userpic
user icon

ಅವಳು ಮಿಲ್ಕಿ.. ಇವಳು ಊರ್ವಶಿ.. ಯಾರ ಕುಣಿತ ಮಸ್ತ್ ಐತ್ರಿ..?

Anusha Kb  | Updated: Apr 16, 2025, 3:18 PM IST

ಇತ್ತೀಚಿಗೆ ಬಾಲಿವುಡ್​ನಲ್ಲಿ ಹಂಗಾಮ ಸೃಷ್ಟಿ ಮಾಡಿರೋದು ಎರಡು ಮಸ್ತ್ ಐಟಂ ನಂಬರ್​ಗಳು. ಜಾಟ್​ ಸಿನಿಮಾದಲ್ಲಿ ಊರ್ವಶಿ ನರ್ತಿಸಿದ ಟಚ್ ಕಿಯಾ ಸಾಂಗು ಕಿಚ್ಚು ಹಚ್ಚಿರೋ ಹೊತ್ತಲ್ಲೇ ರೈಡ್-2 ಸಿನಿಮಾದಲ್ಲಿ ತಮನ್ನಾ ಕುಣಿದ ನಶಾ ಸಾಂಗ್ ರಿಲೀಸ್ ಆಗಿ ಕಿಕ್ ಹೆಚ್ಚಿಸ್ತು. ಈ ಎರಡು ಐಟಂ ನಂಬರ್ಸ್ ನಡುವೆ ಹೆಚ್ಚು ವೀವ್ಸ್ ಗಳಿಸೋ ಸಾಂಗ್ ಯಾವುದು ಅನ್ನೋ ಸ್ಪರ್ಧೆ ಶುರುವಾಗಿದೆ. ಅಷ್ಟೇ ಅಲ್ಲ ಊರ್ವಶಿ Vs ಮಿಲ್ಕಿ ವಾರ್ ಕೂಡ ಆರಂಭವಾಗಿದೆ.

ಯೆಸ್ ಬಾಲಿವುಡ್​ನಲ್ಲೀಗ ಕಿಚ್ಚು ಹಚ್ಚಿರೋದು ಎರಡು ಮಸ್ತ್ ಐಟಂ ನಂಬರ್​ಗಳು. ಎರಡು ವಾರಗಳ ಹಿಂದೆ ಜಾಟ್​ ಸಿನಿಮಾದಲ್ಲಿ ಊರ್ವಶಿ ರೌಟೆಲಾ ಹೆಜ್ಜೆ ಹಾಕಿದ ಡ್ಯಾನ್ಸ್ ನಂಬರ್ ರಿಲೀಸ್ ಆಗಿತ್ತು. ಊರ್ವಶಿ ಮಾದಕ ಭಾವ ಭಂಗಿಯಲ್ಲಿ ನರ್ತಿಸಿದ ಈ ಐಟಂ ನಂಬರ್ ಪಡ್ಡೆ ಹುಡುಗರ ನಿದ್ದೆ ಕದ್ದು ಬಿಟ್ತು. ಈ ಹಾಡಲ್ಲಿ ಊರ್ವಶಿ ಕಾಸ್ಟೂಮ್, ಕುಣಿತ ನೋಡಿದವರು ಜಾಟ್ ಸಿನಿಮಾದಲ್ಲಿ ಕರೆಂಟ್ ಇದೆ ಅಂತ ಥಿಯೇಟರ್​ಗೆ ನುಗ್ಗಿದ್ರು. ಸನ್ನಿ ಡಿಯೋಲ್ ನಟನೆಯ ಜಾಟ್ ಸಿನಿಮಾ ಬಾಕ್ಸಾಫೀಸ್​ನಲ್ಲಿ ಭರಪೂರ ಕಮಾಯಿ ಮಾಡಿದ್ದರ ಹಿಂದೆ ಊರ್ವಶಿ ಕುಣಿತದ ಕೊಡುಗೆಯೂ ಇದೆ.

