ಅಬ್ಬಬ್ಬಾ ಏನೀ 'ರಾಮಾಯಣ'ದ ದೃಶ್ಯ ವೈಭವ: ರಾಮನ ಬಾಣ.. ರಾವಣನ ತೀಕ್ಷ್ಣ ನೋಟ!

ರಣ್​ಬೀರ್ ರಾಮನಾಗಿ ಬಿಲ್ವಿದ್ಯೆ ಪ್ರದರ್ಶಿಸೋ ದೃಶ್ಯ ಇದ್ರೆ ಯಶ್‌ರ ಒಂದೇ ಒಂದು ತೀಕ್ಷ್ಣ ನೋಟದ ಝಲಕ್ ಮಾತ್ರ ಇದೆ. ಅಷ್ಟು ಮಾತ್ರವೇ ಫ್ಯಾನ್ಸ್​ನ ಎಕ್ಸೈಟ್ ಮಾಡಿದೆ.

Share this Video

ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್ ವರ್ಲ್ಡ್ ಮೂವಿ ರಾಮಾಯಣದ ಫಸ್ಟ್ ಗ್ಲಿಂಪ್ಸ್ ಹೊರಬಂದಿದೆ. ಇಡೀ ಜಗತ್ತೇ ಕಾಯ್ತಾ ಇದ್ದ ಈ ಬಿಗ್ ಬಜೆಟ್ , ಎಪಿಕ್ ಸಿನಿಮಾದ ಮೊದಲ ಝಲಕ್ ನೋಡಿದವರು ಅಬ್ಬಬ್ಬಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ರಣ್​ಬೀರ್ ಕಪೂರ್ ರಾಮನಾಗಿ - ಯಶ್ ರಾವಣನಾಗಿ ಮಿಂಚಲಿರೋ ಈ ಮೂವಿಯ ಟೈಟಲ್ ಗ್ಲಿಂಪ್ಸ್ ಕಿಚ್ಚು ಹಚ್ಚಿದೆ. ರಾಕಿಂಗ್ ಸ್ಟಾರ್ ಯಶ್ ರಾಮಾಯಣ ಸಿನಿಮಾದಲ್ಲಿ ನಟಿಸ್ತಾ ಇರೋ ಸುದ್ದಿ ಬಂದು ವರ್ಷದ ಮೇಲಾಯ್ತು. ಆದ್ರೆ ಇದೂವರೆಗೂ ಈ ತಂಡ ಒಂದೇ ಒಂದು ಆಫೀಷಿಯಲ್ ಪೋಸ್ಟರ್​ನ ಕೂಡ ರಿಲೀಸ್ ಮಾಡಿರಲಿಲ್ಲ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿದ ಬಳಿಕ ಸಿನಿಮಾದ ಮೊದಲ ಗ್ಲಿಂಪ್ಸ್​​ನ ರಿವೀಲ್ ಮಾಡಿದೆ.

ದಂಗಲ್ ಖ್ಯಾತಿಯ ನಿತೇಶ್ ತಿವಾರಿ ರಾಮಾಯಣವನ್ನ ತೆರೆಗೆ ತರುವ ಹೊಣೆ ಹೊತ್ತಿದ್ದು , ನಮಿತ್ ಮಲ್ಹೋತ್ರಾ ಈ ಬಿಗ್ ಬಜೆಟ್ ಎಪಿಕ್ ಸಿನಿಮಾಗೆ ಬಂಡವಾಳ ಹೂಡ್ತಾ ಇದ್ದಾರೆ. ಯಶ್ ಒಡೆತನದ ಮಾನ್​ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಸದ್ಯ ರಿಲೀಸ್ ಮಾಡಿರೋ ಗ್ಲಿಂಪ್ಸ್ ತುಂಬಾನೇ ವಿಶೇಷವಾಗಿದೆ. 2.5 ಶತಕೋಟಿ ಜನರು 5000 ವರ್ಷಗಳಿಂದ ಆರಾಧಿಸುತ್ತಿರುವ ರಾಮ-ರಾವಣರ ಅಮರಕತೆ ಇದು. ರಾವಣನ ಶಕ್ತಿ ಮತ್ತು ಪ್ರತೀಕಾರ. ರಾಮನ ಧರ್ಮ ಮತ್ತು ತ್ಯಾಗ ಅಂತ ತೋರಿಸುತ್ತಾ  ಟೀಸರ್​​ನಲ್ಲಿ ಪಾತ್ರ ಪರಿಚಯ ಮಾಡಿಕೊಡಲಾಗಿದೆ. ಇದ್ರಲ್ಲಿ ರಣ್​ಬೀರ್ ಮತ್ತು ಯಶ್​ರ ಪುಟ್ಟದೊಂದು ಝಲಕ್ ಮಾತ್ರ ನೋಡ್ಲಿಕ್ಕೆ ಸಿಕ್ಕಿದೆ.

