57ನೇ ವಸಂತಕ್ಕೆ ಕಾಲಿಟ್ಟ ಸಲ್ಮಾನ್ ಖಾನ್: ಬಾಲಿವುಡ್ 'ಬ್ಯಾಡ್ ಬಾಯ್' ಬಗ್ಗೆ ನಿಮಗೆಷ್ಟು ಗೊತ್ತು?

ಬಾಲಿವುಡ್ ನಟ ಸಲ್ಮಾನ್ ಖಾನ್ 57ನೇ ವಸಂತಕ್ಕೆ ಕಾಲಿಟ್ಟಿದ್ದು, ಸಲ್ಲು ಜನ್ಮದಿನವನ್ನು ವಿಶ್ವದಾದ್ಯಂತ ಇರೋ ಅಭಿಮಾನಿ ಬಳಗ, ಹಾಗೂ ಬಾಲಿವುಡ್ ಮಂದಿ ಸೆಲೆಬ್ರೇಟ್ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ಸಲ್ಮಾನ್ ಖಾನ್ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅದ್ದೂರಿಯಾಗಿ ಪಾರ್ಟಿ ಅರೇಂಜ್ ಮಾಡಿದ್ದು, ಬಾಲಿವುಡ್'ನ ಅನೇಕ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಹಾಜರಾಗಿದ್ರು. ಸಲ್ಮಾನ್ ಖಾನ್ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಸಲ್ಲುಗೆ 57 ವರ್ಷ ವಯಸ್ಸು. ಆದ್ರೆ ಇನ್ನು ಮದುವೆ ಆಗಿಲ್ಲ. ಬಟ್ ಗರ್ಲ್ ಫ್ರೆಂಡ್ಸ್ ವಿಷಯದಲ್ಲಿ ಸಲ್ಮಾನ್ ಗೆ ಸಲ್ಲುನೆ ಸಾಟಿ. ಸಂಜಯ್ ದತ್ ರನ್ನು ಬಿಟ್ರೆ ಸಲ್ಲುಗೆ ಅತಿ ಹೆಚ್ಚು ಗರ್ಲ್ ಪ್ರೆಂಡ್ಸ್ ಇರೋದು. ಗರ್ಲ್ಡ್ ಪ್ರೆಂಡ್ಸ್ ವಿಷಯದಲ್ಲಿ ವಿಶೇಷವಾಗಿ ಕಾಣೋ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್, ಎಲ್ಲಾ ತರಹದ ಖಾದ್ಯಗಳನ್ನ ಇಷ್ಟ ಪಡುತ್ತಾರೆ. ಆದ್ರೆ ಚೈನೀಸ್ ಫುಡ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಸಲ್ಮಾನ್ ಖಾನ್ ಅದ್ಭುತ ಬರಹಗಾರನೂ ಹೌದು. ಸೂಪರ್ ಆಗಿರೋ ಕಥೆ ಬರಿತಾರೆ ಸಲ್ಲು. ಇದಕ್ಕೆ ಬೆಸ್ಟ್ ಎಕ್ಸಾಂಪಲ್. ವೀರ್ ಹಾಗೂ ಚಂದ್ರಮುಖಿ ಸಿನಿಮಾಗೆ ಸಲ್ಮಾನ್ ಖಾನ್ ಅವರೇ ಕಥೆ ಬರೆದಿದ್ರು. ಹೀಗೆ ಹುಡುಕ್ತಾ ಹೋದ್ರೆ ಸಲ್ಲು ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳು ಸಿಗುತ್ತೆ.

Related Video