Asianet Suvarna News Asianet Suvarna News

ಮಗಳು ಆರ್ಹಾ ಚಾಲೆಂಜ್‌ನಲ್ಲಿ ಸೋತ ಅಪ್ಪ ಅಲ್ಲು ಅರ್ಜುನ್!

ಸ್ಟೈಲೀಷ್‌ ಸ್ಟಾರ್ ಅಲ್ಲು ಅರ್ಜುನ್ ಮುದ್ದಿನ ಮಗಳು ಅರ್ಹಾ ಬಗ್ಗೆ ಬಿಡಿಸಿ ಹೇಳುವುದೇ ಬೇಕಾಗಿಲ್ಲ. ಅಲ್ಲು ಅರ್ಜುನ್ ಮಗಳಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಚಿಕ್ಕಂದಿನಿಂದಲೇ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಮಗಳನ್ನು ಸೆಲೆಬ್ರೆಟಿ ಮಾಡಿ ಬಿಟ್ಟಿದ್ದಾರೆ. 

Sep 22, 2022, 8:38 PM IST

ಸ್ಟೈಲೀಷ್‌ ಸ್ಟಾರ್ ಅಲ್ಲು ಅರ್ಜುನ್ ಮುದ್ದಿನ ಮಗಳು ಅರ್ಹಾ ಬಗ್ಗೆ ಬಿಡಿಸಿ ಹೇಳುವುದೇ ಬೇಕಾಗಿಲ್ಲ. ಅಲ್ಲು ಅರ್ಜುನ್ ಮಗಳಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಚಿಕ್ಕಂದಿನಿಂದಲೇ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಮಗಳನ್ನು ಸೆಲೆಬ್ರೆಟಿ ಮಾಡಿ ಬಿಟ್ಟಿದ್ದಾರೆ. ತಂದೆ ಮಗಳ ತುಂಟಾಟಗಳನ್ನು ವೀಡಿಯೋ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಆ ಮೂಲಕ ಮಗಳನ್ನು ಕೂಡ ಅಭಿಮಾನಿಗಳಿಗೆ ಹತ್ತಿರ ಮಾಡ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ತನ್ನ ಮಗಳ ಜೊತೆ ಆಟದಲ್ಲಿ ಸೋತಿದ್ದು, ಆ ಕ್ಯೂಟ್ ವೀಡಿಯೋ ವೈರಲ್ ಆಗುತ್ತಿದೆ. ಮಗಳು ಅರ್ಹಾ ಒಂದು ಒಗಟನ್ನು ಹೇಳಿದ್ದು ಅದನ್ನು ಅಲ್ಲು ಅರ್ಜುನ್ ಬಿಡಿಸಿದ್ದಾರೆ. ಇದನ್ನು ಕೇಳಿ ಅಚ್ಚರಿಕೊಂಡ ಆಕೆ ಇದು ನಿಂಗೆ ಹೇಗೆ ಗೊತ್ತು ಅಂತ ಕೇಳಿದ್ದಾಳೆ. ಎಲ್ಲಾ ನನಗೆ ಗೊತ್ತು ಎಂದು ಬನ್ನಿ ಉತ್ತರ ಕೊಟ್ಟಿದ್ದಾರೆ. ನಂತರ ಅರ್ಹಾ ಟಂಗ್ ಟ್ವಿಸ್ಟರ್ ಚಾಲೆಂಜ್ ಕೊಟ್ಟಿದ್ದಾಳೆ. ಆಕೆ ಕೊಟ್ಟ ಸಾಲನ್ನು ಮತ್ತೆ ಮತ್ತೆ ಹೇಳಲು ಅಲ್ಲು ಅರ್ಜುನ್ ವಿಫಲವಾಗಿದ್ದಾರೆ. ಅಲ್ಲಿಗೆ ಚಾಲೆಂಜ್‌ನಲ್ಲಿ ಮಗಳೇ ಗೆದ್ದಂತಾಗಿದೆ. ಸದ್ಯ ಇವರಿಬ್ಬರ ಈ ಕ್ಯೂಟ್ ಮೊಮೆಂಟ್ ವಿಡಿಯೋ ಅಭಿಮಾನಿಗಳ ಮನ ಗೆದ್ದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment