Asianet Suvarna News Asianet Suvarna News

ಐಶ್ವರ್ಯಾ ರೈ ಒಡವೆಗಳು ಹರಾಜಿಗೆ; ಹೇಗಿದೆ ನೋಡಿ ಆ ಜ್ಯುವೆಲ್ಲರಿಗಳು

 ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಬಳಸಿದ್ದ ಜ್ಯುವೆಲ್ಲರಿಗಳನ್ನು ಹರಾಜಿಗೆ ಇಟ್ಟಿದೆಯಂತೆ ಸಿನಿಮಾತಂಡ. 

Oct 4, 2022, 4:09 PM IST

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾರೈ ಸದ್ಯ ಪೊನ್ನಿಯನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ನಂದಿನಿ ಪಾತ್ರದಲ್ಲಿ ಮಿಂಚಿದ್ದಾರೆ. ಅನೇಕ ವರ್ಷಗಳ ಬಳಿಕ ಐಶ್ವರ್ಯಾ ಐತಿಹಾಸಿಕ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ಪೊನ್ನಿಯನ್ ಸೆಲ್ವನ್ ನೋಡಿ ಮೆಚ್ಚಿಕೊಂಡಿದ್ದಾರೆ. ಸದ್ಯ ಈ ಸಿನಿಮಾದಲ್ಲಿ ಬಳಸಿದ್ದ ಜ್ಯುವೆಲ್ಲರಿಗಳನ್ನು ಹರಾಜಿಗೆ ಇಟ್ಟಿದೆಯಂತೆ ಸಿನಿಮಾತಂಡ. ಈ ಸಿನಿಮಾಗಾಗಿ ಬರೋಬ್ಬರಿ 400ಕ್ಕೂ ಅಧಿಕ ಒಡವೆಗಳನ್ನು ಬಳಸಲಾಗಿದೆ. ಇದೀಗ ಈ ಎಲ್ಲಾ ಒಡವೆಗಳನ್ನು ಹರಾಜಿಗೆ ಇಟ್ಟಿದೆ ಸಿನಿಮಾತಂಡ.