ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan

ಬಾಲಿವುಡ್​​ ಬ್ಯಾಡ್ ಬಾಯ್ ಸಲ್ಲುಮಿಯಾ ಈಗ ಮೊದಲಿನ ಫಾರ್ಮ್​​ನಲ್ಲಿ ಇಲ್ಲ. ಈ ನಡುವೆ ಕೊಂಚ ದಪ್ಪಗಾಗಿ, ಹೊಟ್ಟೆ ಬೆಳೆಸಿಕೊಂಡಿದ್ದ ಸಲ್ಲುನ ಎಲ್ಲರೂ ತಮಾಷೆ ಮಾಡೋದಕ್ಕೆ ಶುರುಮಾಡಿದ್ರು. ಆಧ್ರೆ ಸಲ್ಲು ನಿಂಗ್ ವಯಸ್ಸಾಯ್ತೋ ಅಂತ ಕಾಲೆಳೆದವರಿಗೆ ಸಲ್ಮಾನ್ ಟಾಂಗ್ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

60 ರ ಹರೆಯದಲ್ಲೂ ಸಿಕ್ಸ್​ ಪ್ಯಾನ್ ಮಾಡಿ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್ ನ ಹ್ಯಾಂಡಸಮ್ ಹಂಕ್, 1990ರ ದಶಕದ ಯುವತಿಯರ ಕನಸಿನ ರಾಜಕುಮಾರ, ಟೈಗರ್ ಸಲ್ಲು ಮಿಯಾಗೆ ಈಗ ವಯಸ್ಸು 60. ವಯೋಸಹಜವಾಗಿ ಸಲ್ಲು ಕೊಂಚ ದಪ್ಪಗಾಗಿದ್ರು. ಮೊದಲಿಂದಲೂ ಫಿಟ್ ಌಂಡ್ ಫೈನ್ ಆಗಿ ಕಾಣ್ತಿದ್ದ ಸಲ್ಲುಗೆ ಇತ್ತೀಚಿಗೆ ಕೊಂಚ ಹೊಟ್ಟೆ ಕೂಡ ಬಂದು, ಟಮ್ಮಿ ಫ್ಯಾಟ್ ಎದ್ದು ಕಾಣ್ತಾ ಇತ್ತು. 

ಇದನ್ನ ನೋಡಿದವರು ಸಲ್ಲುಮಿಯಾನ ರೇಗಿಸೋಕೆ ಶುರುಮಾಡಿದ್ರು. ಮೊದಲೇ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್​​ನಲ್ಲಿ ಸದ್ದು ಮಾಡ್ತಾ ಇಲ್ಲ. ಈ ನಡುವೆ ಅವರ ಲುಕ್ ಕೂಡ ಬದಲಾಗಿದ್ದನ್ನ ನೋಡಿ, ಸಲ್ಲು ನಿಂಗ್ ವಯಸ್ಸಾಯ್ತೋ ಅಂತ ಎಲ್ಲರೂ ಕಾಲೆಳೆಯೋಕೆ ಶುರುಮಾಡಿದ್ರು.

Related Video