ದಕ್ಷಿಣದ ಸಿನಿಮಾಗಳಿಂದ ನಲುಗಿರುವ ಬಾಲಿವುಡ್‌ಅನ್ನು ಮೇಲೆತ್ತಲು ಶಾರುಖ್ ಮಾಸ್ಟರ್ ಪ್ಲಾನ್

ದಕ್ಷಿಣ ಭಾರತೀಯ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿ ಹೋಗಿದೆ. ದಕ್ಷಿಣದ ಸಿನಿಮಾಗಳು ಒಂದರ ಹಿಂದೊಂದು ಬಾಲಿವುಡ್ ನಲ್ಲಿ ಆರ್ಭಟಿಸುತ್ತಿವೆ. ಪುಷ್ಪ, ಆರ್ ಆರ್ ಆರ್ ಇದೀಗ ಕೆಜಿಎಫ್-2. ಕಂಗಾಲಾಗಿರುವ ಬಾಲಿವುಡ್ ಅನ್ನು ಮತ್ತೆ ಮೇಲೆತ್ತಲು ಕಿಂಗ್ ಖಾನ್ ಶಾರುಖ್ ಖಾನ್ ಪ್ಲಾನ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ದಕ್ಷಿಣ ಭಾರತೀಯ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿ ಹೋಗಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಕೊಂಚ ಚೇತರಿಸಿಕೊಂಡಿರುವ ಬಾಲಿವುಡ್ ಕಮ್ ಬ್ಯಾಕ್ ಮಾಡಲು ಹರಸಾಹಸ ಪಡುತ್ತಿದೆ. ದಕ್ಷಿಣದ ಸಿನಿಮಾಗಳು ಒಂದರ ಹಿಂದೊಂದು ಬಾಲಿವುಡ್ ನಲ್ಲಿ ಆರ್ಭಟಿಸುತ್ತಿವೆ. ಪುಷ್ಪ, ಆರ್ ಆರ್ ಆರ್ ಇದೀಗ ಕೆಜಿಎಫ್-2. ಕಂಗಾಲಾಗಿರುವ ಬಾಲಿವುಡ್ ಅನ್ನು ಮತ್ತೆ ಮೇಲೆತ್ತಲು ಕಿಂಗ್ ಖಾನ್ ಶಾರುಖ್ ಖಾನ್ ಪ್ಲಾನ್ ಮಾಡಿದ್ದಾರೆ. ದಕ್ಷಿಣ ಭಾರತೀಯ ಅಬಿಮಾನಿಗಳನ್ನು ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ. ಹಾಗಾಗಿ ತಮಿಳು ನಿರ್ದೇಶಕ ಅಟ್ಲೀ ಜೊತೆ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಪಠಾಣ್ ಮುಗಿಸಿರುವ ಶಾರುಖ್ ಅಟ್ಲೀ ಸಿನಿಮಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video