Asianet Suvarna News Asianet Suvarna News
breaking news image

ಮೆಗಾಸ್ಟಾರ್ ಚೀರಂಜೀವಿ ಬಿಚ್ಚಿಟ್ರು ದಕ್ಷಿಣ ಚಿತ್ರರಂಗಕ್ಕಾದ ಅವಮಾನದ ಕಥೆ

ಇಂಡಿಯನ್ ಸಿನಿಮಾ ಇಂಡಸ್ಟ್ರಿಯನ್ನ (South Cinema Industry) ದಕ್ಷಿಣ ಭಾರತ ಚಿತ್ರರಂಗ ಆಳುತ್ತಿದೆ.  ಈ ಖುಷಿಯಲ್ಲಿರೋ ಟಾಲಿವುಡ್ನ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಒಂದ್ ಕಾಲದಲ್ಲಿ ಬಾಲಿವುಡ್ ಮಂದಿ ಸೌತ್ ಚಿತ್ರರಂಗದ ಮೇಲೆ ಮಾಡುತ್ತಿದ್ದ ದಬ್ಬಾಳಿಕೆಯನ್ನ ಬಿಚ್ಚಿಟ್ಟಿದ್ದಾರೆ..

ಬಾಲಿವುಡ್ (Bollywood) ಮಂದಿ ದಕ್ಷಿಣ ಚಿತ್ರರಂಗವನ್ನ ಹೇಗೆಲ್ಲಾ ನೊಡಿದ್ದಾರೆ ಅಂತ ಚಿರಂಜೀವಿ ಆಚಾರ್ಯ (Acharya) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ರುದ್ರವೀಣ ಸಿನಿಮಾಗಾಗಿ ನ್ಯಾಷನಲ್ ಇಂಟಿಗ್ರಿಟಿ ಅವಾರ್ಡ್ (National Intigrity award) ಬಂದಿತ್ತು. ಆ ಅವಾರ್ಡ್ ಪಡೆಯೋಕೆ ಚಿರಂಜೀವಿ (Chiranjeevi) ಡೆಲ್ಲಿಗೆ ಹೋಗಿದ್ರು. ಆ ಕಾರ್ಯಕ್ರಮದಲ್ಲಿ ಇಂಡಿಯನ್ ಸಿನಿಮಾದ ವೈಭವ ಹೇಳುವ ಒಂದು ಪೋಸ್ಟರ್ ಹಾಕಿದ್ರು.

ಆ ಪೋಸ್ಟರ್ನಲ್ಲಿ ಹಿಂದಿಯ ನಟರಾದ ಧರ್ಮೇಂದ್ರ, ರಾಜ್ ಕಪೂರ್, ದಿಲೀಪ್ ಕುಮಾರ್, ದೇವಾನಂದ್ ಅಮಿತಾ ಬಚ್ಚನ್ ರಾಜೇಶ್ ಖನ್ಹ ಸೇರಿದಂತೆ ಹಿಂದಿ ಕಲಾವಿದರ ಫೋಟೋ ಮಾತ್ರ ಹಾಕಿದ್ರು. ಸೌತ್ ಸಿನಿಮಾ ಅಂತ ಬಂದಾಗ ಎನ್ಟಿಆರ್ ಹಾಗು ಜಯಲಲಿತಾರ ಚಿಕ್ಕ ಫೋಟೋ ಹಾಕಿ ಬಿಟ್ಟಿದ್ರು. ಆದ್ರೆ ಕನ್ನಡದ ಕಂಠೀರವ ರಾಜ್ ಕುಮಾರ್, ವಿಷ್ಣುವರ್ಧನ್, ಶಿವಾಜಿ ಗಣೇಶನ್ ಯಾರ ಫೊಟೋನೂ ಇರಲಿಲ್ಲ. ಇಂಡಿಯನ್ ಸಿನಿಮಾ ಅಂದ್ರೆ ಬರೀ ಹಿಂದಿ ಚಿತ್ರರಂಗ ಅಂತ ಪ್ರಜೆಕ್ಟ್ ಮಾಡಿದ್ರು. ಇದನ್ನ ನೋಡಿ ಅಂದು ನನಗೆ ತುಂಬಾ ನೋವಾಗಿತ್ತು ಎಂದಿದ್ದಾರೆ ಚಿರಂಜೀವಿ. 

