‘ಡಂಕಿ’ ಸಿನಿಮಾ ಸಾಂಗ್ ರಿಲೀಸ್: ಹಿಟ್ ಆಯ್ತು ಭಟ್ಟರ 'ಗರಡಿ': ಬಿಕಿನಿ ಅವತಾರದಲ್ಲಿ ಸಾರಾ!

ಭಾರತೀಯ ಚಿತ್ರರಂಗದಲ್ಲಿ ಸಧ್ಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದಲ್ಲಿ ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾ ಕೂಡ ಒಂದು. ಎರಡು ಬಿಗ್ ಹಿಟ್ ಸಿನಿಮಾ ಕೊಟ್ಟಿರೋ ಶಾರುಖ್ ಖಾನ್ ಈಗ ಡಂಕಿ ಸಿನಿಮಾದಲ್ಲೂ ನಿರೀಕ್ಷೆ ಮೂಡಿಸಿದ್ದಾರೆ. 
 

Share this Video
  • FB
  • Linkdin
  • Whatsapp

‘ಡಂಕಿ’ ಸಿನಿಮಾ ಸಾಂಗ್ ರಿಲೀಸ್: ಭಾರತೀಯ ಚಿತ್ರರಂಗದಲ್ಲಿ ಸಧ್ಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದಲ್ಲಿ ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾ ಕೂಡ ಒಂದು. ಎರಡು ಬಿಗ್ ಹಿಟ್ ಸಿನಿಮಾ ಕೊಟ್ಟಿರೋ ಶಾರುಖ್ ಖಾನ್ ಈಗ ಡಂಕಿ ಸಿನಿಮಾದಲ್ಲೂ ನಿರೀಕ್ಷೆ ಮೂಡಿಸಿದ್ದಾರೆ. ಈ ಸಿನಿಮಾದ ನಿರ್ದೇಶಕ ರಾಜ್ ಕುಮಾರ್ ಹಿರಾನಿಗೆ ಇಂದು ಹುಟ್ಟುಹಬ್ಬ. ಹೀಗಾಗಿ ಡಂಕಿ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಭಾರತದಿಂದ ಕೆನಡಾಗೆ ವಲಸೆ ಹೋಗೋರ ಕಥೆ ಡಂಕಿ ಸಿನಿಮಾ. ಈ ಸಿನಿಮಾದಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. 

ಹಿಟ್ ಆಯ್ತು ಭಟ್ಟರ 'ಗರಡಿ': ಮುಂಗಾರು ಮಳೆ ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ನಿರ್ದೇಶನದ ದೇಸಿ ಸಿನಿಮಾ ಗರಡಿ ಹಿಟ್ ಆಗಿದೆ. ಎರಡನೇ ವಾರವೂ ಗರಡಿ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹಲವು ಚಿತ್ರಮಂದಿರಗಳಲ್ಲಿ ಗರಡಿ ಹೌಸ್ ಫುಲ್ ಆಗಿದ್ದು, ಗರಡಿ ಹೀರೋ ಯಶಸ್ ಸೂರ್ಯ ಬೆಂಗಳೂರಿನ ಹಲವು ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿದ್ದಾರೆ. ಗರಡಿ ಪ್ರೇಕ್ಷಕರು ಯಶಸ್ ಸೂರ್ಯರನ್ನ ಡೈರೆಕ್ಟ್ ಆಗಿ ನೋಡಿ ಖುಷಿ ಪಟ್ಟಿದ್ದಾರೆ. 

ಬಿಕಿನಿ ಅವತಾರದಲ್ಲಿ ಸಾರಾ: ಸೈಫ್ ಅಲಿ ಖಾನ್ ಸುಪುತ್ರಿ ಬಾಲಿವುಡ್ನ ಬ್ಯೂಟಿಫುಲ್ ಹೀರೋಯಿನ್ ಸಾರಾ ಅಲಿಖಾನ್ ಹಾಟ್ ಅವತಾರ ತಾಳಿದ್ದಾರೆ. ಸಾರಾ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು ಆ ಫೋಟೋಗಳನ್ನ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ. ಸಾರಾ ಬಿಕಿನಿ ಅವತಾರಕ್ಕೆ ಫಾಲೋವರ್ಸ್ ಬಗೆ ಬಗೆಯ ಕಮೆಂಟ್ ಮಾಡ್ತಿದ್ದಾರೆ. 

ಮನ್ಸೂರ್ ಅಲಿಖಾನ್ ವಿರುದ್ಧ ಕೇಸ್ ದಾಖಲು: ಲಿಯೋ ಸಿನಿಮಾದ ವಿಲನ್ ಮನ್ಸೂರ್ ಅಲಿ ಖಾನ್ ನಟಿ ತ್ರಿಷಾ ಬಗ್ಗೆ ಹೇಳಿದ್ದ ರೇಮ್ ಸೀನ್ ಹೇಳಿಕೆ ದೊಡ್ಡ ವಿವಾದವೇ ಆಗಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ ಅವರನ್ನು ರೇಪ್ ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ ಇರಲಿಲ್ಲ. ಇದ್ದಿದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬಿಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ರು ನಟ ಮನ್ಸೂರ್ ಅಲಿಖಾನ್. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಮಧ್ಯ ಪ್ರವೇಶಿಸಿತ್ತು. ದೂರು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿತ್ತು. ಅದರಂತೆ ತಮಿಳು ನಾಡು ಪೊಲೀಸರು ನಟನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Related Video