ಇನ್ನೂ ಈ ಸಾಂಗ್​ನ ಮತ್ತೆ ಮತ್ತೆ ನೋಡಿ ಮತ್ತೇರಿಸಿಕೊಳ್ತಾ ಇರೋ ಹೊತ್ತಲ್ಲೇ ರೈಡ್-2 ಸಿನಿಮಾದ ಐಟಂ ಸಾಂಗ್ ರಿಲೀಸ್ ಆಯ್ತು. ತಮನ್ನಾ ಹೆಜ್ಜೆ ಹಾಕಿರೋ ನಶಾ ಸಾಂಗ್ ರಿಲೀಸ್ ಆಗಿದ್ದೇ ತಡ ಪಡ್ಡೆ ಹೈಕಳಿಗೆ ಮತ್ತಷ್ಟು ನಶೆ ಏರಿತು. ನಶಾ ಅನ್ನೋ ಈ ಡ್ಯಾನ್ಸ್ ನಂಬರ್​ ಅಕ್ಷರಶಃ ನಶೆ ಏರಿಸೋ ತರಹಾ ಇದೆ. ಅದ್ರಲ್ಲೂ ಮಿಲ್ಕಿ ಬ್ಯೂಟಿ ಮೈಮಾಟ, ಸೊಂಟ ಬಳಕಿಸಿರುವ ಪರಿ ಕಿಚ್ಚು ಹಚ್ಚಿದೆ. ಮಿಲ್ಕಿ ಬೆಲ್ಲಿ ಡ್ಯಾನ್ಸ್ ಮೋಡಿಗೆ ಸೋಷಿಯಲ್ ಮಿಡಿಯಾದಲ್ಲಿ ಹೀಟ್ ಹೆಚ್ಚಾಗ್ತಾ ಇದೆ.  ನಾಲ್ಕು ದಿನದಿಂದ ಟ್ರೆಂಡಿಂಗ್​ನಲ್ಲಿರೋ ಈ ಸಾಂಗ್​ 21 ಮಿಲಿಯನ್ ವೀವ್ಸ್ ಗಳಿಸಿದೆ.

ನಶಾ ರಿಲೀಸ್ ಆದ ಮೇಲೆ ಊರ್ವಶಿಯ ಜಾಟ್ ಸಾಂಗ್​ ಕೊಂಚ ಡಲ್ ಹೊಡೀತು. ಕಳೆದ 13 ದಿನಗಳಲ್ಲಿ ಟಚ್ ಕಿಯಾ ಸಾಂಗ್ 25 ಮಿಲಿಯನ್ ವೀವ್ಸ್ ಗಳಿಸಿಕೊಂಡಿದೆ. ಅಲ್ಲಿಗೆ ಕೆಲವೇ ದಿನಗಳಲ್ಲಿ ತಮನ್ನಾಳ ನಶಾ, ಊರ್ವಶಿಯ ಹಾಡನ್ನ ಹಿಂದಿಕ್ಕಿದ್ರೂ ಅಚ್ಚರಿ ಇಲ್ಲ. ಹೌದು ಇತ್ತೀಚಿಗೆ ಟಚ್ ಕಿಯಾ ಸಾಂಗ್​ಗೆ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದ. ತಮನ್ನಾಳ ನಶಾ ಸಾಂಗ್​ಗಿಂತ ಈ ಹಾಡೇ ಮಸ್ತ್ ಇದೆ. ಊರ್ವಶಿ ಕುಣಿತವೇ ಬೆಸ್ಟ್ ಅಂತ ಕಾಮೆಂಟ್ ಮಾಡಿದ್ದ. ಇದನ್ನ ನೋಡಿ ಹಿರಿ ಹಿರಿ ಹಿಗ್ಗಿದ್ದ ಊರ್ವಶಿ ಈ ಕಾಮೆಂಟ್​ನ ಸ್ಕ್ರೀನ್ ಶಾಟ್ ತೆಗೆದು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಾಕಿಕೊಂಡಿದ್ರು. 