ಸೌತ್ ಸಿನಿಮಾರಂಗವನ್ನ ಅವಮಾನಿಸುತ್ತಿದ್ದ ಬಾಲಿವುಡ್ ಮಂದಿ ಇಂದು ನಮ್ಮ ದಕ್ಷಿಣ ಸಿನಿಮಾಗಳಲ್ಲಿ ನಟಿಸೋದಕ್ಕೆ ಕಾಯುತ್ತಿದ್ದಾರೆ. ಅಂದು ಬೇರೆ ಭಾಷೆ ಸಿನಿಮಾಗಳು ಅಂದ್ರೆ ಲೆಕ್ಕಕ್ಕೇ ಇರಲಿಲ್ಲ. ಆದ್ರೆ ಇಂದು ನಮ್ಮ ಸಿನಿಮಾಗಳ ಗೆಲುವು ನೋಡಿ  ನಾವು ಗರ್ವ ಪಡುತ್ತಿದ್ದೇವೆ. ತಾರತಮ್ಯ ಮಾಡುತ್ತಿದ್ದವರಿಗೆ ಸೌತ್ ಚಿತ್ರರಂಗ ಸರಿಯಾದ ಉತ್ತರ ಕೊಡುತ್ತಿದೆ. ಇದಕ್ಕೆ ಕಾರಣ ನಮ್ಮ ಟೆಕ್ನೀಷಿಯನ್ಸ್, ನಮ್ಮ ನಿರ್ದೇಶಕ ರಾಜಮೌಳಿ. ಇಂದು ಭಾರತೀಯ ಚಿತ್ರರಂಗದ ಪೀಠಾಧಿಪತಿಯಾಗಿ ರಾಜಮೌಳಿ ಇದ್ದಾರೆ ಎಂದಿದ್ದಾರೆ ಚಿರಂಜೀವಿ. 

21 ಕೋಟಿಗೆ ಸೇಲಾಯ್ತು ಚಾರ್ಲಿಯ ಕನ್ನಡ ರೈಟ್ಸ್..! ಜೂನ್ 10 ಕ್ಕೆ ತೆರೆಗೆ

 ಹಾಲಿವುಡ್ ಬಾಲಿವುಡ್ ಕಾಲಿವುಡ್ ಟಾಲಿವುಡ್ ಅಂತ ತಾರತಮ್ಯ ಮಾಡುತ್ತಿದ್ದವರಿಗೆ ನಮ್ಮ ಸೌತ್ ಸಿನಿ ರಂಗ ಗರ್ವ ಪಡೋ ಹಾಗೆ ಉತ್ತರ ಕೊಟ್ಟಿದೆ. ಇದಕ್ಕೆ ಕಾರಣ ಸೌತ್ ಚಿತ್ರರಂಗದಿಂದ ಬರುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾಗಳು. ಪ್ರಶಾಂತ್ ನೀಲ್. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಇಂದು ನ್ಯಾಷನಲ್ ಸಿನಿಮಾ ಆಗಿದೆ. ಅದೇ ರೀತಿ ಅಲ್ಲು ಅರ್ಜುನ್ ಪ್ರಭಾಸ್, ರಾಮ್ ಚರಣ್, ಜ್ಯೂ, ಎನ್ ಟಿಆರ್ ಪ್ರಭಾಸ್ರಂತದ ನ್ಯಾಷನಲ್ ಸ್ಟಾರ್ ಇದ್ದಾರೆ. ಇದನ್ನೆಲ್ಲಾ ನೋಡಿ ನಾವೆಲ್ಲಾ ಹೆಮ್ಮೆ ಪಡಬೇಕು ಅಂತ ಚಿರಂಜಿವಿ ಸೌತ್ ಚಿತ್ರರಂಗದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.  


 

Video Top Stories