ಯಶ್ ವೈಲೆನ್ಸ್...ವೈಲೆನ್ಸ್ ಡೈಲಾಗ್ ಹೊಡೆದು ಖುಷಿ ಪಟ್ಟ ಶಿಲ್ಪಾ ಶೆಟ್ಟಿ.!
ರಾಕಿಂಗ್ ಸ್ಟಾರ್ ಯಶ್ (Yash) ಅಂದ್ರೆ ಈಗ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ತುಂಬೆಲ್ಲಾ ಅಭಿಮಾನಿಗಳನ್ನ ರಾಕಿ ಸಂಪಾದಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Yash) ಅಂದ್ರೆ ಈಗ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ತುಂಬೆಲ್ಲಾ ಅಭಿಮಾನಿಗಳನ್ನ ರಾಕಿ ಸಂಪಾದಿಸಿದ್ದಾರೆ.
ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ಸ್‌ಗಳೇ ಯಶ್‌ಗೆ ಬಿಗ್ ಫ್ಯಾನ್ ಆಗಿದ್ದಾರೆ. ಯಾವ್ ಮಟ್ಟಕ್ಕೆ ಅಂದ್ರೆ ಹೋದಲ್ಲಿ ಬಂದಲ್ಲೆಲ್ಲಾ ರಾಕಿ ಡೈಲಾಗ್ ಹೊಡೀತಿದ್ದಾರೆ. ಇದೀಗ ಬಿಟೌನ್ ಝಿರೋ ಫಿಗರ್, ಕನ್ನಡ ಸಿನಿ ರಸಿಕರಿಗೆ ಒಂದಾಗೋಣ ಅಂದಿದ್ದ ಶಿಲ್ಪಾ ಶೆಟ್ಟಿ (Shilpa Shetty) ಯಶ್‌ರ ಖಡಕ್ ಡೈಲಾಗ್ ಹೊಡೆದು ಟ್ರೆಂಡ್ ಆಗಿದ್ದಾರೆ.
ಕೆಜಿಎಫ್-2 ಸಿನಿಮಾ ನೋಡಿರೋ ಶಿಲ್ಪಾ ಶೆಟ್ಟಿ ಯಶ್‌ರ ಬಿಗ್ ಫ್ಯಾನ್ ಆಗಿದ್ದು, ಆ ಸಿನಿಮಾದಲ್ಲಿ ರಾಕಿ ಹೇಳೋ ವೈಲೆನ್ಸ್ ಡೈಲಾಗ್ಅನ್ನ ಶಿಲ್ಪಾ ಶೆಟ್ಟಿ ತನ್ನದೇ ಸ್ಟೈಲ್ನಲ್ಲಿ ಹೇಳಿದ್ದಾರೆ. ಈಗ ಈ ವೀಡಿಯೋ ವೈರಲ್ ಆಗುತ್ತಿದೆ.