ಪಂಜಾಬಿ ಗಾಯಕನಿಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್ ಅವರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿ ಡಿವೋರ್ಸ್ ವದಂತಿಗಳನ್ನು ತಳ್ಳಿಹಾಕಿದ್ದಾರೆ.

First Published Dec 8, 2024, 11:55 PM IST | Last Updated Dec 8, 2024, 11:55 PM IST

ಪಂಜಾಬಿ ಗಾಯಕನಿಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ..!
ಬೆಂಗಳೂರಿನ ದೀಪಿಕಾ ಪಡುಕೋಣೆ ಈಗ ಬಾಲಿವುಡ್​ ಅನ್ನು ಆಳುತ್ತಿದ್ದಾರೆ. ಹಾಲಿವುಡ್​ಗೂ ಹೋಗಿ ಬಂದಿರುವ ದೀಪಿಕಾ ಪಡುಕೋಣೆ ಕನ್ನಡವನ್ನು ಮರೆತಿಲ್ಲ. ಬೆಂಗಳೂರಿನಲ್ಲಿ ನಡೆದ ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್​ ಅವರ ಕಾನ್ಸರ್ಟ್​ನಲ್ಲಿ ದಿಲ್ಜೀತ್ ಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್ ಇಟ್ಟ ಐಶ್​-ಅಭಿಷೇಕ್..!
ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ವೈಯಕ್ತಿಕ ಜೀವನ ಸರಿಯಿಲ್ಲ ಎಂದು ಆಗಾಗ ಡಿವೋರ್ಸ್ ಕುರಿತು ಸುದ್ದಿ ಹರಿದಾಡುತ್ತಲೇ ಇತ್ತು. ಈಗ ಆ ಡಿವೋರ್ಸ್ ವದಂತಿಗೆ ಐಶ್ವರ್ಯಾ ರೈ ದಂಪತಿ ಬ್ರೇಕ್ ಹಾಕಿದ್ದಾರೆ. ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದಾರೆ. ಪಂಜಾಬಿ ಗಾಯಕನಿಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ..!