
ಅಮ್ಮನಾಗ್ತಿರೋ ಕತ್ರಿನಾ.. ಅಪ್ಪನಾಗ್ತಾರಂತೆ ಸಲ್ಮಾನ್ ಖಾನ್: ಕಾಜೋಲ್ ಶೋನಲ್ಲಿ ಸಲ್ಲು ಬಿಚ್ಚಿಟ್ಟ ಗುಟ್ಟೇನು?
ಸಲ್ಮಾನ್ ಖಾನ್ಗೆ ಇದೇ ಡಿಸೆಂಬರ್ಗೆ 60 ವರ್ಷ ತುಂಬುತ್ತೆ. ಇದೂವರೆಗೂ ಮದುವೆಯೇ ಆಗದೇ ಉಳಿದುಕೊಂಡ ಸಲ್ಲುಮಿಯಾಗೆ ಮಕ್ಕಳನ್ನ ಹೊಂದಬೇಕು ಅನ್ನೋ ಆಸೆಯಾಗಿದೆಯಂತೆ.
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆಯಾಗದೇ ಉಳಿದಿರೋ ವಿಷ್ಯ ನಿಮಗೆಲ್ಲಾ ಗೊತ್ತೇ ಇದೆ. ಸಿಂಗಲ್ ಆಗೇ ಉಳಿದಿರೋ ಸಲ್ಲು ಈಗ ತಂದೆಯಾಗಬೇಕು ಅಂತ ಆಸೆ ಪಡ್ತಾ ಇದ್ದಾರಂತೆ. ಖುದ್ದು ಸಲ್ಮಾನ್ ಅತಿ ಶೀಘ್ರದಲ್ಲಿ ತಾನು ತಂದೆಯಾಗ್ತಿದ್ದೀನಿ ಅಂದಿದ್ದಾರೆ. ಯೆಸ್ ಇತ್ತೀಚಿಗಷ್ಟೇ ಕತ್ರಿನಾ ಕೈಫ್ ತಾವು ತಾಯಿಯಾಗ್ತಾ ಇರೋ ವಿಷ್ಯ ಹಂಚಿಕೊಂಡಿದ್ರು. ಈಗ ನೋಡಿದ್ರೆ ಕ್ಯಾಟ್ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ತಾನು ಅಪ್ಪನಾಗ್ತಾ ಇದ್ದೀನಿ ಅಂದಿದ್ದಾರೆ. ಹಾಗಂತ ತಪ್ಪು ತಿಳೀಬೇಡಿ. ಕತ್ರಿನಾ ಅಮ್ಮನಾಗ್ತಿರೋದಕ್ಕೂ ಸಲ್ಲು ಅಪ್ಪನಾಗ್ತಾ ಇರೋದಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ ಇತ್ತೀಚಿಗೆ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ನಡೆಸಿಕೊಡುವ ಶೋನದಲ್ಲಿ ಆಮೀರ್ ಜೊತೆ ಬಂದಿದ್ದ ಸಲ್ಮಾನ್, ನನಗೆ ಮಗು ಬೇಕು.. ಅತಿ ಶೀಘ್ರದಲ್ಲಿ ತಾನು ತಂದೆಯಾಗಲಿದ್ದೀನಿ ಅಂದಿದ್ದಾರೆ.
ಸಲ್ಮಾನ್ ಖಾನ್ಗೆ ಇದೇ ಡಿಸೆಂಬರ್ಗೆ 60 ವರ್ಷ ತುಂಬುತ್ತೆ. ಇದೂವರೆಗೂ ಮದುವೆಯೇ ಆಗದೇ ಉಳಿದುಕೊಂಡ ಸಲ್ಲುಮಿಯಾಗೆ ಮಕ್ಕಳನ್ನ ಹೊಂದಬೇಕು ಅನ್ನೋ ಆಸೆಯಾಗಿದೆಯಂತೆ. ಹಾಗಂತ ಸಲ್ಮಾನ್ ಈ ವಯಸ್ಸಲ್ಲಿ ಮದುವೆ ಮಾಡಿಕೊಂಡು ಮಕ್ಕಳನ್ನ ಮಾಡಿಕೊಳ್ಳೋ ಪ್ಲಾನ್ನಲ್ಲೇನು ಇದ್ದಂತಿಲ್ಲ. ಈ ಬಗ್ಗೆ ಪರ್ಯಾಯ ಆಯ್ಕೆಗಳನ್ನ ಸಲ್ಮಾನ್ ಹುಡುಕ್ತಾ ಇದ್ದಾರಂತೆ. ಸಲ್ಮಾನ್ ಮುಂದೆ ಎರಡು ಆಯ್ಕೆ ಇವೆ. ಒಂದು ಮಗುವನ್ನ ದತ್ತು ಪಡೆದುಕೊಂಡು ಸಾಕೋದು. ಅಥವಾ ಬಾಡಿಗೆ ತಾಯಿ ಮೂಲಕ ಮಗು ಮಾಡಿಕೊಳ್ಳೋದು. ಮದುವೆ ಆಗದೇ ಸಿಂಗಲ್ ಆಗಿದ್ದದವರು ಸರೋಗಸಿ ಮೂಲಕ ಮಕ್ಕಳು ಮಾಡಿಕೊಳ್ಳೋದು ಈಗೇನು ಹೊಸತಲ್ಲ.
