Asianet Suvarna News Asianet Suvarna News

ಪಠಾಣ್ ಸಿನಿಮಾಗೆ ಭಾರೀ ಡಿಮ್ಯಾಂಡ್: ಟಿಕೆಟ್ ದರ ಕೇಳಿದ್ರೆ ನೀವು ಶಾಕ್ ಆಗ್ತೀರಾ!

ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ  ಪಠಾಣ್ ಸಿನಿಮಾದ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಇಲ್ಲಿದೆ ಡಿಟೇಲ್ಸ್.
 

ಶಾರುಖ್ ಖಾನ್,ದೀಪಿಕಾ ಪಡುಕೋಣೆ ಹಾಗೂ ಜಾನ್‌ ಅಬ್ರಹಾಂ ನಟಿಸಿರುವ ಪಠಾಣ್ ಸಿನಿಮಾಕ್ಕೆ ಫುಲ್‌ ಡಿಮ್ಯಾಂಡ್‌ ಕ್ರಿಯೆಟ್‌ ಆಗಿದೆ. ಪಠಾಣ್ ಸಿನಿಮಾವನ್ನು ಬಾಯ್ಕಟ್‌ ಮಾಡಿ ಎಂಬ ಕೂಗು ಒಂದೆಡೆಯಾದರೆ, ಇನ್ನೊಂದೆಡೆ ಸಿನಿಮಾದ ಟಿಕೆಟ್ ದರ ಎಲ್ಲರಿಗೂ ಶಾಕ್ ನೀಡಿದೆ. ಈ ಸಿನಿಮಾದ ಟಿಕೆಟ್‌ ಬೆಲೆ  2,100 ರೂ. ಅಂತೆ. ದೆಹಲಿಯಲ್ಲಿ ಈಗಾಗಲೇ ಟಿಕೆಟ್‌ ಬುಕ್‌ ಆಗಿ, ಸೋಲ್ಡೌಟ್‌ ಕೂಡ ಆಗಿದೆ. ಮುಂಬೈನಲ್ಲಿ ಟಿಕೆಟ್‌ ಬೆಲೆ 1,500 ಹಾಗೂ ಬೆಂಗಳೂರಿನಲ್ಲಿ 800ರಿಂದ 1,500 ಹೀಗೆ ಒಂದೊಂದು ಕಡೆ ಒಂದೊಂದು ರೇಟ್‌ ಇದೆ. ಒಟ್ಟಿನಲ್ಲಿ ಪಠಾಣ್‌ ಸಿನಿಮಾ ಮೇಲೆ ಎಲ್ಲರ ನಿರೀಕ್ಷೆ ಜೋರಾಗಿದ್ದು, ಸಿನಿಮಾ ಹಿಟ್‌ ಆಗುತ್ತಾ ಅಥವಾ ಇಲ್ವಾ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇನ್ನು ಕೆಲವರು ಇದು ಅವತಾರ್‌ ಸಿನಿಮಾನಾ ಇಷ್ಟು ಬೆಲೆ ಇಟ್ಟಿದ್ದಾರೆ ಎಂದು ಕೂಡಾ ಮಾತಾಡಿ ಕೊಳ್ಳುತ್ತಿದ್ದಾರೆ.

Video Top Stories