ವಿಚ್ಛೇದನ ಪಡೆದ ಬಳಿಕ ಧನುಷ್ ಮಾಜಿ ಪತ್ನಿಗೆ ಏನಂತಾ ಕರೆದ್ರು ಗೊತ್ತಾ?

ಐಶ್ವರ್ಯಾ ರಜನಿಕಾಂತ್ ಇತ್ತೀಚೆಗಷ್ಟೆ ಒಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಹಾಡಿಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಜಿ ಪತಿ ಧನುಷ್ ಕೂಡ ಶುಭಹಾರೈಸಿದ್ದರು. 

Share this Video
  • FB
  • Linkdin
  • Whatsapp

ಕಾಲಿವುಡ್ (Kollywood) ನಟ ಧನುಷ್ (Dhanush) ಹಾಗೂ ಐಶ್ವರ್ಯಾ ರಜನಿಕಾಂತ್ (Aishwaryaa Rajinikanth)​ ಅವರ 18 ವರ್ಷಗಳ ದಾಂಪತ್ಯ ಜೀವನ ಕಳೆದ ವರ್ಷ ಅಂತ್ಯವಾಗಿತ್ತು. ಇದು ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಮೂಡಿಸಿತ್ತು. ಇಬ್ಬರೂ ಗೆಳೆಯರಾಗಿ ಮುಂದುವರಿಯುವುದಾಗಿ ತಿಳಿಸಿದ್ದರು. ಈ ಮಧ್ಯೆ ಐಶ್ವರ್ಯಾ ಇತ್ತೀಚೆಗಷ್ಟೆ ಒಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಹಾಡಿಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಜಿ ಪತಿ ಧನುಷ್ ಕೂಡ ಶುಭಹಾರೈಸಿದ್ದರು. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಧನುಷ್, ಐಶ್ವರ್ಯಾ ಹಾಡಿನ ಲಿಂಕ್ ಶೇರ್ ಮಾಡಿದ್ದಾರೆ. 

ಹೊಸ ಗರ್ಲ್‌ ಫ್ರೆಂಡ್ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡ Dhanush

ಅಷ್ಟೆಯಲ್ಲ 'ನನ್ನ ಗೆಳತಿ' ಎಂದು ಪತ್ನಿಯನ್ನು ಕರೆದಿದ್ದಾರೆ. 'ಮ್ಯೂಸಿಕ್ ವಿಡಿಯೋಗೆ ಒಳ್ಳೆಯದಾಗಲಿ ನನ್ನ ಗೆಳತಿ ಐಶ್ವರ್ಯಾ, ಅಭಿನಂದನೆಗಳು' ಬರೆದುಕೊಂಡಿದ್ದಾರೆ. ಧನುಷ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಐಶ್ವರ್ಯಾ ಧನ್ಯವಾದ ಎಂದು ತಿಳಿಸಿದ್ದಾರೆ. ಅಂದಹಾಗೆ ಐಶ್ವರ್ಯಾ ಟ್ವಿಟ್ಟರ್ ಖಾತೆಯಲ್ಲಿ ತನ್ನ ಹೆಸರಿನ ಜೊತೆ ಧನುಷ್ ಹೆಸರನ್ನು ಹಾಗೆ ಉಳಿಸಿಕೊಂಡಿದ್ದಾರೆ. ಗಂಡ-ಹೆಂಡತಿ ಸಂಬಂಧ ಕಡಿದುಕೊಂಡು ಇಬ್ಬರು ದೂರ ದೂರ ಆಗಿದ್ದರೂ ಐಶ್ವರ್ಯಾ ಪತಿಯ ಹೆಸರನ್ನು ಹಾಗೆ ಉಳಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video