ರಣ್​ಬೀರ್ ರಾಮನಾಗಿ ಬಿಲ್ವಿದ್ಯೆ ಪ್ರದರ್ಶಿಸೋ ದೃಶ್ಯ ಇದ್ರೆ ಯಶ್‌ರ ಒಂದೇ ಒಂದು ತೀಕ್ಷ್ಣ ನೋಟದ ಝಲಕ್ ಮಾತ್ರ ಇದೆ. ಅಷ್ಟು ಮಾತ್ರವೇ ಫ್ಯಾನ್ಸ್​ನ ಎಕ್ಸೈಟ್ ಮಾಡಿದೆ. ಯಶ್. ರಣ್​ಬೀರ್​ ಹೊರತು ಪಡಿಸಿ ಈ ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ, ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ನಟಿಸ್ತಾ ಇದ್ದಾರೆ. ಚಿತ್ರತಂಡ ಹೊಸ ಪೋಸ್ಟರ್ ಮೂಲಕ ಇದನ್ನ ಅಧಿಕೃತಗೊಳಿಸಿದೆ. ಹೌದು ರಾಮಾಯಣ ಸಿನಿಮಾತಂಡ VFX  ಗಂತಲೇ ದೊಡ್ಡ ಸಮಯ ಮತ್ತು ಬಜೆಟ್​​ನ ಮೀಸಲಿಟ್ಟಿದೆ. ಸದ್ಯ ರಿಲೀಸ್ ಆಗಿರೋ ಗ್ಲಿಂಪ್ಸ್ ನೋಡ್ತಾ ಇದ್ದರೇನೇ ಈ ಸಿನಿಮಾ ಹೇಗೆ ಮೂಡಿಬರಬಹುದು ಅನ್ನೋ ಸೂಚನೆ ಸಿಕ್ತಾ ಇದೆ.

ಸದ್ಯ ರಿಲೀಸ್ ಮಾಡಿರೋ ರಾಮಾಯಣ ಚಿತ್ರದ ಟೈಟಲ್ ಟೀಸರ್ ಅನ್ನ 3D I max ಅಲ್ಲಿ ನೋಡಿದ್ರೆ ಸಿಗೋ ಅನುಭವವೇ ಬೇರೆ. ಸದ್ಯ ದೇಶಾದ್ಯಂತ ಅನೇಕ ನಗರಗಳಲ್ಲಿ ಇದನ್ನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗಿದೆ. ಅಲ್ಲಿ ಟೈಟಲ್ ಟೀಸರ್ ನೋಡಿದ ಫ್ಯಾನ್ಸ್ ಅದ್ಭುತ-ಅಮೋಘ ಅಂತಿದ್ದಾರೆ. ರಾಮಾಯಣ ಎರಡು ಭಾಗಗಳಲ್ಲಿ ಮೂಡಿಬರಲಿದ್ದು ಮೊದಲ ಭಾಗ 2026ರ ದೀಪಾವಳಿಗೆ ರಿಲೀಸ್ ಆದ್ರೆ, 2027ರ ದೀಪಾವಳಿಗೆ ಭಾಗ-2 ಬರಲಿದೆ. ಭಾರತ ದೇಶದ ರಾಮಾಯಣ ಮಹಾಕಾವ್ಯವನ್ನ ಈ ಸಿನಿಮಾ ವಿಶ್ವದ ಮುಂದೆ ತೆರೆದಿಡಲಿದೆ. ಸದ್ಯ ಫಸ್ಟ್ ಗ್ಲಿಂಪ್ಸ್​​ನಿಂದಲೇ ಕಿಚ್ವು ಹಚ್ಚಿರೋ ರಾಮಾಯಣ ಬರಲಿರುವ ದೀಪಾವಳಿಯ ರಂಗು ಹೆಚ್ಚಿಸೋದು ಫಿಕ್ಸ್ ಅಂತಿದ್ದಾರೆ ಫ್ಯಾನ್ಸ್.

Related Video