ಗೇ ಆಗಿರೋ ಕರಣ್ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನ ಪಡೆದಿದ್ದಾರೆ. ಇತ್ತೀಚಿಗೆ ನಮ್ಮ ಕನ್ನಡ ನಟಿ ಭಾವನಾ ಮದುವೆಯಾಗದೇ ಐವಿಎಫ್ ಮೂಲಕ ಗರ್ಭಧರಿಸಿ ಮಗುವನ್ನ ಪಡೆದಿದ್ರು. ಸೋ ಸಲ್ಮಾನ್ ಕೂಡ ಇಂಥಾ ಯಾವುದೋ ಮಾರ್ಗ ಆಯ್ದುಕೊಂಡಿರಬಹುದು. ಅದಕ್ಕಂತ್ಲೇ ತಾನು ಅತಿ ಶೀಘ್ರದಲ್ಲಿ ಮಗುವನ್ನ ಪಡೀತಿನಿ ಅಂತ ಹೇಳಿದ್ದಾರೆ ಅಂತ ಬಾಲಿವುಡ್ ಅಂಗಳದಲ್ಲಿ ಜೋರು ಚರ್ಚೆಯಾಗ್ತಾ ಇದೆ. ಈ ಶೋನಲ್ಲಿ ಸಲ್ಮಾನ್ ತಮ್ಮ ಮುರಿದುಬಿದ್ದ ಸಂಬಂಧಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರಂತೆ. ಅಸಲಿಗೆ ಸುರಸುಂದರಾಂಗ ಸಲ್ಲು ಮಿಯಾ ಲೈಫ್ನಲ್ಲಿ ಬಂದ ಚೆಲುವೆಯರು ಒಬ್ಬಿಬ್ಬರಲ್ಲ.
1990ರ ದಶಕದಲ್ಲಿ ಸಂಗೀತಾ ಬಿಜಲಾನಿ ಜೊತೆಗೆ ಸಲ್ಮಾನ್ ಮದುವೆ ಕೂಡ ಫಿಕ್ಸ್ ಆಗಿತ್ತು. ಆದ್ರೆ ಅದು ಮುರಿದುಬಿದ್ದಿತ್ತು. ಇನ್ನೂ ಸಲ್ಮಾನ್-ಐಶ್ವರ್ಯ ಪ್ರೇಮಪ್ರಸಂಗವಂತೂ ಎಲ್ಲೆಡೆ ಗುಲ್ಲಾಗಿತ್ತು. ಆದ್ರೆ ಸಲ್ಮಾನ್ ಖಾನ್ರಿಂದ ದೂರವಾದ ಐಶ್ವರ್ಯ ಬಚ್ಚನ್ ಕುಟುಂಬದ ಯುವರಾಜನನ್ನ ವರಿಸಿದ್ರು. ಮುಂದೆ ಸಲ್ಮಾನ್ ಹೆಸರು ಕತ್ರಿನಾ ಸೇರಿದಂತೆ ಅನೇಕ ನಟಿಯರ ಜೊತೆಗೆ ಹರಿದಾಡ್ತು. ಆದ್ರೆ ಸಲ್ಮಾನ್ ಕೊನೆಗೂ ಅವಿವಾಹಿತನಾಗೇ ಉಳಿದುಬಿಟ್ರು. ಈಗ ಅಪ್ಪನಾಗ್ತಿನಿ ಅಂತ ಹೊರಟಿದ್ದಾರೆ. ಸಲ್ಲುಮಿಯಾ ಅಪ್ಪಯ್ಯ ಆಗ್ತಾ ಇರೋ ವಿಷ್ಯ ಸದ್ಯ ಬಾಲಿವುಡ್ ಅಂಗಳದಲ್ಲಿ ಜೋರು ಸದ್ದು ಮಾಡ್ತಾ ಇದೆ..!