ಆದ್ರೆ ಇದು ವಿವಾದ ಆಗಬಹುದು ಅಂತ ಅರಿತು ತಕ್ಷಣವೇ ಸ್ಟೋರಿನ ಡಿಲೀಟ್ ಮಾಡಿದ್ದಾರೆ. ಅಲ್ಲಿಗೆ ಊರ್ವಶಿ ಮತ್ತೆ ತಮನ್ನಾ ನಡುವೆ ಕುಣಿತದ ಕದನ ನಡೀತಿದೆ ಅನ್ನೋದು ಜಗಜ್ಜಾಹೀರಾಗಿದೆ. ಇತ್ತೀಚಿಗೆ ಈ ಇಬ್ಬರೂ ಚೆಲುವೆಯರು ಒಂದಕ್ಕಿಂತ ಒಂದು ಮಸ್ತ್ ಐಟಂ ನಂಬರ್​ಗಳಲ್ಲಿ ನಡು ಬಳುಕಿಸ್ತಾ ಕಿಚ್ಚು ಹಚ್ತಾ ಇದ್ದಾರೆ. ಡಾಕು ಮಹಾರಾಜ್​ ಸಿನಿಮಾದ ದಬಿಡಿ ದಬಿಡಿ ಹಾಡು ಬಂದ ಮೇಲಂತೂ ಊರ್ವಶಿ ಕುಣಿತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಊರ್ವಶಿಗೆ ಬ್ಯಾಕ್ ಟು ಬ್ಯಾಟ್ ಐಟಂ ನಂಬರ್ಸ್ ಆಫರ್ಸ್ ಬರ್ತಾ ಇವೆ.

ಇನ್ನೂ ತಮನ್ನಾ ಅಂತೂ ಒಂದಾದ ಮೇಲೊಂದು ಹಿಟ ಸಾಂಗ್ ಕೊಡ್ತಾ ಇದ್ದಾರೆ. ತಮನ್ನಾ ನಡು ಬಳುಕಿಸಿದ್ರೆ ಸಿನಿಮಾ ಸೂಪರ್ ಹಿಟ್ ಆಗುತ್ತೆ ಅನ್ನೋ ಟಾಕ್ ಹುಟ್ಟಿಕೊಂಡಿದೆ. ಕೆಜಿಎಫ್, ಜೈಲರ್, ಸ್ತ್ರೀ-2 ಬಳಿಕ ಈಗ ರೈಡ್-2​​ನಲ್ಲಿ ನರ್ತಿಸಿ ಮತ್ತೊಂದು ಹಿಟ್ ಲೋಡಿಂಗ್ ಅಂತಿದ್ದಾಳೆ ಮಿಲ್ಕಿ ಬ್ಯೂಟಿ. ಸೋ ಈ ಇಬ್ಬರು  ಒಬ್ಬರಿಗೊಬ್ರು ಸವಾಲ್ ಹಾಕ್ತಾ ಒಬ್ಬರಿಗಿಂತ ಒಬ್ರು ಮಾದಕವಾಗಿ ನರ್ತಿಸ್ತಾ ಇದ್ದಾರೆ. ಈ ನಡುವೆ ಊರ್ವಶಿ ಫ್ಯಾನ್ ಕಾಮೆಂಟ್ ಶೇರ್ ಮಾಡೋ ಮೂಲಕ ತಮ್ಮ ನಡುವೆ ನೇರಾ ನೇರ ವಾರ್ ನಡೀತಿದೆ ಅನ್ನೋದನ್ನೂ ಸಾರಿ ಹೇಳಿದ್ದಾರೆ. ನಂದು ತುಂಬಾ ದೊಡ್ಡದು.. ನಿಂದು ತುಂಬಾ ಚಿಕ್ಕದು ಅಂತ ಉಪ್ಪಿ ಸ್ಟೈಲ್​ನಲ್ಲಿ ತಮನ್ನಾಗೆ ಸವಾಲ್ ಹಾಕಿದ್ದಾರೆ.

Must See