Mouni Roy Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ನಟಿ ಮೌನಿ ರಾಯ್
'ಕೆಜಿಎಫ್' ನಟಿ ಮೌನಿ ರಾಯ್ ಅವರು ಗೆಳೆಯ, ಉದ್ಯಮಿ ಸೂರಜ್ ನಂಬಿಯಾರ್ ಜತೆ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿದೆ.
'ಕೆಜಿಎಫ್' ನಟಿ ಮೌನಿ ರಾಯ್ (Mouni Roy) ಅವರು ಗೆಳೆಯ, ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಜತೆ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿದೆ. ಉದ್ಯಮಿ ಆಗಿರುವ ಸೂರಜ್ ನಂಬಿಯಾರ್ ಅವರು ಕೇರಳ ಮೂಲದವರು. ಮೌನಿ ರಾಯ್ ಪಶ್ಚಿಮ ಬಂಗಾಳದವರು ಹಾಗಾಗಿ ಎರಡೂ ಕುಟುಂಬದ ಸಂಪ್ರದಾಯದ ಪ್ರಕಾರ ಮದುವೆ ನಡೆದಿದೆ. ಮಲಯಾಳಿ ಪದ್ಧತಿಯಂತೆ ಮದುವೆ ನಡೆದಿದ್ದು, ಬೆಂಗಾಲಿ ಸಂಪ್ರದಾಯದ ಪ್ರಕಾರ ವಿವಾಹ ಶಾಸ್ತ್ರಗಳು ನೆರವೇರಿದೆ.
ಸಮುದ್ರ ತೀರದಲ್ಲಿ ಬೆಂಗಳೂರು ಹುಡುಗನನ್ನು ಮದುವೆ ಆಗುತ್ತಿದ್ದಾರೆ ನಟಿ Mouni Roy?
ಇನ್ನು ಹಿಂದಿ ಕಿರುತೆರೆಯಲ್ಲಿ ಮೌನಿ ರಾಯ್ ಅಪಾರ ಜನಪ್ರಿಯತೆ ಗಳಿಸಿದ್ದು, 2018ರಲ್ಲಿ ತೆರೆಗೆ ಬಂದ ‘ಗೋಲ್ಡ್’ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಅದೇ ವರ್ಷ ‘ಕೆಜಿಎಫ್’ ಹಿಂದಿ ವರ್ಷನ್ನ ‘ಗಲಿ ಗಲಿ..’ ಹಾಡಿಗೆ ಮೌನಿ ಹೆಜ್ಜೆ ಹಾಕಿದರು. ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment