೆ ನಾವೂ ಬದುಕಬೇಕು, ಕಾಣ್ಬೇಕು, ಕುಣಿಬೇಕು ಅಂತೆಲ್ಲಾ ಇಮ್ಯಾಜಿನೇಷನ್ಗೆ ಹೋಗ್ತಾರೆ ಪ್ರೇಕ್ಷಕರು. ಇಷ್ಟೆಲ್ಲಾ ಯಾಕ್ ಹೇಳುತ್ತಿದ್ದೇವೆ ಗೊತ್ತಾ.? ಅದು ರಶ್ಮಿಕಾ ಅವರ ಪುಪ್ಪ ಸಿನಿಮಾದ ಶ್ರೀವಲ್ಲಿಯ ಸೀರೆ ವಿಚಾರಕ್ಕೆ..ಹೌದು, ಒಂದ್ ಸಿನಿಮಾದಲ್ಲಿ ಹೀರೋ ಹೀರೋಯಿನ್ ತಡೋ ಬಟ್ಟೆ ಎಷ್ಟು ಮುಖ್ಯ ಅನ್ನೋದಕ್ಕೆ ಪುಷ್ಪ ಸಿನಿಮಾದ ಈ ಸೀರೆಯೇ ಸಾಕ್ಷಿ. ಶ್ರೀವಲ್ಲಿ ಪಾತ್ರದಲ್ಲಿ ನಟಿಸಿರೋ ರಶ್ಮಿಕಾ ಸಾಮಿ ಸಾಮಿ ಅನ್ನೋ ಹಾಡಿನಲ್ಲಿ ಕೆಂಪು ಬಣ್ಣದ ಸೀರೆಯನ್ನ ತೊಟ್ಟು ಡಾನ್ಸ್ ಮಾಡಿದ್ರು. ಈ ಸೀರೆಗಾಗಿ ಈಗ ಹೆಂಗಳೆಯರು ಹುಡುಕುತ್ತಿದ್ದು ಭಾರಿ ಡಿಮ್ಯಾಂಡ್ ಬಂಡಿದೆಯಂತೆ. ಯಾವ್ ಸೀರೆ ಶಾಪ್ಗೆ ಹೋದ್ರು ಶ್ರೀವಲ್ಲಿ ಸೀರೆ ಇದೆಯಾ ಅಂತ ಕೇಳುತ್ತಾರಂತೆ. 

Video Top Stories