ದರ್ಶನ್ ಮೈಸೂರಿನಲ್ಲಿ ಉಳಿಯಲು ಪಡೆದಿದ್ದ ಕೋರ್ಟ್ ಅನುಮತಿ ಮುಕ್ತಾಯ ಮುಂದೇನು?

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಜಾಮೀನು ಪಡೆದ ದರ್ಶನ್ ಮೈಸೂರಿನಲ್ಲಿ ಉಳಿಯಲು ಪಡೆದಿದ್ದ ಕೋರ್ಟ್ ಅನುಮತಿ ಮುಕ್ತಾಯವಾಗಿದೆ. ಚಿತ್ರೀಕರಣ ಸೇರಿದಂತೆ ಪ್ರತಿಯೊಂದು ಚಟುವಟಿಕೆಗೂ ಕೋರ್ಟ್ ಅನುಮತಿ ಪಡೆಯಬೇಕಿದೆ. ಮೈಸೂರಿನಲ್ಲೇ ಸರ್ಜರಿಗೆ ಒಳಗಾಗಲು ಮತ್ತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

First Published Jan 6, 2025, 6:39 PM IST | Last Updated Jan 6, 2025, 6:39 PM IST

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ದರ್ಶನ್​ಗೆ ಕೋರ್ಟ್ ಜಾಮೀನನ್ನೇನೋ ಕೊಟ್ಟಿದೆ. ಆದ್ರೆ ಅದರ ಜೊತೆ ಜೊತೆಗೆ ಹಲವು ಷರತ್ತುಗಳನ್ನ ವಿಧಿಸಿದೆ.  ಮೈಸೂರಿಗೆ ಹೋಗೋದಕ್ಕೆ ದರ್ಶನ್ ಪಡೆದಿರೋ ಅನುಮತಿ ಮುಕ್ತಾಯವಾಗಿದ್ದು ದಾಸ ಬೆಂಗಳೂರಿಗೆ ವಾಪಾಸ್ ಆಗಬೇಕಿದೆ. ದರ್ಶನ್ ತಾನು ಏನೇ ಮಾಡಬೇಕಂದ್ರೂ ಕೋರ್ಟ್ ಅನುಮತಿಯನ್ನ ಪಡಯಲೇಬೇಕಿದೆ. ಯೆಸ್ ದರ್ಶನ್​ಗೆ ರೇಣುಕಾ ಮರ್ಡರ್​​ ಕೇಸ್​​ನಲ್ಲಿ ಬೇಲ್ ಏನೋ ಸಿಕ್ಕಿದೆ. ಆದ್ರೆ ಕೋರ್ಟ್ ಹಲವು ಷರತ್ತುಗಳನ್ನ ವಿಧಿಸಿ ದಾಸನನ್ನ ಆಚೆ ಬಿಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕೇಸ್ ನಡೀತಾ ಇರೋ ಬೆಂಗಳೂರು ಸಿಟಿ ಸೆಷನ್ ಕೋರ್ಟ್​​ನ ಸುಪರ್ದಿ ಬಿಟ್ಟು ಬೇರೆ ಕಡೆಗೆ ಹೋಗಲಿಕ್ಕೆ ದರ್ಶನ್ ಅನುಮತಿ ಪಡೆದುಕೊಳ್ಳಬೇಕಾಗುತ್ತೆ. ಕಳೆದ ತಿಂಗಳು ಮೈಸೂರಿಗೆ ತೆರಳೋದಕ್ಕೆ ಅನುಮತಿ ಪಡೆದಿದ್ದ ದಾಸ ತನ್ನ ಫಾರ್ಮ್ ಹೌಸ್​ನಲ್ಲಿ ಬೀಡು ಬಿಟ್ಟಿದ್ದ. ಈ ನಡುವೆ ಒಂದೆರಡು ಬಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಪರೀಕ್ಷೆ ಕೂಡ ಮಾಡಿಸಿಕೊಂಡಿದ್ದ.

ಇದೀಗ ದರ್ಶನ್ ಮೈಸೂರು ವಾಸಕ್ಕೆ ಪಡೆದ ಅನುಮತಿ ಮಕ್ತಾಯಗೊಂಡಿದೆ. ಬೆಂಗಳೂರಿಗೆ ವಾಪಾಸ್ ಬರಲೇಬೇಕಿದೆ. ಒಂದು ವೇಳೆ ಮೈಸೂರಿನಲ್ಲೇ ಇರೋದಾದ್ರೆ ಅದಕ್ಕೆ ಮತ್ತೆ ಕೋರ್ಟ್ ಎದುರು ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಿದೆ.  ದರ್ಶನ್ ಬಹುತೇಕ ಮೈಸೂರಿನಲ್ಲೇ ಸರ್ಜರಿ ಮಾಡಿಸಿಕೊಳ್ಳೋದಕ್ಕೆ ತೀರ್ಮಾನಿಸಿದಂತಿದೆ. ಸಂಕ್ರಾಂತಿ ಹೊತ್ತಿಗೆ ಸರ್ಜರಿ ನಡೆಯಲಿದ್ದು ಅದಕ್ಕಾಗಿ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ಮೈಸೂರಿನಲ್ಲಿ ಇನ್ನಷ್ಟು ದಿನ ಉಳಿಯೋದಕ್ಕೆ ಅನುಮತಿ ಪಡೆಯೋ ನಿರೀಕ್ಷೆ ಇದೆ. ಇನ್ನೂ ಸರ್ಜರಿ ಮುಗಿಸಿಕೊಂಡು ಮತ್ತೆ ಶೂಟಿಂಗ್​ಗೆ ಮರಳುವ ತಯಾರಿಯಲ್ಲಿ ದರ್ಶನ್ ಇದ್ದು ಅದಕ್ಕೂ ಕೂಡ ಅನುಮತಿ ಪಡೆಯಬೇಕಾಗುತ್ತೆ. ಬೇರೆ ಬೇರೆ ಜಾಗಗಳಲ್ಲಿ ಸಿನಿಮಾ ಶೂಟಿಂಗ್ ಮಾಡಬೇಕಂದ್ರೆ ಅದಕ್ಕೆ ಪ್ರತ್ಯೇಕವಾಗಿ ಅನುಮತಿಗಳನ್ನ ಪಡೆಯಬೇಕಾಗುತ್ತೆ. ಸೋ ಇದೆಲ್ಲದರ ಮಧ್ಯೆ ಚಿತ್ರೀಕರಣ ಮಾಡಿಕೊಂಡು, ಮೊದಲಿನಂತೆ ಜಾಲಿಯಾಗಿರೋದು ಸಾಧ್ಯವೇ ಇಲ್ಲ. ಒಟ್ಟಾರೆ ಜಾಮೀನು ಪಡೆದಿದ್ರೂ ದರ್ಶನ್ ಏನೂ ಆರೋಪ ಮುಕ್ತ ಆಗಿಲ್ಲ. ಹಾಗೆ ಆರೋಪ ಮುಕ್ತನಾಗೀವರೆಗೂ ದರ್ಶನ್​ಗೆ ಮುಕ್ತಿ ಸಿಕ್ಕೋದಿಲ್ಲ ಅನ್ನೋದಂತೂ ನಿಜ.