Asianet Suvarna News Asianet Suvarna News

Pushpa-2: ಪುಷ್ಪಾ 2ಗೆ ಅಲ್ಲೂ ಅರ್ಜುನ್ ಸಂಭಾವನೆ ಇಷ್ಟೊಂದಾ ? ರಜನಿ, ಪ್ರಭಾಸ್‌ರನ್ನೇ ಮೀರಿಸಿ ಇಷ್ಟು ಕೋಟಿ ತಗೊಂಡ್ರಾ?

ಸದ್ಯ ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಪುಷ್ಪ-2ಗೆ ಅಲ್ಲೂ ಅರ್ಜುನ್ ಪಡೆದ ಸಂಭಾವನೆ ಕೇಳಿದ್ರೆ ಒಮ್ಮೆಗೆ ಬೆಚ್ಚಿಬೀಳಿಸುವಂತಿದೆ.
 

ಪುಷ್ಪಾ ಸಿನಿಮಾ ತಗ್ಗೇದೇಲೆ ಡೈಲಾಗ್ ಹೇಳ್ತಾ ತನ್ನ ಮ್ಯಾನರಿಸಂನನ್ನೇ ಬದಲಾಯಿಸಿಕೊಂಡ ಅಲ್ಲು ಅರ್ಜುನ್(Allu Arjun) ನಟನೆಗೆ ಇಡೀ ಭಾರತೀಯ ಚಿತ್ರರಂಗ ಫಿದಾ ಆಗಿದೆ. ರಾಷ್ಟ್ರ ಪ್ರಶಸ್ತಿಯೂ ಅಲ್ಲೂ ಅರ್ಜುನ್‌ರನ್ನ ಹುಡುಕಿಕೊಮಡು ಬಂದಾಗಿದೆ. ಸುಕುಮಾರ್ ನಿರ್ದೇಶನದ ಪುಷ್ಪಾ-2(Pushpa-2) ಮೂವಿಯಿಂದ ಅಲ್ಲು ಅರ್ಜುನ್ ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಪುಷ್ಪ-2 ಸಿನಿಮಾ ನಿರ್ಮಾಣ ಮಾಡಲು ಒಟ್ಟು 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಶೇ.33 ರಷ್ಟು ಅಲ್ಲು ಅರ್ಜುನ್ ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಈ ಸಿನಿಮಾಕ್ಕಾಗಿ ಬರೋಬ್ಬರಿ 330 ಕೋಟಿ ರೂಪಾಯಿಗಳ ಸಂಭಾವನೆಯನ್ನು(Remuneration) ಬನ್ನಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸೂಪರ್ ಸ್ಟಾರ್ ರಜಿನಿಕಾಂತ್ ಸಂಭಾವನೆಯನ್ನೂ ಹಿಂದಿಕ್ಕಿದೆ. ಅಲ್ಲು ಅರ್ಜುನ್ ಪುಷ್ಪಾ-1 ಸಿನಿಮಾಕ್ಕಾಗಿ ಕೇವಲ 50 ಕೋಟಿ ರೂಪಾಯಿಗಳನ್ನು ಮಾತ್ರ ಪಡೆದಿದ್ದರು. ಆದರೆ ಭಾಗ ಒಂದು ಸೂಪರ್ ಹಿಟ್ ಆದ ನಂತರ ಭಾಗ-2ಗೆ ದೊಡ್ಡ ಮಟ್ಟದಲ್ಲಿ ನಿರ್ದೇಶಕ ಪ್ಲಾನ್ ಮಾಡಿದ್ದರು. ಅದರಂತೆ ಅಲ್ಲು ಅರ್ಜುನ್ ಪಡೆಯುತ್ತಿರುವ ಸಂಭಾವನೆ ಇಡೀ ಭಾರತದಲ್ಲೇ ಎಲ್ಲ ನಟರನ್ನು ಮೀರಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಇಲ್ಲಿವರೆಗೆ ಇಡೀ ಇಂಡಿಯಾದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಲಿಸ್ಟ್‌ನಲ್ಲಿ ಮೊದಲಿಗರು ಆಗಿದ್ದರು. ಅಂದರೆ ರಜನಿಕಾಂತ್ ಅವರು 210 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ಇನ್ನುಳಿದಂತೆ ಡಾರ್ಲಿಂಗ್ ಪ್ರಭಾಸ್, ಸಲ್ಮಾನ್ ಖಾನ್ ಮತ್ತು ಶಾರುಕ್ ಖಾನ್ 150 ರಿಂದ 200 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ಆದರೆ ಇದೀಗ ಅಲ್ಲು ಅರ್ಜುನ್ 330 ಕೋಟಿ ರೂ.ಗಳನ್ನ ಪಡೆಯುವ ಮೂಲಕ ಎಲ್ಲರನ್ನೂ ಮೀರಿಸಿ  ಟಾಪ್‌ನಲ್ಲಿ ಕುಂತಿದ್ದಾರೆನ್ನಲಾಗಿದೆ.

ಇದನ್ನೂ ವೀಕ್ಷಿಸಿ:  Sanju Weds Geetha 2: ಸಂಜು ವೆಡ್ಸ್ ಗೀತಾ2 ಸಿನಿಮಾದ ಶೂಟಿಂಗ್ ಕೆಲಸ ಪೂರ್ಣ! ಡಬ್ಬಿಂಗ್ ಆರಂಭ

Video Top Stories