Asianet Suvarna News Asianet Suvarna News

ಇದೇನಾ ನಿಮ್ಮ ಯೋಗಾ.. ಇಷ್ಟೆನಾ ನೀವು ಫಿಟ್..?: ಹೇಸರಗತ್ತೆ ಮೇಲೆ ಕುಳಿತ ಶಿಲ್ಪಾ ಶೆಟ್ಟಿ ಫುಲ್ ಟ್ರೋಲ್!

ಹೇಸರಗತ್ತೆ ಮೇಲೆ ಶಿಲ್ಪಾ ಶೆಟ್ಟಿ ಕುಳಿತ ವಿಡಿಯೋ ವೈರಲ್ ಆಗಿದೆ. ಇವರನ್ನ ಟ್ರೋಲ್ ಕೂಡ ಮಾಡಲಾಗುತ್ತಿದೆ. ಫಿಟ್ನೆಸ್‌ಗೆ ಹೆಸರುವಾಸಿಯಾದವರಿಂದ ನಡೆಯಲು ಸಾಧ್ಯವಾಗದೇ ಇರುವುದನ್ನ ನೋಡಿದರೆ ಅವರ ಫಿಟ್ನೆಸ್ ಮೇಲೆ ಅನುಮಾನ ಬರುತ್ತೆ.

ಉತ್ತರಾಖಾಂಡ್‌ನಲ್ಲಿ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಶಿಲ್ಪಾ ಶೆಟ್ಟಿ ಕೂಡ ತಮ್ಮ ಕುಟುಂಬದ ಜೊತೆ ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದಾರೆ. ತಾಯಿ ಸುನಂದಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಮತ್ತು ಪುತ್ರಿ ಸಮೀಷಾ ಜೊತೆ ಕೇದಾರನಾಥ್ ದೇವಾಲಯದ ಮುಂದೆ ಫೋಟೋ ಕ್ಲಿಕಿಸಿಕೊಂಡು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಕೇದಾರನಾಥ್ ದೇವಾಲಯದ ನಂತರ ಮಾತಾ ವೈಷ್ಣೋದೇವಿ ದರ್ಶನ ಪಡೆಯಲು ತೆರಳಿರುವ ಶಿಲ್ಪಾ ಶೆಟ್ಟಿ ಕಾಲ್ನಡಿಗೆಯಲ್ಲಿ ಬೆಟ್ಟವನ್ನ ಹತ್ತದೇ ಹೇಸರಗತ್ತೆಯ ಮೇಲೆ ಕುಳಿತು ಹೋಗಿದ್ದಾರೆ. 

ಸದ್ಯಕ್ಕೆ ಹೇಸರಗತ್ತೆ ಮೇಲೆ ಶಿಲ್ಪಾ ಶೆಟ್ಟಿ ಕುಳಿತ ವಿಡಿಯೋ ವೈರಲ್ ಆಗಿದೆ. ಇವರನ್ನ ಟ್ರೋಲ್ ಕೂಡ ಮಾಡಲಾಗುತ್ತಿದೆ. ಫಿಟ್ನೆಸ್‌ಗೆ ಹೆಸರುವಾಸಿಯಾದವರಿಂದ ನಡೆಯಲು ಸಾಧ್ಯವಾಗದೇ ಇರುವುದನ್ನ ನೋಡಿದರೆ ಅವರ ಫಿಟ್ನೆಸ್ ಮೇಲೆ ಅನುಮಾನ ಬರುತ್ತೆ ಎಂದು ಕೆಲವರು ಹೇಳಿದರೆ, ಯೋಗ ಮತ್ತು ಕಾರ್ಡಿಯೋ ಮಾಡಿ ಆದ ಪ್ರಯೋಜವಾದರೂ ಏನು ಅನ್ನುವ ಪ್ರಶ್ನೆಯನ್ನು ಕೂಡ ಶಿಲ್ಪಾಗೆ ಕೇಳುತ್ತಿದ್ದಾರೆ. ಇದೇನಾ ನಿಮ್ಮ ಯೋಗಾಯೋಗ ಎಂದು ಕಾಲೆಳೆಯುತ್ತಿದ್ದಾರೆ. ಸದ್ಯಕ್ಕೆ ಶಿಲ್ಪಾ ಶೆಟ್ಟಿಯವರ ವೈಷ್ಣೋದೇವಿ ಪ್ರವಾಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವ್ಯಾಪಕವಾಗಿ ಟ್ರೋಲ್ ಕೂಡ ಆಗ್ತಿದೆ.

Video Top Stories