ಮಾರ್ಟಿನ್ ಮೂಡ್‌ನಿಂದ KD ಟ್ರ್ಯಾಕ್ ಗೆ ಬಂದ ಆ್ಯಕ್ಷನ್ ಪ್ರಿನ್ಸ್.. ಅದಿರನ ಎದುರು ಘರ್ಜಿಸೋಕೆ ಧ್ರುವ ತಯಾರಿ..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋದು ಪಕ್ಕಾ ಆಗಿದೆ.  KD ಸಿನಿಮಾಗಾಗಿ ಬರೀ 23 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಧ್ರುವ ಸರ್ಜಾ
 

First Published Apr 7, 2023, 3:51 PM IST | Last Updated Apr 7, 2023, 3:51 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋದು ಪಕ್ಕಾ ಆಗಿದೆ. ಅದು ಕೆಡಿಯಾಗಿ. ದಿ ಶೋ ಮ್ಯಾನ್ ಪ್ರೇಮ್ ಹಾಗು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬೋ ಬೊಂಬಾಟ್ ಬಾಡೂಟ ಹಾಕೋ ಸಿನಿಮಾ ಕೆಡಿ. ಈ ಸಿನಿಮಾ ಶೂಟಿಂಗ್ ಫ್ಲೋರ್ನಲ್ಲಿ ಇರುವಾಗ್ಲೆ ಹೆಜ್ಜೆ ಹೆಜ್ಜೆಗೂ ಸೌಂಡ್ ಮಾಡುತ್ತಿದೆ.ಇದಕ್ಕೆ ಮತ್ತೊಂದು ಬೆಸ್ಟ್ ಎಕ್ಸಾಂಪಲ್, KD ಸಿನಿಮಾಗಾಗಿ ಬರೀ 23 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದ ಧ್ರುವ ಸರ್ಜಾ . ಕೆಡಿ ಸಿನಿಮಾದಲ್ಲಿ ಆಕ್ಷನ್ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದ್ದು,  ಹೀಗಾಗಿ ಧ್ರುವ  ವರ್ಕೌಟ್‌ ಮಾಡುತ್ತಿದ್ದಾರೆ, ಪ್ರತಿದಿನ 2 ಗಂಟೆ ಜಿಮ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೆಡಿ ಅಡ್ಡಾ ಸೇರಿದ್ದಾರೆ. ಹೀರೋಯಿನ್ ಕೂಡ ಫಿಕ್ಸ್ ಆಗಿದ್ದು, ಧ್ರುವನ ಜೊತೆ ರೀಷ್ಮಾ ನಾಣಯ್ಯ ಪೇರ್ ಆಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಬಿಗ್ ಬಜೆಟ್ ಮೂವಿ ಇದಾಗಿದ್ದು ಬಹುಭಾಷೆಯಲ್ಲಿ ತಯಾರಾಗ್ತಿದೆ.