Priyanka Chopra: ಗರ್ಭಿಣಿಯಾಗಲಿಲ್ಲ, ಬಾಣಂತಿಯೂ ಅಲ್ಲ, ಆದರೂ ಅಮ್ಮ ಆದ ಪಿಗ್ಗಿ

ಬಾಲಿವುಡ್‌ನ ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಆಗ್ತಿದ್ದಾರೆ. ಹೌದು ಈ ವಿಷಯ ಕೇಳಿ ಎಲ್ಲರಿಗೂ ಕೊಂಚ ಅಚ್ಚರಿ ಆಗಿರುವುದು ನಿಜ. ಯಾಕೆಂದರೆ ಪ್ರಿಯಾಂಕಾ ಗರ್ಭಿಣಿ ಆಗಿರುವ ಕುರಿತು ಎಲ್ಲೂ ಸುದ್ದಿನೇ ಆಗಿಲ್ಲ, ಆಕೆಯೂ ಸಹ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ ಹೇಗೆ ಇದು ಅಂತ ಯೋಚಿಸುತ್ತಿದ್ದೀರಾ!

Share this Video
  • FB
  • Linkdin
  • Whatsapp

ಬಾಲಿವುಡ್‌ನ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಾಯಿ ಆಗ್ತಿದ್ದಾರೆ. ಹೌದು ಈ ವಿಷಯ ಕೇಳಿ ಎಲ್ಲರಿಗೂ ಕೊಂಚ ಅಚ್ಚರಿ (Surprised) ಆಗಿರುವುದು ನಿಜ. ಯಾಕೆಂದರೆ ಪ್ರಿಯಾಂಕಾ ಗರ್ಭಿಣಿ (Pregnant) ಆಗಿರುವ ಕುರಿತು ಎಲ್ಲೂ ಸುದ್ದಿನೇ ಆಗಿಲ್ಲ, ಆಕೆಯೂ ಸಹ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ ಹೇಗೆ ಇದು ಅಂತ ಯೋಚಿಸುತ್ತಿದ್ದೀರಾ! ಬಾಡಿಗೆ ತಾಯಿ (Surrogacy) ಮೂಲಕ ಪ್ರಿಯಾಂಕಾ ಮಗು ಪಡೆದಿದ್ದಾರೆ. ಆ ಮೂಲಕ ಬದುಕಿನ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ಈ ವಿಷಯವನ್ನು ಸೋಶಿಯಲ್​ ಮೀಡಿಯಾ (Social Media) ಮೂಲಕ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ (Nick Jonas) ಹಂಚಿಕೊಂಡಿದ್ದಾರೆ.

Priyanka Chopra: ಇನ್‌ಸ್ಟಾಗ್ರಾಮ್‌ನಲ್ಲಿ ನೂತನ ದಾಖಲೆ ಬರೆದ ಬಾಲಿವುಡ್ ನಟಿ

'ಬಾಡಿಗೆ ತಾಯಿ ಮೂಲಕ ನಾವು ಮಗು ಪಡೆದಿದ್ದೇವೆ ಎಂಬುದನ್ನು ತಿಳಿಸಲು ತುಂಬ ಖುಷಿ ಆಗುತ್ತಿದೆ. ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿರುವ ಈ ವಿಶೇಷ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಅಂತ ಕೇಳಿಕೊಳ್ಳುತ್ತೇನೆ' ಎಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ವೈರಲ್ (Viral) ಆಗಿದ್ದು, ಬಾಲಿವುಡ್​ ಮತ್ತು ಹಾಲಿವುಡ್​ನ (Hollywood) ಅನೇಕ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಇನ್ನು ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಡೈವೋರ್ಸ್‌ ಪಡೆಯಲಿದ್ದಾರೆಂಬ ವಿಚಾರ ಬೆಂಕಿಯಂತೆ ಹರಡಿತ್ತು. ಆದರೆ ತಾಮ್ಮಿಬ್ಬರ ಸಂಸಾರದಲ್ಲಿ ಯಾವುದೇ ಬಿರುಕಿಲ್ಲ ಎಂದು ಪ್ರಿಯಾಂಕಾ ಸ್ಪಷ್ಟನೆ ನೀಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video