ಜಸ್ಟ್ ಜಿಲೇಬಿಗಾಗಿ ರಣರಂಗವಾಯ್ತು ದೊಡ್ಮನೆ! ಆಟಕ್ಕಾಗಿ ಮಾನವೀಯತೆ ಮರೆತವರಿಗೆ ಕಿಚ್ಚನ ಪಾಠ ಹೇಗಿತ್ತು ನೋಡಿ
ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟು. ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆ. ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ. ಹರಟೆ, ತಮಾಷೆ ಜೊತೆ, ಜೊತೆಗೆ ನೈಜ ಆಟದ ಪಾಠ. ತಪ್ಪು ಮಾಡಿ ವಾದಿಸಿದೋರು ತಪ್ಪಾಯ್ತೆಂದು ಕೈ ಮುಗಿದ್ರು. ಚರ್ಚೆ ಸಾಕೆಂದವರಿಗೆ ಸುದೀಪ್ ಕೊಟ್ಟಿದ್ದು ಮುಟ್ಟಿ ನೋಡಿಕೊಳ್ಳುವ ಮಾತಿನ ಪೆಟ್ಟು. ವೀಕೆಂಡ್ ನಲ್ಲಿ ಕಿಚ್ಚನ ಕಟಕಟೆಯಲ್ಲಿ ಏನೆಲ್ಲಾ ನಡೀತು ನೋಡ್ಕೊಂಡ್ ಬರೋಣ ಬನ್ನಿ.
ಈ ವಾರ ನಡೆದ ಮಹಾರಾಜ ಯುವರಾಣಿ ಟಾಸ್ಕ್ ಮನೆ ಮಂದಿ ನಡುವೆ ದೊಡ್ಡ ಒಡಕನ್ನೇ ಸೃಷ್ಟಿ ಮಾಡಿದೆ. ಅದರಲ್ಲೂ ಮಂಜು - ಮೋಕ್ಷಿತಾ ನಡುವೆ ಯುದ್ಧನೆ ನಡೀತಿದೆ. ಹಾಗಾದ್ರೆ ಈ ಟಾಸ್ಕ್, ಮತ್ತದರ ಕಿರಿಕ್ ಬಗ್ಗೆ ಕಿಚ್ಚ ಕೊಟ್ಟ ತೀರ್ಪು ಏನು?